IAS ಕನಸು ಹೊತ್ತು ಓದಿದ ಕೂಲಿ ಕಾರ್ಮಿಕನ ಮಗಳು SSLCಯಲ್ಲಿ ಗಳಿಸಿದ ಅಂಕವೆಷ್ಟು ಗೊತ್ತಾ?ಆಕೆಗೆ ಸಿಕ್ಕ ಗಿಫ್ಟ್ ಏನು ಗೊತ್ತಾ?

News

ಸಾಮಾನ್ಯವಾಗಿ ಉತ್ತಮವಾದ ಅಂಕಗಳನ್ನ ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾದ ವಿಧ್ಯಾರ್ಥಿಗಳನ್ನ ಸನ್ಮಾನಿಸಿ ಅವರಿಗೆ ಪ್ರೋತ್ಸಾಹ ಧನವನ್ನ ಕೊಟ್ಟು ಗೌರವಿಸುವುದನ್ನ ನಾವು ನೋಡಿದ್ದೇವೆ. ಆದರೆ ಅಚ್ಚರಿಯೆಂದರೆ 10ನೇ ತರಗತಿಯಲ್ಲಿ ಶೇ 68ರಷ್ಟು ಅಂಕ ಗಳಿಸಿದ ವಿಧ್ಯಾರ್ಥಿನಿಯೊಬ್ಬಳಿಗೆ ಪ್ಲಾಟ್ ಗಿಫ್ಟ್ ಕೊಟ್ಟಿದ್ದಲ್ಲದೆ ಮುಂದಿನ ಆಕೆಯ ಪೂರ್ತಿ ವಿದ್ಯಾಭ್ಯಾಸ ಉಚಿತವಾಗಿರುವಂತೆ ಮಾಡಲಾಗಿದೆ.

ಹೌದು, ಮಧ್ಯಪ್ರದೇಶದ ಇಂದೋರ್ ನ ಪುಟ್ ಪಾತ್ ನಲ್ಲಿ ವಾಸಮಾಡುತ್ತಿರುವ ಭಾರ್ತಿ ಖಂಡೇಕರ್ ಎಂಬ ಹತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ಶೇ ೬೮ರಷ್ಟು ಅಂಕಗಳನ್ನ ಪಡೆದುಕೊಂಡಿದ್ದರು. ಇನ್ನು ಪುಟ್ ಪಾತ್ ನಲ್ಲಿ ವಾಸಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ೧೦ನೇ ಸಾಧನೆ ಮಾಡಿರುವುದು ಇಂಧೋರ್ ನ ಪಾಲಿಕೆ ಆಯುಕ್ತರ ಗಮನಕ್ಕೆ ಬಂದಿದೆ. ಕೂಡಲೇ ಅವರು ಆ ವಿದ್ಯಾರ್ಥಿನಿಗೆ ಒಂದು BHK ಫ್ಲಾಟ್ ಗಿಫ್ಟ್ ಕೊಡಲು ನಿರ್ಧಾರ ಮಾಡಿದು ಆಕೆಯ ಮುಂದಿನ ವಿದ್ಯಾಭ್ಯಾಸ ಉಚಿತವಾಗಿ ಸಿಗುವ ವ್ಯವಸ್ಥೆಯನ್ನು ಮಾಡಿದ್ದಾರೆ. ಇನ್ನು ಆ ವಿದ್ಯಾರ್ಥಿನಿಗೆ ಪುಸ್ತಕ, ಬಟ್ಟೆ, ಟೇಬಲ್ ಹಾಗೂ ಕುರ್ಚಿಗಳನ್ನ ಈಗಾಗಲೇ ನೀಡಲಾಗಿದೆ ಎಂದು ಹೇಳಲಾಗಿದೆ.

ಇನ್ನು ಪುಟ್ ಪಾತ್ ನಲ್ಲಿವಾಸಮಾಡುತ್ತಿದ್ದ ಭಾರ್ತಿ ತಂದೆಗೆ ಹೊಸ ಮನೆ ಸಿಗುತ್ತದೆಂದು ತುಂಬಾ ಸಂತೋಷವಾಗಿದ್ದು ನಾನು ನನ್ನ ಪತ್ನಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದು ನಾನು ಹೊರಗಡೆ ಕೆಲಸಕ್ಕೆ ಹೋದರೆ ನನ್ನ ಪತ್ನಿ ಶಾಲೆಯೊಂದರಲ್ಲ ಕಸ ಗುಡಿಸುವ ಕೆಲಸ ಮಾಡುತ್ತಾಳೆ ಎಂದು ಹೇಳಿದ್ದಾರೆ. ಇನ್ನು IAS ಮಾಡಬೇಕೆಂಬ ಕನಸು ಹೊತ್ತಿರುವ ಭಾರ್ತಿ ಮಧ್ಯರಾತ್ರಿ ಒಂದು ಗಂಟೆ ರಾತ್ರಿಯವರೆಗೂ ಓದುತ್ತಿದ್ದಳಂತೆ. ಪುಟ್ ಪಾತ್ ನಲ್ಲಿ ಹುಟ್ಟಿ ಬೆಳೆದು ಓದುತ್ತಿರುವ ನಮಗೆ ವಾಸ ಮಾಡಲು ಮನೆ ನೀಡಿದ್ದಾರೆ ಜೊತೆಗೆ ಉಚಿತ ವಿಧ್ಯಾಭ್ಯಾಸವನ್ನು ನೀಡುವುದಾಗಿ ಹೇಳಿದ್ದು ನಾನು ಅವರಿಗೆ ಆಬಾರಿಯಾಗಿದ್ದೇನೆ ಎಂದು ಭಾರ್ತಿ ಹೇಳಿದ್ದಾರೆ.