ಏನಿದು ಹೆಲಿಕಾಪ್ಟರ್ ಮನಿ?ಮೇಲಿನಿಂದ ಹಣ ಹಾಕುತ್ತಾರಾ?ನಮ್ಮ ದೇಶದಲ್ಲಿ ಇದು ಆಗುತ್ತಾ.?

News

ಕೊರೋನಾ ಸೋಂಕು ಹಿನ್ನಲೆಯಲ್ಲಿ ಇಡೀ ದೇಶದಾದ್ಯಂತ ಲಾಕ್ ಡೌನ್ ಆಗಿದೆ. ಎಲ್ಲಾ ವ್ಯವಹಾರಗಳು ನಿಂತು ಹೋಗಿದ್ದು ಭಾರತದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಿದ್ದು ಆರ್ಥಿಕ ಪರಿಸ್ಥಿತಿ ತೀರಾ ತಳಮಟ್ಟಕ್ಕೆ ಕುಸಿದುಬಿಟ್ಟಿದೆ. ಇದೇ ವೇಳೆ ಹೆಲಿಕಾಪ್ಟರ್ ಮನಿಯನ್ನ ಜಾರಿ ಮಾಡಿದ್ರೆ ಆರ್ಥಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬರಬಹುದು ಎಂಬುದರ ಚರ್ಚೆಗಳು ಶುರುವಾಗಿವೆ.

ಈಗಿರುವ ಪರಿಸ್ಥಿತಿಯಲ್ಲಿ ಆರ್ಥಿಕತೆಯನ್ನ ಧಿಡೀರ್ ಮೇಲೆತ್ತುವುದು ಆಗದ ಕೆಲಸ. ಹೆಲಿಕಾಪ್ಟರ್ ಮನಿಯನ್ನ ಜಾರಿಗೆ ತರುವುದೇ ಇದಕ್ಕಿರುವ ಪರಿಹಾರ ಎಂದು ತೆಲಂಗಾಣ ಸಿಎಂ ಕೆಸಿಆರ್ ಕೇಂದ್ರಕ್ಕೆ ಸಲಹೆ ನೀಡಿದ್ದಾರೆ. ಹಾಗಾದ್ರೆ ಏನಿದು ಹೆಲಿಕಾಪ್ಟರ್ ಮನಿ.? ಹೆಲಿಕಾಪ್ಟರ್ ನಿಂದ ಹಣ ಉದುರಿಸುತ್ತಾರಾ ಎಂಬ ಪ್ರಶ್ನೆ ಹಳವೇಡೆ ಜೋರಾಗಿ ಚರ್ಚೆಯಾಗುತ್ತಿದೆ.

ನಿಜ ಅರ್ಥದಲ್ಲಿ ಹೇಳಬೇಕೆಂದರೆ ಹೆಲಿಕಾಪ್ಟರ್ ಮನಿಯೆಂದರೆ ಮೇಲಿನಿಂದ ಹಣ ಉದುರಿಸೋದಲ್ಲ..ಹೆಚ್ಚಿನ ನೋಟುಗಳನ್ನ ಮುದ್ರಿಸಿ ಜನರಿಗೆ ಮಾಡುವುದು ಇದರ ಹಿಂದೆ ಇರುವ ಉದ್ದೇಶವಾಗಿದೆ. ಇನ್ನು ಇದರ ಪ್ರಕಾರ RBI ಹೆಚ್ಚಿನ ಪ್ರಮಾಣದಲ್ಲಿ ಹಣ ಮುದ್ರಿಸಿ ಕೇಂದ್ರ ಸರ್ಕಾರಕ್ಕೆ ಕೊಡುವುದು. ಬಳಿಕ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಹಣ ನೀಡಿ ಜನರಿಗೆ ತಲುಪಿಸುವಂತೆ ಮಾಡಬೇಕು. ಹೀಗೆ ಈ ರೀತಿ ಹಣದ ಹೊಳೆ ಹರಿಸುವುದು. ಆಗ ಜನರಲ್ಲಿ ಹಣ ಹೆಚ್ಚಾಗಿ ವ್ಯವಹಾರಗಳು ಕೂಡ ಹೆಚ್ಚಾಗುತ್ತವೆ. ಇನ್ನು ವ್ಯವಹಾರಗಳು ಹೆಚ್ಚಾಗುತ್ತಿದ್ದಾನೆ ಆರ್ಥಿಕತೆ ಮೇಲೆಕ್ಕೆ ಬರುತ್ತೆ ಎಂಬ ಲೆಕ್ಕಾಚಾರ ಇದೆ ಎಂದು ಹೇಳಲಾಗಿದೆ.

ಆದರೆ ಎಷ್ಟೋ ಬೇಕೋ ಅಷ್ಟು ನೋಟುಗಳನ್ನ ಪ್ರಿಂಟ್ ಮಾಡುವ ಹಾಗಿಲ್ಲ. ಅದಕ್ಕೂ ನೀತಿ ನಿಯಮಗಳಿವೆ. ಭಾರಿ ಪ್ರಮಾಣದಲ್ಲಿ ಹಣ ಮುದ್ರಿಸಿದ್ರೆ ದಿನನಿತ್ಯದ ವಸ್ತುಗಳ ಬೆಲೆಯೂ ಹೆಚ್ಚಾಗುತ್ತದೆ. ರೂಪಾಯಿ ಮೌಲ್ಯ ಕಡಿಮೆಯಾಗಿ ಹಣದುಬ್ಬರ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಲಾಗಿದೆ. ಇನ್ನು ಈ ಹೆಲಿಕಾಪ್ಟರ್ ಮನಿಯನ್ನ ಬೇರೆ ಯಾವುದಾದ್ರೂ ದೇಶದಲ್ಲಿ ಜಾರಿಗೆ ತಂದಿದ್ರಾ?ಬಳಿಕ ಏನಾಯ್ತು.?

ಹೌದು, ಈ ಹೆಲಿಕಾಪ್ಟರ್ ಮನಿಯನ್ನ ಜಿಂಬಾಬ್ವೆ ಮತ್ತು ವೆನೆಜುವೆಲಾ ದೇಶಗಳಲ್ಲಿ ಜಾರಿಗೆ ತಂದಿದ್ದು ಆಗ ಬಾರೀ ಪ್ರಮಾಣದಲ್ಲಿ ಹಣವನ್ನ ಮುದ್ರಿಸಲಾಗಿತ್ತು. ಹಣ ಕೂಡ ಭಾರೀ ಪ್ರಮಾಣದಲ್ಲಿ ಜನರ ಕೈ ಸೇರಿತ್ತು. ಇದರ ಪರಿಣಾಮ ಧಿಡೀರನೆ ವಸ್ತುಗಳ ಬೆಲೆ ಏರಿಕೆಯಾಗಿತ್ತು. ಇದರಿಂದ ಸೋಪು, ಪೇಸ್ಟ್ ಸೇರಿದಂತೆ ದಿನನಿತ್ಯದ ಆಹಾರ ಪದಾರ್ಥಗಳನ್ನ ಖರೀದಿಸಲು ಅಲ್ಲಿನ ಜನರು ಗಾಡಿಗಳಲ್ಲಿ ಮೂಟೆಗಟ್ಟಲೆ ಹಣವನ್ನ ಹೊತ್ತುಕೊಂಡು ಬೇಕಾದ ಪರಿಸ್ಥಿತಿ ಬಂದಿತ್ತು. ಆದರೆ ಇದು ನಮ್ಮ ದೇಶದಲ್ಲಿ ಸಾಧ್ಯವೇ ಎಂಬುದರ ಬಗ್ಗೆ ಚರ್ಚೆಗಳಾಗುತ್ತಿವೆ.