ಹಗ್ ಮಾಡೋದು ಹೇಗಂತ ನಟನ ಬಳಿ ಕೇಳಿದ್ದ ಅಮೆರಿಕಾ ಅಮೆರಿಕಾ ನಟಿ 2 ಮದ್ವೆಯಾಗಿದ್ದೇಕೆ ಗೊತ್ತಾ? ಗಂಡ ಯಾರು ಏನ್ ಮಾಡ್ತಿದ್ದಾರೆ ನೋಡಿ..

Cinema
Advertisements

ನಟಿ ಹೇಮಾ ಪ್ರಭಾತ್. ಅಮೆರಿಕಾ ಅಮೆರಿಕಾ ಸಿನಿಮಾ ಮೂಲಕವೇ ಬಹಳಷ್ಟು ಪ್ರಖ್ಯಾತಿ ಹೊಂದಿದವರು. ಈ ಸಿನಿಮಾದಲ್ಲಿ ಬಬ್ಲಿ ಬಬ್ಲಿಯಾಗಿ ಕಾಣಿಸಿಕೊಂಡು ಇಬ್ಬರು ಹುಡುಗರಿಗೆ ಒಬ್ಬಳೇ ನಾಯಕಿಯಾಗಿ ನಟಿಸಿದವರು ಈ ಹೇಮಾ ಪ್ರಭಾತ್. 1981ರಲ್ಲಿ ಹುಣಸೂರು ಕೃಷ್ಣಮೂರ್ತಿ ಅವರ ಸಲಹೆ ಮೇರೆಗೆ ಭಕ್ತ ಜ್ಞಾನದೇವ ಸಿನಿಮಾದಲ್ಲಿ ಜ್ಞಾನದೇವನ ತಂಗಿಯಾಗಿ ಪಾತ್ರ ನಿರ್ವಹಿಸಿದ್ರು. ಈ ಮೂಲಕ ಬಾಲನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ತದನಂತರ 10 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ. ಬಳಿಕ ಅಮೆರಿಕಾ ಅಮೆರಿಕಾ, ಜೀವನಚೈತ್ರ, ಗೋಲಿಬಾರ್, ರವಿಮಾಮ, ಬಂಗಾರದ ಮನೆ, ಸಂಭ್ರಮ, ದೊರೆ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಹೇಮಾ ಅವರು ನಟಿಸಿದ್ದಾರೆ.

[widget id=”custom_html-4″]

Advertisements

ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ನಟನೆಯ ದೊರೆ ಸಿನಿಮಾದಲ್ಲಿ ನಟಿ ಹೇಮಾ ಪ್ರಭಾತ್ ಒಬ್ಬ ಮುಕ್ತ ಹುಡುಗಿಯಾಗಿ ನಟಿಸಿ, ಆ ಸಿನಿಮಾ ಸಹ ತುಂಬಾ ಹಿಟ್ ಆಯ್ತು. ದೊರೆ ಸಿನಿಮಾದಲ್ಲಿ ಹಗ್ ಮಾಡೋ ಸೀನ್ ಒಂದಿತ್ತು. ಈ ವೇಳೆ ಹೇಗೆ ಹಗ್ ಮಾಡಿಕೊಳ್ಳುವುದು ಅಂತ ಗೊತ್ತಿಲ್ಲ, ಡೈರೆಕ್ಟರ್ ಕೇಳಲು ಮುಜುಗರವಾಗಿ, ಹೇಮಾ ಅವರು ಸೀದಾ ಶಿವಣ್ಣ ಬಳಿಯೇ ಹೋಗಿ ಹಗ್ ಮಾಡೋದು ಹೇಗೆ ಅಂತ ಕೇಳಿದ್ದರಂತೆ. ಇದಕ್ಕೆ ಶಿವರಾಜ್ ಕುಮಾರ್ ತುಂಬಾ ನಕ್ಕಿದ್ದರಂತೆ. ಹೀಗಂತ ಸ್ವತಃ ನಟಿ ಹೇಮಾ ಪ್ರಭಾತ್ ಅವರೇ ಸುದ್ದಿವಾಹಿನಿಗೆ ನೀಡಿರೋ ಸಂದರ್ಶದಲ್ಲಿ ಹೇಳಿಕೊಂಡಿದ್ದಾರೆ. ನಟ ರಮೇಶ್ ಅರವಿಂದ್ ಮೀಸೆ ಅಂದ್ರೆ ನಟಿ ಹೇಮಾಗೆ ತುಂಬಾ ಇಷ್ಟ ಇತ್ತಂತೆ. ಹೀಗಾಗಿ, ಅಮೆರಿಕಾ ಅಮೆರಿಕಾ ಸಿನಿಮಾ ಆಫರ್ ಬಂದ ತಕ್ಷಣವೇ ಹಿಂದೆ ಮುಂದೆ ನೋಡದೇ ದಿಢೀರ್ ಅಂತ ಒಪ್ಪಿಕೊಂಡಿದ್ರಂತೆ. ಆದ್ರೆ, ಆ ಸಿನಿಮಾದಲ್ಲಿ ನಟ ರಮೇಶ್ ಗೆ ಮೀಸೆ ಇರದಿದ್ದನ್ನ ಕಂಡು ನಟಿ ಹೇಮಾಗೆ ತುಂಬಾ ಬೇಸರವಾಗಿತ್ತಂತೆ.

[widget id=”custom_html-4″]

ಇನ್ನ ನಟಿ ಹೇಮಾ ಅವರ ವೈವಾಹಿಕ ಜೀವನವನ್ನ ನೋಡೋದಾದ್ರೆ, ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ ದಿಢೀರ್ ಅಂತ ನಟಿ ಹೇಮಾ ಅವರು, 1999 ರಲ್ಲಿ ಸ್ವಮೇಂದ್ರ ಅವರನ್ನ ವಿವಾಹವಾಗ್ತಾರೆ. ನಂತರ ಕೆಲವು ವರ್ಷಗಳ ವಿದೇಶದಲ್ಲಿ ನೆಲಸಿ, ನಂತರ ಪತಿಯಿಂದ ದೂರವಾಗ್ತಾರೆ. ತದನಂತರ ಸ್ವದೇಶಕ್ಕೆ ವಾಪಾಸ್ಸಾಗಿ, ಮತ್ತೊಮ್ಮೆ ರಂಗೋಲಿ ಸಿನಿಮಾದಲ್ಲಿ ನಟಿಸಿದ್ದ ನಾಯಕ ಪ್ರಶಾಂತ್ ಅವರನ್ನ ಮರು ಮದುವೆಯಾಗ್ತಾರೆ. ತದನಂತರ ಬೆಂಗಳೂರಿನಲ್ಲಿ ಸುಕೃತಿ ಎಂಬ ನಾಟ್ಯಶಾಲೆಯನ್ನ ನಡೆಸುತ್ತಿದ್ದಾರೆ. ಎರಡನೇ ಮದುವೆಯಾದ ಬಳಿಕ ನಟಿ ಹೇಮಾ ಅವರು, ತಮ್ಮ ಹೆಸರು ಹೇಮಾ ಪಂಚಮುಖಿಯಿಂದ ಹೇಮಾ ಪ್ರಭಾತ್ ಅಂತ ಬದಲಾಯಿಸಿಕೊಳ್ತಾರೆ. ಸದ್ಯ ನಾಟ್ಯಕಲಾವಿದರಾಗಿ ಮಕ್ಕಳಿಗೆ ನಾಟ್ಯವನ್ನ ನಟಿ ಹೇಮಾ ಪ್ರಭಾತ್ ಅವರು ಕಲಿಸುತ್ತಿದ್ದಾರೆ.