ಅನುಮಾನದಿಂದ ವಿಚಾರಣೆಗೆ ಕರೆದೊಯ್ದ ಪೊಲೀಸರು..ಆತನ ನಿಜರೂಪ ಕೇಳಿ ಕಾಲಿಗೆ ಬಿದ್ರು! ಅಸಲಿಗೆ ಈತ ಯಾರು ಗೊತ್ತಾ?

Inspire

‘ಮುಖ ನೋಡಿ ಮೊಳೆ ಹಾಕಬೇಡಾ’ ಈ ಕನ್ನಡ ಹಾಡನ್ನ ನೀವೆಲ್ಲಾ ಕೇಳೇ ಇರುತ್ತೀರಾ..ಹೌದು, ಒಬ್ಬ ಮನುಷ್ಯನನ್ನ ಆತನ ಬಟ್ಟೆಯಿಂದಲೋ ಅಥ್ವಾ ಮತ್ತೆ ಯಾವುದರಿಂದಲಿ ಅಳೆದು ಇವನು ಇಂತಹವನೇ ಎಂಬ ನಿರ್ಧಾರಕ್ಕೆ ಬರುವುದು ತಪ್ಪು. ಇದೆ ರೀತಿ ಪೊಲೀಸರು ಬಿಳಿ ಬಟ್ಟೆ ಮತ್ತು ಗಡ್ಡ ಬಿಟ್ಟುಕೊಂಡು ತಿರುಗುತ್ತಿದ್ದ ವ್ಯಕ್ತಿಯೊಬ್ಬನನ್ನ ಠಾಣೆಗೆ ಕರೆತಂದು ಆತನ ಅಸಲಿ ವಿಚಾರ ತಿಳಿದು ದಂಗಾಗಿದ್ದಾರೆ. ಇನ್ನು ಪೊಲೀಸರು ಅನುಮಾನದಿಂದ ಠಾಣೆಗೆ ಕರೆದುಕೊಂಡು ಬಂದಿದ್ದ ವ್ಯಕ್ತಿಯ ಹೆಸರು ಅಲೋಕ್ ಸಾಗರ್ ಎಂದು. ಗಡ್ಡ ಬಿಟ್ಟುಕೊಂಡು, ಬಿಳಿ ಬಟ್ಟೆ ಧರಿಸಿ ಸೈಕಲ್ ಮೇಲೆ ಓಡಾಡುತ್ತಿದ್ದ ಈ ವ್ಯಕ್ತಿ ದೆಹಲಿಯಲ್ಲಿ ಹುಟ್ಟಿದ್ದು ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ವಾಸವಾಗಿದ್ದಾರೆ.

ಇನ್ನು ಇದೆ ಹಳ್ಳಿಯಲ್ಲಿ ಚುನಾವಣೆ ಬಂದಿದ್ದು, ಆ ಸಮಯದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದು, ಗಡ್ಡ ಬಿಟ್ಟು, ಬಿಳಿ ಬಟ್ಟೆ ತೊಟ್ಟು ಸೈಕಲ್ ನಲ್ಲಿ ತಿರುಗುತ್ತಿದ್ದ ಈ ವ್ಯಕ್ತಿಯನ್ನ ಕಂಡ ಪೊಲೀಸರು ಅನುಮಾನ ಬಂದ ಕಾರಣ ಆತನನ್ನ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಬಳಿಕ ಆತನಲ್ಲಿ ಯಾವುದಾದರು ನಿಮ್ಮ ಐಡಿ ಕಾರ್ಡ್ ನ್ನ ತೋರಿಸಿ ಎಂದು ಕೇಳಿದ್ದಾರೆ. ಆದರೆ ಆತ ನಾನು ಐಡಿ ಕಾರ್ಡ್ ನ್ನ ಮನೆಯಲ್ಲಿಟ್ಟು ಬಂದಿರುವೆ ಎಂದು ಹೇಳುತ್ತಾನೆ. ಇದರಿಂದ ಆತನ ಮೇಲೆ ಮತ್ತಷ್ಟು ಅನುಮಾನಗೊಂಡ ಪೊಲೀಸರು ತಮ್ಮದೇ ದಾಟಿಯಲ್ಲಿ ವಿಚಾರಣೆ ನಡೆಸಲು ಮುಂದಾಗುತ್ತಾರೆ. ಆಗ ಆ ವ್ಯಕ್ತಿ ನನಗೆ ಇಂಗ್ಲಿಷ್ ಸೇರಿದಂತೆ, ಹಿಂದಿ, ಮಲಯಾಳಂ, ತಮಿಳು ಸೇರಿದನೇ ಎಂಟು ಭಾಷೆಗಳು ಬರುತ್ತವೆ..ಯಾವ ಭಾಷೆಯಲ್ಲಿ ನಾನು ನಿಮಗೆ ಉತ್ತರ ನೀಡಲು ಎಂದು ಇಂಗ್ಲಿಷ್ ನಲ್ಲಿ ತುಂಬಾ ಸಲೀಸಾಗಿ ಮಾತನಾಡುತ್ತಾರೆ.

ಇವರ ಮಾತುಗಳನ್ನ ಕೇಳಿದ ಪೊಲೀಸರು ಒಂದು ಕ್ಷಣ ಬೆಚ್ಚಿಬಿದ್ದ ಪೊಲೀಸರು ನೀವು ಯಾರು ಎಂದು ಅವರ ಹಿನ್ನಲೆ ಬಗ್ಗೆ ವಿಚಾರಿಸುತ್ತಾರೆ. ಆಗ ಅಲೋಕ್ ಸಾಗರ್ ಅವರು ನಾನು ಐಐಟಿ ದೆಹಲಿಯಲ್ಲಿ ಇಂಜಿನಿಯರಿಂಗ್ ಮಾಡಿದ್ದು, ಐಐಟಿ ಪ್ರೊಫೆಸರ್ ಆಗಿದ್ದೇನೆ. ಅಮೆರಿಕಾದ ಹ್ಯೂಸ್ಟನ್ ವಿಶ್ವವಿದ್ಯಾನಿಲಯದಲ್ಲಿ Ph.D ಮಾಡಿದ್ದೇನೆ. ಇನ್ನು ಮಾಜಿ RBI ಗವರ್ನರ್ ಆಗಿದ್ದ ರಘುರಾಜನ್ ರಂಗರಾಜ್ ಅವರ ಶಿಷ್ಯ ಎಂದು ಅಲೋಕ್ ಸಾಗರ್ ತಮ್ಮ ಹಿನ್ನಲೆ ಬಗ್ಗೆ ಹೇಳಿದಾಗ ಪೊಲೀಸರೇ ಶಾಕ್ ಆಗಿದ್ದಾರೆ. ಸ್ನೇಹಿತರೇ, ಇಷ್ಟೇ ಅಲ್ಲ ಐಐಟಿ ಪ್ರೊಫೆಸರ್ ಆಗಿರುವ ಅಲೋಕ್ ಸಾಗರ್ ತಮ್ಮ ಉದ್ಯೋಗವನ್ನ ಬಿಟ್ಟು ಅವರು ಕಳೆದ ೩೩ ವರ್ಷಗಳಿಂದ ಮಧ್ಯಪ್ರದೇಶದ ಬುಡಕಟ್ಟು ಜನಾಂಗದವರ ಸಮಸ್ಯಗಳನ್ನ ಪರಿಹರಿಸುವ ಸಲುವಾಗಿ ಅವರ ಜೊತೆ ಅವರಂತಯೇ ಜೀವನ ನಡೆಸುತ್ತಿದ್ದಾರೆ ಎಂದರೆ ಎಂತಹವರಿಗೂ ಅಚ್ಚರಿಯಾಗದೆ ಇರೋದಿಲ್ಲ..ಅದಕ್ಕೆ ಹೇಳೋದು ಮುಖ, ಬಟ್ಟೆ ನೋಡಿ ಯಾರನ್ನು ಅಳೆಯಬಾರದು ಎಂದು..