ಈ ಗಿಡ ಎಲ್ಲೇ ಕಾಣಿಸಿದ್ರೂ ಖಂಡಿತ ಬಿಡಬೇಡಿ ! ಯಾಕೆ ಗೊತ್ತಾ ?

Health
Advertisements

ರಾಸ್ ಬೆರಿ ಹಣ್ಣು ಇಂಗ್ಲಿಷ್ ನಲ್ಲಿ ಗೋಲ್ಡನ್ ಬೆರಿ ಹಣ್ಣು ಅಂತಲೂ ಕರೆಯುತ್ತಾರೆ. ಮಳೆಗಾಲದಲ್ಲಿ ಮಾತ್ರ ಬೆಳೆಯುವ ಈ ಹಣ್ಣು ಭಾರತದ ಎಲ್ಲಾ ಪ್ರಾಂತ್ಯಗಳಲ್ಲೂ ಸಹ ಬೆಳೆಸಬಹುದಾಗಿದೆ. ಈ ರಾಸ್ ಬೆರಿ ಗಿಡವು ಒಂದರಿಂದ ಮೂರು ಅಡಿ ಎತ್ತರವಿದ್ದು ಮಾರುಕಟ್ಟೆಯಲ್ಲಿ ಈ ಹಣ್ಣಿನ ಬೆಲೆಯಾಗಲಿ ಹಣ್ಣಿನ ಎಲೆಯ ಚಿಗುರಿನ ಬೆಲೆಯಾಗಲಿ ತುಂಬಾನೇ ದುಬಾರಿ. ಇನ್ನು ಇದು ಲೈಟ್ ಯಲ್ಲೋ ಕಲರ್ ನಲ್ಲಿ ಇರುತ್ತೆ. ಈ ಹಣ್ಣಿನ ಪ್ರತ್ಯೇಕತೆ ಅಂದರೆ ಈ ಹಣ್ಣು ಬಂದ ಮೇಲೆ ಅದರ ಮೇಲೆ ಒಂದು ಶೆಲ್ಫ್ ಬರುತ್ತೆ. ಈ ಶೆಲ್ಫ್ ಹಣ್ಣಿಗೆ ರಕ್ಷಣೆ ಮಾಡುವಂತೆ ಭಾಸವಾಗುತ್ತೆ.

ಇನ್ನು ಈ ಹಣ್ಣನ್ನು ಒಂದೊಂದು ಪ್ರಾಂತ್ಯಗಳಲ್ಲಿ ಒಂದೊಂದು ರೀತಿಯಾಗಿ ಕರೆಯುತ್ತಾರೆ. ಅಂದ ಹಾಗೆ ಪಂಜಾಬ್ ನಲ್ಲಿ ಈ ಹಣ್ಣಿನಿಂದ ವಿವಿಧ ಖಾದ್ಯಗಳನ್ನ ಮಾಡಲಾಗುತ್ತೆ. ಇನ್ನು ರಾಸ್ ಬೆರಿ ಹಣ್ಣಿನಿಂದ ಅನೇಕ ಆಯುರ್ವೇದದ ಔಷಧಿಗಳನ್ನ ತಯಾರು ಮಾಡುತ್ತಾರೆ. ಇದರ ಎಲೆಗಳಲ್ಲಿ ಪಾಸ್ಪರಸ್ ವಿಟಮಿನ್ ಸಿ, ವಿಟಮಿನ್ ಎ ಹೇರಳವಾಗಿ ಲಭಿಸುತ್ತೆ. ಈ ರಾಸ್ ಬೆರಿ ಹಣ್ಣನ್ನ ತಿನ್ನೋದ್ರಿಂದ ಲಿವರ್ ಗೆ ಸಂಬಂದಿಸಿದ ಕಾಯಿಲೆಗಳಿಂದ ದೂರ ಇರಬಹುದು.

ಹೊಟ್ಟೆನೋವು ಇರುವಾಗ ಇದರ ಎಲೆಗಳನ್ನ ಬಿಸಿನೀರಿನಿಂದ ಪೌಡರ್ ಮಾಡಿ ಒಂದು ಬಟ್ಟೆಯಲ್ಲಿ ಕಟ್ಟಿ ಎದೆ ಮೇಲೆ ಇಲ್ಲವೇ ಹೊಟ್ಟೆಯ ಮೇಲೆ ಇಟ್ಟುಕೊಳ್ಳೋದ್ರಿಂದ ಹೊಟ್ಟೆನೋವು ಬಹುಬೇಗ ಕಡಿಮೆಯಾಗುತ್ತೆ. ಇನ್ನು ಈ ಹಣ್ಣಿನ ಎಲೆಯಲ್ಲಿರುವ ಆಂಟಿಬಯೋಟಿಕ್ ಗುಣಗಳು ದೇಹದ ಹಲವಾರು ನೋವುಗಳಿಗೆ ನಿವಾರಕವಾಗಿದೆ. ಇಷ್ಟೆಲ್ಲಾ ಪ್ರಯೋಜನಗಳನ್ನ ಹೊಂದಿರುವ ರಾಸ್ ಬೆರಿ ಗಿಡವನ್ನ ಎಲ್ಲಿ ಸಿಕ್ಕರೂ ಬಿಡಲೇಬೇಡಿ.