ಬಿಗ್ ಬ್ರೇಕಿಂಗ್: ಕೊನೆಗೂ ಸಿಕ್ತು ಮದ್ದು ! ಆಗಸ್ಟ್ 15ಕ್ಕೆ ಬರಲಿದೆ ಕೊರೋನಾ ವಿರುದ್ದದ ಸ್ವದೇಶಿ ಲಸಿಕೆ

Uncategorized
Advertisements

ಚೀನಾದಲ್ಲಿ ಹುಟ್ಟಿ ಇಡೀ ಜಗತ್ತಿನಾದ್ಯಂತ ರಣ ಕೇಕೆ ಹಾಕುತ್ತಿರುವ ಮಹಾಮಾರಿ ಕೊರೋನಾ ಸೋಂಕಿಗೆ ಲಸಿಕೆಯನ್ನ ಕಂಡುಹಿಡಿಯುವ ಸಲುವಾಗಿ ಜಗತ್ತಿನ ಅನೇಕ ದೇಶಗಳು ಪ್ರಯತ್ನ ಪಡುತ್ತಲೇ ಇವೆ. ಇದರ ನಡುವೆ ಆಗಸ್ಟ್ ೧೫ರ ಒಳಗೆ ಭಾರತೀಯ ಔಷಧಿ ಸಿದ್ಧವಾಗಲಿದೆ ಎಂಬ ಗುಡ್ ನ್ಯೂಸ್ ಒಂದು ಬಂದಿದೆ.

ಹೌದು ಇದರ ಬಗ್ಗೆ ಸುಳಿವು ಕೊಟ್ಟಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ನೇತೃತ್ವದಲ್ಲಿ ಭಾರತದ್ದೇ ಆಗಿರುವ ಸ್ವದೇಶಿ ಔಷಧಿಯ ಕ್ಲಿನಿಕ್ ಪ್ರಯೋಗಗಳನ್ನ ನಡೆಸಿ ಆಗಸ್ಟ್ ೧೫ ಭಾರತದ ಸ್ವಾತಂತ್ರ್ಯ ದಿನಾಚರಣೆಯೊಂದೇ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಇನ್ನು ಒಂದು ಹಾಗೂ ಎರಡನೇ ಹಂತದಲ್ಲಿ ಸೋಂಕಿತರ ಮೇಲೆ ಪ್ರಯೋಗ ನಡೆಸಲು ಸರ್ಕಾರದಿಂದ ಅನುಮತಿ ದೊರಕಿದ್ದು ಜುಲೈನಿಂದಲೇ ಪ್ರಯೋಗ ಆರಂಭವಾಗಲಿದೆ ಎಂದು ಹೇಳಲಾಗಿದೆ. ಭಾರತೀಯರೇ ಸಿದ್ಧಪಡಿಸುತ್ತಿರುವ ಮಹಾಮಾರಿ ಕೊರೋನಾ ವಿರುದ್ದದ ಈ ಔಷಧಿ ಎಲ್ಲಾ ಪ್ರಾಯೋಗಿಕ ಹಂತಗಳಲ್ಲಿ ಯಶಸ್ವಿಯಾದಲ್ಲಿ ಆಗಸ್ಟ್ ೧೫ ರಿಂದ ಭಾರತದಲ್ಲಿ ಕೊರೋನಾ ವಿರುದ್ಧ ಜಯ ಸಿಗಲಿದೆ ಎಂದು ಹೇಳ್ಳಾಗಿದೆ. ಇನ್ನು ಈ ಔಷಧಿಗೋಸ್ಕರ ಶ್ರಮ ಪಡುತ್ತಿರುವ ವಿಜ್ನ್ಯಾನಿಗಳು ಹಾಗೂ ವೈದ್ಯರ ಶ್ರಮ ಯಶಸ್ವಿಯಾಗಲಿ ಎಂದು ನಾವೆಲ್ಲಾ ಪ್ರಾರ್ಥನೆ ಮಾಡೋಣ..