ನಿಮ್ಮ ದೇಹದ ಉಷ್ಣವನ್ನು ತಕ್ಷಣವೇ ತಗ್ಗಿಸಲು ಇಲ್ಲಿದೆ ಸುಲಭ ಉಪಾಯ..ಇದನ್ನ ತಪ್ಪದೆ ಕುಡಿಯಿರಿ..

Health
Advertisements

ಕೆಲವರದು ಉಷ್ಣ ಶರೀರ. ದೇಹದ ಅಧಿಕ ಉಷ್ಣತೆಯಿಂದಾಗಿ ಅನೇಕ ತೊಂದರೆಗಳು ಎದುರಾಗುತ್ತವೆ. ಬಾಯಿಯಲ್ಲಿ ಹು’ಣ್ಣಾಗುವುದು, ವಿಪರೀತ ತಲೆನೋವು, ಮಲ ಮೂತ್ರ ವಿಸರ್ಜನೆ ಮಾಡುವಾಗ ಉರಿ, ತಲೆ ಸುತ್ತುವುದು ಹೀಗೆ ಹತ್ತು ಹಲವು ಸಮಸ್ಯೆಗಳು ಉಲ್ಬಣಗೊಳ್ಳುತ್ತದೆ. ಇದಕ್ಕೆ ಇಲ್ಲವೇ ಅದ್ಭುತ ಪರಿಹಾರ.

[widget id=”custom_html-4″]

ಜೀರಿಗೆ ನೀರು : ಒಂದು ಕಪ್ ನೀರಿಗೆ ಕಲ್ಲು ಸಕ್ಕರೆ ಹಾಕಿ ಚೆನ್ನಾಗಿ ಕಲಕಿ. ಇದಕ್ಕೆ ಒಂದು ಚಮಚ ಜೀರಿಗೆ ಸೇರಿಸಿ. ಈ ಮಿಶ್ರಣವನ್ನು ಒಂದು ರಾತ್ರಿ ಬಿಡಿ. ಮರುದಿನ ಬೆಳಗ್ಗೆ ಇದನ್ನು ಕುಡಿಯಿರಿ. ಹೀಗೆ ಇದನ್ನು ಕುಡಿಯುತ್ತಾ ಬಂದರೆ ದೇಹದ ಉಷ್ಣತೆಯ ಸಮಸ್ಯೆ ನಿವಾರಣೆಯಾಗುತ್ತದೆ.

Advertisements

ಮಜ್ಜಿಗೆ : ಮಜ್ಜಿಗೆ ಉಷ್ಣ ಶರೀರದವರಿಗೆ ಸಂಜೀವಿನಿ. ದಿನವೂ ಊಟಾದ ವೇಳೆ ಅಥವಾ ಯಾವುದೇ ಸಮಯ ಮಜ್ಜಿಗೆ ಕುಡಿಯುವುದು ತುಂಬಾ ಒಳ್ಳೆಯದು. ಒಂದು ಕಪ್ ಮಜ್ಜಿಗೆಗೆ ಅರ್ಧ ಚಮಚ ತೊಳೆದು ಪುಡಿ ಮಾಡಿದ ಮೆಂತೆಯನ್ನು ಹಾಕಿ ಕುಡಿಯುವುದರಿಂದ ಶರೀರದ ಉಷ್ಣತೆ ಕಡಿಮೆಯಾಗುತ್ತದೆ. ಅಲ್ಲದೆ ಅಜೀರ್ಣ ಸಮಸ್ಯೆಗಳೂ ನಿವಾರಣೆಯಾಗುತ್ತವೆ.

[widget id=”custom_html-4″]

ಸಬ್ಜಾ : ಸಬ್ಜಾ ಅಥವಾ ಕಾ’ಮ ಕಸ್ತೂರಿ ಬೀಜವನ್ನು ನೀರಿನಲ್ಲಿ ಒಂದೆರೆಡು ಗಂಟೆ ನೆನೆಸಿ ಅದರ ನೀರನ್ನು ಕುಡಿಯುವುದರಿಂದ ದೇಹದ ಉಷ್ಣತೆ ಅತಿ ಬೇಗ ಕಡಿಮೆಯಾಗುತ್ತದೆ. ಆದರೆ ಮಹಿಳೆಯರು ಇದನ್ನು ಹೆಚ್ಚು ಉಪಯೋಗಿಸಬಾರದು. ಪುರುಷರು ಮತ್ತು ಮಕ್ಕಳು ಎಷ್ಟು ಬೇಕಾದರೂ ಬಳಸಬಹುದು.

ಅಲ್ಲದೆ ಉಷ್ಣ ಶರೀರ ಇರುವ ಜನರು ಉಷ್ಣತೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ. ಇಲ್ಲವಾದರೆ ಉರಿ ಮೂತ್ರ, ತುಟಿ ಒಣಗುವುದು, ಹೊಟ್ಟೆನೋವು, ಗಾಸ್ತ್ರಿಕ್ ಸಮಸ್ಯೆ, ಚರ್ಮ ಬಿರಿಯುವುದು ಮೊದಲಾದ ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ ಹೆಚ್ಚು ನೀರು ಕುಡಿಯಿರಿ, ನೀರಿನ ಅಂಶವಿರುವ ತರಕಾರಿ ಹಣ್ಣುಗಳನ್ನು ಅಧಿಕವಾಗಿ ಸೇವಿಸಬೇಕು. ಸೌತೆಕಾಯಿ, ಕಿತ್ತಳೆ ಹಣ್ಣು , ಕಲ್ಲಂಗಡಿ ಹಣ್ಣು ತುಂಬಾ ಒಳ್ಳೆಯದು. ಇದರ ಜೊತೆಗೆ ದಿನಾ ಮಜ್ಜಿಗೆ ಕುಡಿಯಿರಿ. ಹರಳೆಣ್ಣೆ ಯನ್ನ ನೆತ್ತಿಯ ಭಾಗಕ್ಕೆ ಹಚ್ಚುವುದರಿಂದಲೂ ದೇಹದ ಉಷ್ಣತೆ ಕಡಿಮೆಯಾಗುತ್ತದೆ

ದೇಹದ ಉಷ್ಣತೆ ಹೆಚ್ಚುವುದರಿಂದ ಕೆಲವರಲ್ಲಿ ಕೂದಲು ತುಂಬಾ ಉದುರಲು ಶುರುವಾಗುತ್ತದೆ. ದೇಹದ ಕೆಲ ಭಾಗದಲ್ಲಿ ಕೀವು ಗಂಟು ಆಗಬಹುದು. ಕೆಲವರಲ್ಲಿ ಪೈಲ್ಸ್ ನಂತಹ ಸಮಸ್ಯೆಗಳೂ ಉಲ್ಭಣ ಗೊಳ್ಳುತ್ತವೆ. ಅದರಲ್ಲೂ ಬೇಸಿಗೆಯಲ್ಲಿ ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ಇದಕ್ಕಾಗಿ ನಿಮ್ಮ ಶರೀರದ ಉಷ್ಣತೆ ತಗ್ಗಿಸಲು ಮೇಲಿನ ಯಾವುದೇ ಉಪಾಯ ಬಳಸಬಹುದು. ಮತ್ತು ಅತಿಯಾದ ಕಾರದ ಪದಾರ್ಥ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಕಾಳು ಮೆಣಸು ಮೊದಲಾದ ಪದಾರ್ಥಗಳನ್ನು ತಿನ್ನುವುದು ಕಡಿಮೆಮಾಡಿ.