ತವರಿನಲ್ಲೇ ಲಾಕ್ ಆದ ಪತ್ನಿ..ಆದರೆ ಮಾಜಿ ಲವರ್ ಜೊತೆ 2ನೇ ಮದ್ವೆಯಾದ ಪತಿ..ಅಸಲಿಗೆ ನಡೆದಿದ್ದೇನು?

Advertisements

ದೇಶದಾದ್ಯಂತ ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ ಬಹುತೇಕ ಜನರು ತಮ್ಮ ಮನೆಗಳನ್ನ ಸೇರಿಕೊಳ್ಳಲು ಆಗಿಲ್ಲ. ತಾವಿದ್ದ ಕಡೆಯೇ ಲಾಕ್ ಆಗಿದ್ದು ತಮ್ಮ ಕುಟುಂಬದವರಿಂದ ದೂರ ಇರಬೇಕಾದ ಪರಿಸ್ಥಿತಿ ಇದೆ.

Advertisements

ಆದರೆ ಇದರ ನಡುವೆಯೇ ಧೀರಜ್ ಕುಮಾರ್ ಅನ್ನೋ ವ್ಯಕ್ತಿಯೊಬ್ಬ ತನ್ನ ಹೆಂಡತಿ ತವರು ಮನೆಯಿಂದ ಬರಲಿಲ್ಲ ಎಂದು ಮಾಜಿ ಲವರ್ ಜೊತೆ ವಿವಾಹವಾಗಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ. ನಮಗೆಲ್ಲಾ ಗೊತ್ತಿರುವ ಹಾಗೆ ಲಾಕ್ ಡೌನ್ ಘೋಷಣೆ ಆಗಿದ್ದು ಮಾರ್ಚ್ ನಲ್ಲಿ. ಇನ್ನು ಇದಕ್ಕೂ ಮೊದಲೇ ಧೀರಜ್ ಅವರ ಹೆಂಡತಿ ದುಲ್ಹಿನ್ ಬಜಾರ್ ಪ್ರದೇಶದಲ್ಲಿರೋ ತನ್ನ ತವರು ಮನೆಗೆ ಹೋಗಿದ್ದರು.

ಆದರೆ ಲಾಕ್ ಡೌನ್ ಘೋಷಣೆ ಆಗಿದ್ದೆ ತಡ ಎಲ್ಲಾ ವಾಹನಗಳ ಸಂಚಾರ ನಿಂತು ಹೋಯಿತು. ಇಂತಹ ಪರಿಸ್ಥಿತಿಯ ನಡುವೆಯೂ ಧೀರಜ್ ತನ್ನ ಪತ್ನಿಗೆ ಅನೇಕ ಬಾರಿ ಕರೆ ಮಾಡಿ ಹೇಗಾದರೂ ಸರಿಯೇ ಮನೆಗೆ ಬರುವಂತೆ ಒತ್ತಾಯ ಮಾಡಿದ್ದಾನೆ. ಆದರೆ ವಾಹನಗಳಿಲ್ಲದೆ ಹೋಗಲು ಹೇಗೆ ಸಾಧ್ಯ..ಏನೇ ಪ್ರಯತ್ನ ಪಟ್ಟರೂ ಪತ್ನಿಗೆ ಗಂಡನ ಮನೆಗೆ ಹೋಗಲು ಆಗಲಿಲ್ಲ.

ಇನ್ನು ಕೊರೋನಾ ನಿಯಂತ್ರಣಕ್ಕೆ ಬಾರದ ಕಾರಣ ಲಾಕ್ ಡೌನ್ ನ್ನ ಮತ್ತೆ ಮೇ ೩ನೇ ತಾರೀಖಿನವರೆಗೆ ವಿಸ್ತರಣೆ ಮಾಡಿದ್ದಾಯಿತು. ಇದರಿಂದ ಕೋಪಗೊಂಡ ಧೀರಜ್ ಕಳ್ಳನಿಗೆ ಒಂದು ಪಿಳ್ಳೆ ನೆಪ ಎಂಬಂತೆ ಪತ್ನಿ ಬರಲಿಲ್ಲ ಎಂದು ತನ್ನ ಮಾಜಿ ಪ್ರೇಯಸಿಯ ಜೊತೆಗೆ ವಿವಾಹ ಮಾಡಿಕೊಂಡಿದ್ದಾನೆ. ಇನ್ನು ಇದರ ಬಗ್ಗೆ ತಿಳಿದ ಮೊದಲ ಪತ್ನಿ ತಕ್ಷಣವೇ ಗಂಡನ ಮೇಲೆ ಪ್ರಕರಣ ದಾಖಲಿಸಿದ್ದು, ಅದರ ಆದರದ ಮೇಲೆ ಆತನನ್ನ ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಈ ಲಾಕ್ ಡೌನ್ ನಿಂದ ಒಬ್ಬೊಬ್ಬರು ಒಂದು ರೀತಿಯಾಗಿ ತೊಂದರೆಗೆ ಸಿಲುಕಿರುವುದಂತೂ ಸತ್ಯ.