ನಾದ ಬ್ರಹ್ಮ ಹಂಸಲೇಖ ಅವರ ಮಕ್ಕಳು ಹೇಗಿದ್ದಾರೆ ಗೊತ್ತಾ ? ಮಾಡುತ್ತಿರುವುದೇನು ನೋಡಿ..

Cinema Uncategorized
Advertisements

ಸ್ಯಾಂಡಲ್ವುಡ್ ನ ನಾದ ಬ್ರಹ್ಮ ಅಂತಲೇ ಖ್ಯಾತರಾಗಿದ್ದಾರೆ ಸಂಗೀತ ನಿರ್ದೇಶಕ ಹಾಗು ಗೀತ ರಚನಕಾರ ಹಂಸಲೇಖ ಅವರು. ತಮ್ಮ ಮನೋಹರವಾದ ಸಂಗೀತದಿಂದ ಕನ್ನಡ ಚಿತ್ರರಂಗವನ್ನ ಮತ್ತೊಂದು ಹತ್ತಕ್ಕೆ ಬೆಳೆಯುವಂತೆ ಮಾಡಿದವರು ಹಂಸಲೇಖ ಎಂದರೆ ತಪ್ಪಾಗಲಾರದು. ಜಾನಪದ ಹಾಗೂ ಸಿನಿಮಾ ಹಾಡುಗಳನ್ನ ರಚಿಸುವುದರಲ್ಲಿ ಸೈ ಎನಿಸಿಕೊಂಡಿರುವ ಹಂಸಲೇಖ ಅವರು ಜನಿಸಿದ್ದು ಜೂನ್ ೨೩, ೧೯೫೧ ಮೈಸೂರಿನಲ್ಲಿ. ಇನ್ನು ಇವರ ಮೂಲ ನಾಮಧೇಯ ಗಂಗರಾಜು ಎಂದು. ೧೯೭೩ರಲ್ಲಿ ತೆರೆ ಕಂಡ ತ್ರಿವೇಣಿ ಎಂಬ ಚಿತ್ರದ ನೀನಾ ಭಗವಂತ ಎಂಬ ಹಾಡನ್ನ ರಚಿಸುವುದರ ಮೂಲಕ ಚಂದನವನಕ್ಕೆ ಎಂಟ್ರಿ ಕೊಡುತ್ತಾರೆ.

[widget id=”custom_html-4″]

Advertisements

ಇನ್ನು ಕ್ರೇಜಿಸ್ಟಾರ್ ನಟ ರವಿಚಂದ್ರನ್ ಅವರ ಅಭಿನಯದ ಸೂಪರ್ ಹಿಟ್ ಚಿತ್ರ ಪ್ರೇಮಲೋಕ ಸಿನಿಮಾಕ್ಕಾಗಿ ಸಂಗೀತ ನಿರ್ದೇಶನ ಮಾಡಿದ ಹಂಸಲೇಖ ಅವರು ಮತ್ತೆ ತಿರುಗಿ ನೋಡಿದ್ದೇ ಇಲ್ಲ. ಪ್ರೇಮಲೋಕ ಚಿತ್ರದ ಹಾಡುಗಳು ಎಷ್ಟರ ಮಟ್ಟಿಗೆ ಫೇಮಸ್ ಆಗಿವೆ ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಇದರ ಬಳಿಕ ನಟ ರವಿಚಂದ್ರನ್ ಅವರು ಅಭಿನಯಿಸಿದ್ದ ೮೦ ಹಾಗೂ ೯೦ರ ಬಹುತೇಕ ಸಿನಿಮಾಗಳ್ಲಲಿ ಹಂಸಲೇಖ ಅವರ ಸಂಗೀತ ನಿರ್ದೇಶನ ಮಾಡಿದ್ದು ವಿಶೇಷ. ಹೌದು, ಸಿನಿಮಾವೊಂದನ್ನ ಹಾಡುಗಳಿಂದಲೇ ಗೆಲ್ಲಿಸುವ ತಾಕತ್ತು ಹಂಸಲೇಖ ಅವರ ಸಂಗೀತ ಹಾಗೂ ಸಾಹಿತ್ಯದಲ್ಲಿತ್ತು. ಅವರ ಹಾಡುಗಳನ್ನ ಕೇಳಿತ್ತಿದ್ದರೆ ಮನಸ್ಸಿಗೆ ಅದೇನೋ ಹಿತವೆನಿಸಿದೆ ಇರಲಾರದು. ಇನ್ನು ಹಂಸಲೇಖ ಅವರು ಕೇವಲ ಸಾಹಿತ್ಯ, ಸಂಗೀತಕ್ಕೆ ಮಾತ್ರ ಮೀಸಲಾಗಿರದೆ ಕೆಲ ಚಿತ್ರಗಳಲ್ಲಿ ಕಥೆ, ಸಂಭಾಷಣೆಕಾರ, ಹಾಗೂ ಗಾಯಕರಾಗಿಯೂ ಕೆಲಸ ಮಾಡಿದ್ದಾರೆ.

[widget id=”custom_html-4″]

ಕನ್ನಡದ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಹಂಸಲೇಖ ಅವರು ಕೇವಲ ಕಾನಂದ ಸಿನಿಮಾಗಳಿಗೆ ಮಾತ್ರವಲ್ಲದೆ, ಮಲಯಾಳಂ, ತೆಲುಗು ಹಾಗೂ ತಮಿಳು ಚಿತ್ರಗಳಿಗೂ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಜಾನಪದ ಸಾಹಿತ್ಯದ ಬಗ್ಗೆಯೂ ಕೂಡ ಅಪಾರ ಒಲವು ಹಂಸಲೇಖ ಅವರಿಗೆ. ೧೯೯೦ರಲ್ಲಿ ಲತಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಹಂಸಲೇಖ ಅವರು. ಇನ್ನು ಲತಾ ಅವರೂ ಕೂಡ ಖ್ಯಾತ ಗಾಯಕರಾಗಿದ್ದಾರೆ. ಇನ್ನು ಈ ದಂಪತಿಗೆ ಒಂದು ಗಂಡು ಮತ್ತು ಇಬ್ಬರು ಹೆಣ್ಣು ಸೇರಿ ಮೂರು ಜನ ಮಕ್ಕಳಿದ್ದಾರೆ. ಹೆಣ್ಣುಮಕ್ಕಳ ಹೆಸರು ನಂದಿನಿ, ತೇಜಸ್ವಿನಿ ಹಾಗೂ ಪುತ್ರನ ಹೆಸರು ಅಂಲಂಕಾರ್ ಎಂದು. ಇನ್ನು ಇವರು ಕೂಡ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದು ಮೂರೂ ಜನ ಮಕ್ಕಳು ಕೂಡ ಗಾಯಕರಾಗಿದ್ದಾರೆ. ಒಟ್ಟಿನಲ್ಲಿ ಹಂಸಲೇಖ ಅವರ ಇಡೀ ಕುಟುಂಬವೇ ಕಲಾಸೇವೆಯಲ್ಲಿ ತೊಡಗಿಸಿಕೊಂಡಿರುವುದು ವಿಶೇಷ..