ತಲೆ ನೋವು ನಮ್ಮನ್ನು ಸತತವಾಗಿ ಕಾಡುವಂತ ಖಾಯಿಲೆ.ಈ ತಲೆ ನೋವು ಬರಲು ಕೆಲವಂದು ಪ್ರಮುಖ ಅಂಶಗಳಿಂದ ಬರುತ್ತದೆ. ಈ ತಲೆ ನೋವು ಅನ್ನೋದು ಸಹಜವಾಗಿ ಪದೇ ಪದೇ ಎಲ್ಲರನ್ನು ಕಾಡುವ ನೋವು. ತಲೆ ನೋವು ಬರಲು ಅನೇಕ ಕಾರಣಗಳಿವೆ. ಶಬ್ಧ ಮಾಲಿನ್ಯ,ಒತ್ತಡ, ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡೋದರಿಂದ, ನಿದ್ರೆಯ ಕೊರತೆ, ಒಳ್ಳೆಯ ಆಹಾರ ಕ್ರಮ ಇಲ್ಲದೆ ಇರುವುದು, ಊಟದ ಸಮಯದಲ್ಲಿ ಏರು ಪೇರು, ತಾಸು ಗಟ್ಟಲೆ ಫೋನ್ನಲ್ಲಿ ಮಾತಾಡುವುದು, ಹೀಗೆ ಅನೇಕ ಕಾರಣಗಳ ಮೇಲೆ ಕಾರಣಗಳು ಸಿಗುತ್ತಾ ಹೋಗುತ್ತವೆ. ಈ ತಲೆ ನೋವು ಅತೀ ಕಮ್ಮಿ ಸಮಯದಲ್ಲಿ ಕಮ್ಮಿಯಾಗಲಿ ಎಂಬ ಆತುರದಿಂದ ಒಂದಷ್ಟು ಮಾತ್ರೆಗಳನ್ನು ನುಂಗಿ ಬಿಡುತ್ತೇವೆ.
ಮಾತ್ರೆಗಳಿಂದ ಆ ಕ್ಷಣ ಪರಿಹಾರ ಸಿಕ್ಕರೂ, ಮತ್ತೆ ಅದು ಮರುಕಳಿಸಿ ಉಲ್ಬಣವಾಗುತ್ತದೆ ಆದರೆ ಮನೆ ಮದ್ದುಗಳಿಂದ ಯಾವ ರೀತಿ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ. ಈ ರೀತಿಯ ಚಿಕ್ಕ ಪುಟ್ಟ ನೋವುಗಳಿಗೆ ನಾವು ಮಾತ್ರೆಗಳ ಮೇಲೆ ಅವಲಂಬಿತವಾಗದೆ ಮನೆಯಲ್ಲಿ ಸುಲಭವಾಗಿ ತಲೆ ನೋವನ್ನು ಕಮ್ಮಿ ಮಾಡಿಕೊಳ್ಳಬಹುದು. ಇನ್ನು ತೆಲೆ ನೋವಿಗೆ ಮನೆಯಲ್ಲಿಯೇ ಔಷದಿಯನ್ನು ಕಂಡೂಕೊಳ್ಳುವುದು ಹೇಗೆ ಎಂದು ತಿಳಿಯಿರಿ. ಹಾಗಾದರೆ ಐದು ನಿಮಿಷಗಳಲ್ಲಿ ಅದೆಂತಹ ಭಯಂಕರ ತೆಲೆ ನೋವೇ ಇದ್ದರು ಈ ಪರಿಹಾರದಿಂದ ಬೇಗನೆ ಮುಕ್ತಿಹೊಂದಬಹುದು.

ದಿನ ನಿತ್ಯ ನಾವು ಮನೆಯಲ್ಲಿ ಬಳಸುವ ಸಾಮಗ್ರಿಗಳಿಂದಲೇ ತೆಲೆನೋವು ಗುಣಮುಖವಾಗುತ್ತದೆ, ಅದು ಹೇಗೆ ಎಂದರೆ. ಈ ತೆಲೆ ನೋವಿಗೆ ಪರಿಹಾರ, ಹಸಿ ಶುಂಠಿ. ಇದು ಪ್ರತಿ ಮನೆಯಲ್ಲಿ ಸಿಗುವ ಸಾಮಗ್ರಿ. ಶುಂಠಿಯನ್ನು ಚನ್ನಾಗಿ ನೀರಿನಲ್ಲಿ ತೊಳೆದು ಸಿಪ್ಪೆಯನ್ನು ಒಂದಷ್ಟು ಬಿಡದೆ ತೆಗೆಯಿರಿ. ಈ ಶುಂಠಿ ತೆಲೆ ನೋವಿಗೆ ಒಂದು ರಾಮ ಬಾಣವಿದಂತ್ತೆ.ಶುಂಠಿಯಲ್ಲಿನ ಔಷದೀಯ ಗುಣಗಳು ಇರುವುದರಿಂದ ಕೆಲವೇ ನಿಮಿಷಗಳಲ್ಲಿ ತೆಲೆ ನೋವು ಮಾಯವಾಗುತ್ತದೆ. ಸಿಪ್ಪೆ ತೆಗೆದ ಶುಂಠಿಯನ್ನು ನೀರಿನಲ್ಲಿ ಮತ್ತೊಮ್ಮೆ ಚೆನ್ನಾಗಿ ತೊಳೆದು, ಎಷ್ಟು ಸಣ್ಣದಾಗಿ ಸಾಧ್ಯವೊ ಅಷ್ಟು ಸಂದಾಗಿ ತುಂಡು ಮಾಡಿಕೊಳ್ಳಿ. ಒಂದು ಟೀ ಸ್ಪೂನ್ ಅಷ್ಟು ನಿಂಬೆ ಹಣ್ಣಿನ ರಸವನ್ನು ತುಂಡು ಮಾಡಿದ ಶುಂಠಿಗೆ ಬೆರೆಸಿಕೊಳ್ಳಿ. ನೆಂಬೆಹಣ್ಣಿನಲ್ಲಿರುವ ಆಂಟಿ ಒಕ್ಸಿಡೆಂಟ್ ಗುಣಗಳು ತೆಲೆ ನೋವನ್ನು ಬೇಗ ಕಮ್ಮಿ ಮಾಡುವಲ್ಲಿ ಉಪಯುಕ್ತ.

ಇದಾದ ನಂತರ ಕಾಲು ಚಮಚ ಉಪ್ಪು ಅಥವ ಎರಡು ಚಿಟಿಕೆಯಷ್ಟು ಉಪ್ಪನ್ನು ಇರೊಂದಿಗೆ ಸೇರಿಸಿಕೊಳ್ಳಿ. ಚೆನ್ನಾಗಿ ಕಲೆಸಿ ಎರಡು ಗಂಟೆ ಬಿಸಿಲಿನಲ್ಲಿ ಇಟ್ಟು ತೆಲೆನೋವು ಬಂದಾಗ ಉಪಯೋಗಿಸಿ. ಇದನ್ನು ಹೇಗೆ ಉಪಯೋಗಿಸುವುದು ಎಂದರೆ, ಯಾವಾಗ ನಿಮಗೆ ತೆಲೆ ನೋವು ಕಾಣಿಸಿಕೊಳುತ್ತದೆ ಆಗ ಮಾಡಿಟ್ಟ ಈ ಶುಂಠಿ ಮಿಶ್ರಣವನ್ನು ತೆಗೆದು, ಅದರಲ್ಲಿನ ಒಂದು ಅಥವ ಎರಡು ತುಂಡು ಶುಂಠಿಯನ್ನು ಚನ್ನಾಗಿ ಅಗೆದರೆ ತೆಲೆನೋವು ಐದೇ ನಿಮಿಷದಲ್ಲಿ ಮಾಯವಾಗಿ ಬಿಡುತ್ತದೆ. ಹೀಗೆ ಮಾಡಿಟ್ಟ ಮಿಶ್ರಣವನ್ನು ಹದಿನೈದರಿಂದ ಇಪ್ಪತ್ತು ದಿನಗಳ ಕಾಲ ಇಟ್ಟು ಅಗತ್ಯ ವಿದ್ದಾಗ ಬಳೆಸಿಕೊಳ್ಳಬಹುದು.