ಕರ್ನಾಟಕದ ಈ ಭಿಕ್ಷುಕನಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನ.!ನಿಜಕ್ಕೂ ಈತ ಯಾರು ಗೊತ್ತಾ.?

Kannada Mahiti

ಹೌದು ಬಂದುಗಳೇ ನಾವು ಜೀವನದಲ್ಲಿ ಬದುಕಿದ್ದಾಗ ನಮ್ಮ ಜೊತೆಗೆ ಎಷ್ಟು ಜನ ಇರುತ್ತಾರೆ ಎಂಬುದು ಮುಖ್ಯವಾಗಿರುವುದಿಲ್ಲ. ಬದಲಿಗೆ ಸಾವನ್ನಪ್ಪಿದ ಬಳಿಕ ನಮಗೋಸ್ಕರ ಎಷ್ಟು ಜನರು ಅಳುತ್ತಾರೆ, ಎಷ್ಟು ಜನರು ನಮ್ಮ ಸುತ್ತ ಸೇರುತ್ತಾರೆ ಎಂಬುದೆ ಇಂಪಾರ್ಟೆಂಟ್ ಆಗುತ್ತದೆ. ಜೀವನದಲ್ಲಿ ನಮ್ಮ-ನಿಮ್ಮ ಬಳಿ ಎಷ್ಟೇ ದುಡ್ಡಿದ್ದರೂ ಕೂಡ ಜನರ ಪ್ರೀತಿ ವಿಶ್ವಾಸ ಗಳಿಸಲು ದುಡ್ಡು ಮುಖ್ಯವಲ್ಲ ಎಂಬುದು ಇಲ್ಲೊಬ್ಬ ಅಸ್ತವ್ಯಸ್ತ ಮಾನಸಿಕ ಹು’ಚ್ಚ ಎಂದು ಕರೆಸಿಕೊಂಡ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹು’ಚ್ಚ ಬಸ್ಯಾ ಅವರು ನಿರೂಪಿಸಿದ್ದಾರೆ.

ಹುಟ್ಟಿದಾಗಿನಿಂದ ಬುದ್ಧಿಮಾಂದ್ಯ ಆಗಿರುವ ಈ ಹು’ಚ್ಚ ಬಸ್ಯಾ ಅವರು ಆರಂಭದಿಂದಲೂ ಅವರ ತಾಯಿಯ ಜೊತೆಗೆ ಹೂವಿನಹಡಗಲಿಯಲ್ಲೇ ಬೆಳೆದಿದ್ದರು. ಹೌದು ಹೂವಿನಹಡಗಲಿ ಖ್ಯಾತಿಯ ಹುಚ್ಚ ಬಸ್ಯಾ ಅವರು ಇತ್ತೀಚಿಗಷ್ಟೇ ಸಾ’ವನ್ನಪ್ಪಿದರು. ಈತ ವಿಐಪಿ ರೀತಿ ಇದ್ದ. ಸಾಕಷ್ಟು ರಾಜಕಾರಣಿಗಳು ಈತನ ಆಶೀರ್ವಾದ ಪಡೆಯುತ್ತಿದ್ದರು. ಹಾಗೆ ಈತ ಎಲ್ಲರಿಗೂ ಒಳ್ಳೆಯ ರೀತಿ ಯೋಗ ಬರುವ ಹಾಗೆ ಆಗಿದ್ದ. ಹೌದು ಪುನೀತ್ ಅವರ ಸಾ’ವಿನ ಬಳಿಕ ಪುನೀತ್ ಅವರನ್ನ ನೋಡಲು ಲಕ್ಷಾಂತರ ಅಸಂಖ್ಯಾತ ಅಭಿಮಾನಿಗಳು ಕಣ್ಣೀರು ಹಾಕಿದ್ದನ್ನು ನೋಡಿದೆವು. ಅದ್ರಲ್ಲಿ ಗೊತ್ತಾಯಿತು ಮನುಷ್ಯ ದುಡ್ಡನ್ನ ಗಳಿಸಿದ್ರೆ ಏನು ಇಲ್ಲ. ಜನರ ಪ್ರೀತಿ ಗಳಿಸಬೇಕು ಎಂದು.

ಹೌದು ಕಳೆದ ಒಂದು ವಾರದಿಂದ ಇದೆ ಸಾ’ವಿನ ವಿಚಾರಕ್ಕೆ ಸಂಬಂಧಿತ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದೆ. ಮನುಷ್ಯ ಬದುಕಿದ್ದಾಗ ಏನು ಗಳಿಸುತ್ತಾನೆ ಇಲ್ಲವೋ ಗೊತ್ತಿಲ್ಲ, ಆದರೆ ಜನರ ಪ್ರೀತಿಯ ಗಳಿಸಿದರೆ ಜೀವನದಲ್ಲಿ ಆತ ಗೆದ್ದಂತೆಯೇ. ಹೌದು ನೂತನ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಒಬ್ಬ ಬಸ್ಯಾ ಎಂಬಾತ ಬಹಳ ವರ್ಷಗಳಿಂದ ಅಲ್ಲಿಯೇ ನೆಲೆಸಿರುತ್ತಾನೆ. ಈತ ಮೊನ್ನೆ ಬಸ್ ಆಕ್ಸಿಡೆಂಟ್ ಅಲ್ಲಿ ಸಾ’ವನ್ನಪ್ಪುತ್ತಾನೆ. ಈತನನ್ನು ನೋಡಲು ಸಾವಿರಾರು ಮಂದಿ ಅಲ್ಲಿ ನೆರೆದಿರುತ್ತಾರೆ. ಈತನ ಸಾ’ವಿಗೆ ಕಂಬನಿ ಮಿಡಿಯುತ್ತಾರೆ. ಅರೆ ಇದರಲ್ಲಿ ಏನಿದೆ ವಿಶೇಷತೆ ಎಂದು ನೀವು ಕೇಳಬಹುದು. ಹಾಗೆ ಆತ ಊರಿನ ದೊಡ್ಡ ಗಣ್ಯವ್ಯಕ್ತಿ ಇರಬಹುದು ಎಂದು ನೀವೂ ಹೇಳಬಹುದು.

ಆದರೆ ವಿಷಯ ಬೇರೆಯೇ ಇದೆ. ಈತ ಒಬ್ಬ ಭಿಕ್ಷುಕ, ಹಾಗೂ ಈತ ಒಬ್ಬ ಬುದ್ಧಿಮಾಂ’ದ್ಯ ವ್ಯಕ್ತಿ. ಆದರೆ ಯಾಕೆ ಈತನಿಗೆ ಅಷ್ಟು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಕಣ್ಣೀರು ಹಾಕಿದರು ಗೊತ್ತಾ.? ನಿಜಕ್ಕೂ ಈ ವಿಡಿಯೋ ನೋಡಿ, ಕಣ್ಣಲ್ಲಿ ನೀರು ಬರುತ್ತದೆ. ಹಾಗೆ ಈತನಿಗೆ ಯಾವ ರೀತಿ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿದರು ನೋಡಿ. ಹಾಗೆ ಬದುಕಿದರೆ ಈತನ ರೀತಿ ಬದುಕಬೇಕು ಎಂದೆನಿಸುತ್ತದೆ. ಅಸಲಿಗೆ ಈತ ಯಾವ ರೀತಿ ಬದುಕಿದ್ದ ಗೊತ್ತಾ. ಈ ಲೇಖನದಲ್ಲಿರುವ ಒಂದು ವಿಡಿಯೋದಲ್ಲಿ ತಿಳಿಸಿಕೊಡಲಾಗಿದೆ. ವಿಡಿಯೋ ತಪ್ಪದೆ ನೋಡಿ, ಶೇರ್ ಮಾಡಿ. ಹಾಗೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು….