ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ವೀವ್ಸ್ ಪಡೆದು ದಾಖಲೆ ಬರೆದ ಸಾಂಗ್ ಯಾವುದು ಗೊತ್ತಾ ?

Cinema
Advertisements

ಖರಾಬು…ಬಾಸು ಖರಾಬು.. ಈ ಖಡಕ್ಕಾಗಿರೋ ಸಾಂಗ್ ಯಾರು ಕೇಳಿಲ್ಲ ಹೇಳಿ..? ಯಾವ ಟೆಂಪೋ, ಬಸ್ಸು, ಆಟೋ, ಕಾರು, ಹೋಟೆಲ್, ಅಂಗಡಿಗಳು ಹೀಗೆ ಎಲ್ಲಿ ನೋಡಿದ್ರು ಖರಾಬು ಸೌಂಡ್ ದೇ ದರ್ಬಾರ್. ತೊಟ್ಟಿಲಲ್ಲಿ ಇರೋ ಎಳೆ ಕೂಸಿನಿಂದ ಹಿಡಿದು ಹಣ್ ಹಣ್ ಆಗಿರೋ ಅಜ್ಜಪ್ಪ ಕೂಡ ಈ ಸಾಂಗ್ ಗೆ ಪಂಚೆ ಕಟ್ಟಿ ಎರಡು ಹೆಜ್ಜೆ ಹಾಕಿ ಕುಣಿದು ಬಿಡೋಣ ಅಂತಿದ್ರು. ಇದು ಸ್ಯಾಂಡಲ್ ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯಿಸಿದ ಪೊಗರು ಸಿನಿಮಾದ ಹಾಡು. ಅಧ್ಯಕ್ಷ, ರನ್ನ, ಮುಕುಂದ ಮುರಾರಿಯಂತಹ ಕಮರ್ಷಿಯಲ್ ಒರಿಯಂಟಲ್ ಸಿನಿಮಾಗಳನ್ನ ನಿರ್ದೇಶಿಸಿದ್ದ ಕ್ಲಾಸಿಕ್ ಡೈರೆಕ್ಟರ್ ನಂದ ಕಿಶೋರ್ ಈ ಚಿತ್ರದ ಸೂತ್ರದಾರಿ. ನಂದ ಕಿಶೋರ್ ಕನಸಿಗೆ ಧ್ರುವ ಹೀರೋ ಆಗಿ ಅಬ್ಬರಿಸಿದ್ರೆ, ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ , ಧ್ರುವ ಸರ್ಜಾ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.

[widget id=”custom_html-4″]

Advertisements

ಸಂಪ್ರದಾಯಸ್ಥರ ಕುಟುಂಬದ ಮಗಳಾಗಿ ರಶ್ಮಿಕಾ ಮಂದಣ್ಣ ಕ್ಯಾರೆಕ್ಟರ್ ರೋಲ್ ಮಾಡಿದ್ರೆ, ಅದ್ಧೂರಿ, ಬಹುದ್ದೂರ್, ಭರ್ಜರಿ ಚಿತ್ರಗಳಲ್ಲಿ ಕ್ಯೂಟು, ಸ್ವೀಟು, ಘಾಟಾಗಿ ಮಿಂಚಿದ್ದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಪೊಗರು ಫಿಲ್ಮ್ ನಲ್ಲಿ ಬಾಡಿ ಬಿಲ್ಡ್ ಮಾಡಿ, ಗಡ್ಡ ಕೂದಲು ಬಿಟ್ಟು ಮಾಸ್ ಲುಕ್ ನಲ್ಲಿ ಖಡಕ್ಕಾಗಿ ಕಾಣಿಸಿಕೊಂಡಿದ್ದರು. ಇಲ್ಲಿ ವಿಷ್ಯ ಮತ್ತು ವಿಶೇಷ ಏನಪ್ಪ ಅಂದ್ರೆ ರಶ್ಮಿಕಾ ಮಂದಣ್ಣ ಹಾಗೂ ಧ್ರುವ ಸಜ್೯ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಖರಾಬು ಸಾಂಗ್ ಸೋಷಿಯಲ್ ಮೀಡಿಯಾ ಹಾಗೂ ಯೂಟೂಬ್ ನಲ್ಲಿ ಭರ್ಜರಿಯಾಗಿ ಧೂಳೆಬ್ಬಿಸ್ತಿದೆ. ಕನ್ನಡ ಸ್ಟಾರ್ ರ್ಯಾಪರ್ ಚಂದನ್ ಶೆಟ್ಟಿ ಕಿಕ್ಕು ಕೊಡೋ ರೀತಿ ಲಿರಿಕ್ಕು ಬರೆದು, ಮ್ಯುಸಿಕ್ಕೂ ಸೇರಿಸಿ ತಾವೇ ಹಾಡಿ ಚಿಂದಿ ಉಡಾಯಿಸಿಬಿಟ್ಟಿದ್ರೆ, ಧ್ರುವ ಸರ್ಜಾರ ಮೈನವಿರೆಳಿಸೋ ಬೊಂಬಾಟ್ ಸ್ಟೆಪ್ಸ್, ಅಭಿಮಾನಿಗಳನ್ನ ಹುಚ್ಚೆಂದು ಕುಣಿಯುವಂತೆ ಮಾಡಿದೆ. ಧ್ರುವ ಸರ್ಜಾ ಹಾಗೂ ಚಂದನ್ ಶೆಟ್ಟಿ ಜೋಡಿಯ ಈ ರಗಡ್ ಗೀತೆ ಯೂ ಟೂಬ್ ನಲ್ಲಿ ಬಿಡುಗಡೆಯಾಗಿ 250 ಮಿಲಿಯನ್ ಗೂ ಅಧಿಕ ಬಾರಿ ವೀಕ್ಷಣೆ ಪಡೆದು ಬೇರೆ ಲೆವೆಲ್ ಹಾಡು ಅನ್ನೋ ಮಟ್ಟಿಗೆ ರೆಕಾರ್ಡ್ ಮಾಡಿ ಮುನ್ನುಗ್ಗುತ್ತಿದೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ವೀವ್ಸ್ ಪಡೆದ ಮೊದಲ ಸಾಂಗ್ ಎಂಬ ಹಿರಿಮೆಗೆ ಪೊಗರು ಚಿತ್ರ ತಮ್ಮದಾಗಿಸಿಕೊಂಡಿದೆ.

[widget id=”custom_html-4″]

ಕೇವಲ ಕನ್ನಡಿಗರು ಮಾತ್ರವಲ್ಲದೇ, ಬೇರೆ ಭಾಷೆಯವರು ಹೆಚ್ಚೆಚ್ಚು ಬಾರಿ ವೀಕ್ಷಿಸಿ, ವಾಹ್ ಅಂತಿದಾರೆ. ಖರಾಬು ಹಾಡಿನ ಯಶಸ್ಸು ಧ್ರುವ ಸರ್ಜಾ ಕೆರಿಯರ್ ನಯಾ ಮೈಲಿಗಲ್ಲಾದ್ರೆ, ರ್ಯಾಪರ್ ಕಮ್ ಮ್ಯೂಸಿಕ್ ಡೈರೆಕ್ಟರ್ ಚಂದನ್ ಶೆಟ್ಟಿ ಲೈಫ್ ಗೆ ಟರ್ನಿಂಗ್ ಪಾಯಿಂಟ್ ಆಗಿದ್ದಂತೂ ಸುಳ್ಳಲ್ಲ. ಖರಾಬು ಸಾಂಗ್ ಫಸ್ಟ್ ಪ್ಲೆಸ್ ನಲ್ಲಿ ರನ್ ಆಗ್ತಿದ್ರೆ, ಶರಣ್ ಹಾಗೂ ಆಶಿಕಾ ಜೋಡಿ ನಟಿಸಿದ್ದ ರ್ಯಾಂಬೋ 2 ಚಿತ್ರದ ಚುಟು ಚುಟು ಅಂತೈತಿ ಹಾಡು ಕೂಡ 142 ಮಿಲಿಯನ್ ವೀಕ್ಷಣೆ ಪಡೆಯುವ ಮೂಲಕ ಪಡ್ಡೆ ಹೈಕಳ ಮನಗೆದ್ದು 150 ಮಿಲಿಯನ್ ವಿವ್ಸ್ ನತ್ತ ಮುನ್ನುಗ್ಗುತ್ತಿದೆ. ಇನ್ನು ಚಂದನ ಶೆಟ್ಟಿ ರ್ಯಾಪ್ ಲೈಫ್ ದಿಕ್ಕು ಬದಲಾಯಿಸಿದ, ಪಬ್, ಬಾರ್ ಗಳಲ್ಲಿ ಸಕತ್ ಸೌಂಡ್ ಮಾಡ್ತಿರುವ ಮೂರೇ ಮೂರು ಪೆಗ್ಗಿಗೆ ಸಾಂಗ್ ಯೂಟೂಬ್ ನಲ್ಲಿ 107 ಮಿಲಿಯನ್ ವೀವ್ಸ್ ಮೂಲಕ 3ನೇ ಸ್ಥಾನದಲ್ಲಿದೆ. ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯ ಕಿರಿಕ್ ಪಾರ್ಟಿ ಸಿನಿಮಾದ ಬೆಳೆಗೆದ್ದು ಯಾರ ಮುಖವ ನಾನು ನೋಡಿದೆ ಹಾಡು 103 ಮಿಲಿಯನ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸಿದ್ದ ಅಂಜನಿಪುತ್ರ ಚಿತ್ರದ ಚಂದ ಚಂದ ನನ್ ಹೆಂಡ್ತಿ ಸಾಂಗ್ 98 ಮಿಲಿಯನ್ ವೀಕ್ಷಣೆ ಪಡೆದು ಯೂ ಟೂಬ್ ನಲ್ಲಿ ಜನ ಮೆಚ್ಚುಗೆಗೆ ಕಾರಣವಾಗ್ತಿವೆ.