ಪೋಷಕಾಂಶಗಳ ಆಗರವೇ ತುಂಬಿರುವ ಈ ದೋಸೆಯನ್ನು ಒಮ್ಮೆ ನೀವು ಮಾಡಲೇ ಬೇಕು..ಮಾಡೋದು ಹೇಗೆ ನೋಡಿ..

Kannada News

ಆರೋಗ್ಯ ಚೆನ್ನಾಗಿ ಇರಬೇಕೆಂದು ಏನೆಲ್ಲಾ ಮಾಡುತ್ತೇವೆ..ಯಾವೆಲ್ಲ ಆಹಾರ ಸೇವಿಸುತ್ತೇವೆ ಕಾಳು ಕಡ್ಡಿ ತರಕಾರಿ ಏನೆಲ್ಲಾ ತಿಂದರೂ ಪ್ರಯೋಜನಕ್ಕೆ ಬರುವುದಿಲ್ಲ. ಕಾರಣ ನಾವು ಅವನ್ನು ಚೆನ್ನಾಗಿ ಬೇಯಿಸಿ ತಿನ್ನುತ್ತೇವೆ. ಹಾಗಂತ ತಿಂಡಿ ಊಟಾಕ್ಕೆ ಹಸಿ ತರಕಾರಿ ನೆನೆಸಿದ ಕಾಳುಗಳನ್ನ ತಿನ್ನಲು ಕೆಲವರಿಗೆ ಸಾಧ್ಯವಾಗುವುದಿಲ್ಲ. ಇನ್ನೂ ಕೆಲವರಿಗೆ ಸೇರುವುದಿಲ್ಲ. ಅದಕ್ಕೆ ಉಪಾಯ ಇಲ್ಲಿದೆ ನೋಡಿ..

ಪೋಷಕಾಂಶ ತುಂಬಿದ ದೋಸೆ ಮಾಡಲು ಬೇಕಾದ ಪದಾರ್ಥಗಳು : ಒಂದು ಕಪ್ ಹೆಸರು ಕಾಳು,
ಒಂದು ಕಪ್ ಕಡಲೆ ಕಾಳು, ಅರ್ಧ ಕಪ್ ಅಕ್ಕಿಯನ್ನು, ಚೆನ್ನಾಗಿ ತೊಳೆದು ಆರರಿಂದ ಎಂಟು ಗಂಟೆಗಳ ಕಾಲ ನೆನೆಸಿ. ಇದಕ್ಕೆ ಎರಡು ಹಸಿ ಮೆಣಸಿನಕಾಯಿ, ಕರಿಬೇವು ಸೊಪ್ಪು ಸೇರಿಸಿ ಚೆನ್ನಾಗಿ ರುಬ್ಬಿ. ದೋಸೆ ತವದ ಮೇಲೆ ದೋಸೆಯನ್ನು ಬರೆದು ಅದರ ಮೇಲೆ ತುಂಬಾ ಸಣ್ಣಗೆ ಹಚ್ಚಿದ ಈರುಳ್ಳಿ, ಹಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ದೋಸೆ ತಯಾರಿಸಿ. ಇದನ್ನು ನಿಮಗೆ ಇಷ್ಟವಾದ ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಿರಿ.

ಸಾಮಾನ್ಯವಾಗಿ ಸಾಂಬಾರ್ ಅಥವಾ ತಿಂಡಿ ಮಾಡುವಾಗ ತರಕಾರಿ ಹಾಗೂ ಕಾಳುಗಳನ್ನು ನಾವು ಚೆನ್ನಾಗಿ ಬೇಯಿಸುತ್ತೇವೆ. ಇದರಿಂದ ಅದರಲ್ಲಿರುವ ವಿಟಮಿನ್ ಸೇರಿದಂತೆ ಮೊದಲಾದ ಅಗತ್ಯ ಪೋಷಕಾಂಶಗಳು ನಾಶವಾಗಿ ಕೇವಲ ಕ್ಯಾಲೋರಿ ಮಾತ್ರ ಆಹಾರದಲ್ಲಿ ಉಳಿದಿರುತ್ತದೆ. ಇಂತಹ ಆಹಾರ ಸೇವನೆ ಆರೋಗ್ಯಕ್ಕೆ ಮಾರಕ. ಇಂತಹ ದೋಸೆ, ಹಸಿ ತರಕಾರಿ, ಮೊಳಕೆ ಕಟ್ಟಿದ ಕಾಳಗಳನ್ನು ನಮ್ಮ ಆಹಾರದಲ್ಲಿ ಸೇರಿಸಿ ತಿನ್ನುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಜೊತೆಗೆ ಮಕ್ಕಳಲ್ಲಿ ಬೆಳವಣಿಗೆ ಸರಿಯಾಗಿ ಆಗಲು ಸಹಕಾರಿ. ಹಲವು ರೋಗಗಳ ನಿವಾರಣೆಗೂ ಈ ಪೋಷಕಾಂಶಗಳ ಆಗರವೇ ತುಂಬಿರುವ ದೋಸೆ ಬಹಳ ಉಪಕಾರಿಯಾಗಿದೆ