ತನ್ನ 22 ವರ್ಷದ ಸೊಸೆಯನ್ನೇ ಮದುವೆ ಮಾಡಿಕೊಂಡ ಮಾವ !

News
Advertisements

ಮನೆಗೆ ಗೃಹ ಲಕ್ಷ್ಮಿಯಾಗಿ ಪ್ರವೇಶ ಮಾಡುವ ಸೊಸೆ ಮಾವನಾದವನಿಗೆ ಮಗಳ ಸಮಾನರಾಗಿರುತ್ತಾಳೆ. ಒಂದು ವೇಳೆ ಮಗ ತೀರಿಕೊಂಡಲ್ಲಿ ಒಬ್ಬಂಟಿಯಾಗುವ ಸೊಸೆಗೆ ಒಳ್ಳೆಯ ವರನನ್ನ ಹುಡುಕಿ ಮದುವೆ ಮಾಡಿ ಅವರ ಜೀವನಕ್ಕೆ ಹೊಸಬೆಳಕನ್ನ ಮಾಡಿಸುವ ಮಾವನನ್ನ ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಾವ ತನ್ನ ಸೊಸೆಯನ್ನೇ ಮದುವೆಯಾಗಿರುವ ಘಟನೆ ನಡೆದಿದೆ.

Advertisements

ಹೌದು ಮಗ ತೀರಿಕೊಂಡ ಬಳಿಕ ಒಬ್ಬಂಟಿಗಳಾಗಿದ್ದ ಇನ್ನು ೨೨ ವರ್ಷ ಚಿಕ್ಕ ವಯಸ್ಸಿನ ಸೊಸೆಯನ್ನ ಮಾವನೇ ಮದುವೆಯಾಗಿರುವ ಘಟನೆ ಛತ್ತೀಸ್ ಗಡದಲ್ಲಿ ನಡೆದಿದೆ. ರಜಪೂತ್ ಸಿಂಗ್ ಎಂಬ ಮಾವನೇ ತನ್ನ ೨೨ ವರ್ಷದ ಸೊಸೆ ಆರತಿ ಸಿಂಗ್ ಎಂಬಾಕೆಯೊಂದಿಗೆ ಮದುವೆಯಾಗಿರುವ ಭೂಪ. ಇನ್ನು ಈತನ ಮಗ ಎರಡು ವರ್ಷದ ಸಾವಿಗೀಡಾಗಿದ್ದು ಸೊಸೆ ಆರತಿ ಸಿಂಗ್ ಒಬ್ಬಂಟಿಯಾಗಿಯೇ ಮಾವನ ಆಶ್ರಯದಲ್ಲಿಯೇ ಜೀವನ ನಡೆಸುತ್ತಿದ್ದಳು.

ಇನ್ನು ಮಾವ ರಜಪುತ್ ಸಿಂಗ್ ಕೂಡ ತನ್ನ ಸೊಸೆಯನ್ನ ತುಂಬಾ ಕಾಳಜಿಯಿಂದಲೇ ನೋಡಿಕೊಂಡಿದ್ದಾನೆ ಎಂದು ಹೇಳಲಾಗಿದ್ದು ತನ್ನ ಸೊಸೆಗೆ ಬಲು ನೀಡುವ ಸಲುವಾಗಿ ಮದುವೆಯಾಗಿದ್ದಾನೆ ಎಂದು ಹೇಳಲಾಗಿದ್ದು ಇದಕ್ಕೆ ಸೊಸೆಯೂ ಕೂಡ ಒಪ್ಪಿದ್ದಾಳೆ ಎಂದು ಹೇಳಲಾಗಿದೆ. ಇನ್ನು ವಿಶೇಷ ಎಂದರೆ ಕುಟುಂಬದವರೆಲ್ಲರೂ ಸೇರಿ ಈ ಮದುವೆ ಕಾರ್ಯವನ್ನ ನೆರವೇರಿಸಿದ್ದಾರೆ ಎಂದು ಹೇಳಲಾಗಿದೆ.