ನಮಸ್ತೇ ಸ್ನೇಹಿತರೇ, ಹಳ್ಳಿಗಳಲ್ಲಿ ಬೋರ್ ವೆಲ್ ಕೊರೆಸುವ ಮುಂಚೆ ತಮ್ಮ ಜಮೀನಿನ ಯಾವ ಜಾಗದಲ್ಲಿ ನೀರು ಸಿಗುತ್ತದೆ ಎನ್ನೋದನ್ನ ಪತ್ತೆ ಮಾಡಲು ತೆಂಗಿನ ಕಾಯಿ ಅಥ್ವಾ ಒಂದು ಕೋಲನ್ನ ಉಪಯೋಗಿಸುವುದನ್ನ ನೋಡಿರುತ್ತೇವೆ. ವಿಜ್ನ್ಯಾನ ತಂತ್ರಜ್ನ್ಯಾನ ಎಷ್ಟೇ ಮುಂದುವರಿದಿದ್ದರೂ ಇವತ್ತಿಗೂ ಕೂಡ ಹಿಂದಿನ ಕೆಲವೊಂದು ತಂಗಿನಕಾಯಿ, ಕೋಲನ್ನ ಹಿಡಿದು ಜಮೀನಿನಲ್ಲಿ ನೀರಿನ ಸೆಲೆ ಸಿಗುವ ಜಾಗವನ್ನ ಕಂಡುಹಿಡಿದು ಪಾಯಿಂಟ್ ಮಾಡುವುದನ್ನ ನೋಡಿರುತ್ತೇವೆ. ಜೊತೆಗೆ ಇಷ್ಟೇ ಅಡಿಯಲ್ಲಿ ನೀರು ಸಿಗುತ್ತದೆ ಎಂಬುದನ್ನ ಕೂಡ ಹೇಳುತ್ತಾರೆ.

ಇನ್ನು ಭೂಮಿಯಲ್ಲಿ ಸಿಗುವ ಅಂತರ್ಜಲವನ್ನ ಹುಡುಕುವುದಕ್ಕಾಗಿ ತೆಂಗಿನಕಾಯಿ ಹಾಗೂ ಕೋಲನ್ನ ಉಪಯೋಗಿಸುವ ನೈಪುಣ್ಯತೆ ಹೊಂದಿರುವವರು ಜಮೀನಿನ ಯಾವ ಜಾಗದಲ್ಲಿ, ಎಷ್ಟು ಅಡಿಯಲ್ಲಿ ಹಾಗೂ ಯಾವ ಯಾವ ಭಾಗದಲ್ಲಿ ಹೆಚ್ಚಿನ ನೀರಿನ ಸೆಲೆ ಇದೆ, ಮತ್ತೆ ಯಾವ ಭಾಗದಲ್ಲಿ ಕಡಿಮೆ ನೀರಿನ ಸೆಲೆ ಇದೆ ಎನ್ನುವುದರ ಕರಾರುವೊಕ್ಕಾಗಿ ಹೇಳುತ್ತಾರೆ ಅದರಲ್ಲಿ ನೈಪುಣ್ಯತೆ ಹೊಂದಿರುವವರು. ಇವರನ್ನ ಪಾಯಿಂಟ್ ಮಾಡುವವರು ಎಂದು ಹೇಳಲಾಗುತ್ತದೆ. ಹಾಗಾದ್ರೆ ಒಂದು ತೆಂಗಿನಕಾಯಿಯ ಮೂಲಕ ಜಮಿನಿನ ಯಾವುದೋ ಭಾಗದಲ್ಲಿರುವ ಅಂತರ್ಜಾಲದ ನೀರಿನ ಸೆಲೆಯನ್ನ ಹೇಗೆ ಪತ್ತೆ ಮಾಡುತ್ತಾರೆ ಗೊತ್ತಾ ?
ಜಮೀನಿನಲ್ಲಿರುವ ನೀರಿನ ಸೆಲೆಯನ್ನ ಕಂಡುಹಿಡಿಯಲು ನೀಟಾಗಿರುವ ಒಂದು ತೆಂಗಿನಕಾಯಿಯನ್ನ ತೆಗೆದುಕೊಂಡು ಅದನ್ನ ಕೈನ ಅಂಗೈನಲ್ಲಿ ಇಟ್ಟುಕೊಳ್ಳುತ್ತಾರೆ. ಬಳಿಕ ಜಮೀನಿನ ಎಲ್ಲಾ ಭಾಗಗಳಲ್ಲಿ ಓಡಾಡುತ್ತಾರೆ. ಒಂದು ವೇಳೆ ಆ ಜಮೀನಿನ ಯಾವುದೇ ಭಾಗದಲ್ಲಿ ನೀರಿದ್ದರೆ ತೆಂಗಿನಕಾಯಿ ತನ್ನಷ್ಟಕ್ಕೆ ತಾನೇ ನೇರವಾಗಿ ನಿಂತುಕೊಳ್ಳುತ್ತದೆ. ಇದರರ್ಥ ಆ ಭಾಗದಲ್ಲಿ ನೀರಿನ ಸೆಲೆ ಇದೆ ಎಂದು. ಇವತ್ತಿಗೂ ಹಳ್ಳಿಗಾಡಿನ ಪ್ರದೇಶಗಳಲ್ಲಿ ಇದೆ ಪದ್ದತಿಯ ಮೂಲಕವೇ ನೀರಿನ ಸೆಲೆಯನ್ನ ಹುಡುಕಲಾಗುತ್ತದೆ. ಆದರೆ ಇದರ ಬಗ್ಗೆ ಬೇರೆ ಬೇರೆ ರೀತಿಯ ಚರ್ಚೆಗಳು ಕೂಡ ಇವೆ. ಹೌದು, ತೆಂಗಿನಕಾಯಿಯಿಂದ ಭೂಮಿಯಲ್ಲಿರುವ ಅಂತರ್ಜಲವನ್ನ ಕಂಡುಹಿಡಿಯಲು ಸಾಧ್ಯವಿದೆಯಾ ಎಂದು? ಇನ್ನು ಇದರ ಬಗ್ಗೆ ಪವಾಡಗಳನ್ನ ಬಯಲುಮಾಡುವಲ್ಲಿ ಖ್ಯಾತಿ ಹೊಂದಿರುವ ಹುಲಿಕಲ್ ನಟರಾಜ್ ಅವರು ಹೇಳೋದೇನು ಗೊತ್ತಾ ? ಈ ವಿಡಿಯೋ ನೋಡಿ..