ರೈಲ್ವೆ ಸ್ಟೇಷನ್ ನಲ್ಲಿ ತುಂಬಾ ದಿನದಿಂದ ಕೂಲಿ ಕೆಲಸ ಮಾಡುತ್ತಿದ್ದ ಈ ಮಹಿಳೆಯ ಅಸಲಿ ವಿಷಯ ಗೊತ್ತಾದಾಗ ಎಲ್ಲರೂ ಶಾಕ್ !

Inspire
Advertisements

ಸ್ನೇಹಿತರೆ, ಬೆಂಗಳೂರು, ಬಾಂಬೆಯಂತಹ ಮಹಾನಗರಗಳಲ್ಲಿ ಜೀವನ ನಡೆಸುವುದು ಎಂದರೆ ಅಷ್ಟೊಂದು ಸುಲಭದ ಮಾತಲ್ಲ. ಮನೆ ಮಂದಿಯೆಲ್ಲಾ ಬೆವರು ಸುರಿಸಿ ದುಡಿದರೂ ಕೂಡ ಒಂದೊತ್ತಿನ ಊಟ ಮಾಡಲು ಕಷ್ಟದ ಸ್ಥಿತಿಯಲ್ಲಿ ಬಹುತೇಕರಿದ್ದಾರೆ. ಇನ್ನು ಇಂತಹ ಕಷ್ಟದ ಪರಿಸ್ಥಿತಿ ಇರುವಾಗ ಮಧ್ಯಪ್ರದೇಶದ ಸಂಧ್ಯಾ ಎಂಬ ಮಹಿಳೆಯ ಸ್ಟೋರಿ ಕೇಳಿದ್ರೆ ಅಚ್ಚರಿ ಆಗ್ದೇ ಇರೋದಿಲ್ಲ. ಹೌದು, ಸಂಧ್ಯಾ ಅವರ ಕೌಟಂಬಿಕ ಜೀವನ ೨೦೧೬ರವರೆಗೆ ಸುಖಮಯವಾಗಿಯೇ ಇತ್ತು. ಇನ್ನು ಈ ಮಹಿಳೆಯ ಪತಿ ಹೊರಗಡೆ ಹೋಗಿ ಸಂಪಾದನೆ ಮಾಡಿಕೊಂಡು ಬಂದರೆ, ಸಂಧ್ಯಾ ಅವರು ಮನೆಯ ಜವಾಬ್ದಾರಿ ಜೊತೆಗೆ ತನ್ನ ಮೂರೂ ಮಕ್ಕಳನ್ನ ನೋಡಿಕೊಳ್ಳುತ್ತಿದ್ದಳು.

[widget id=”custom_html-4″]

Advertisements

ಆದರೆ ಎಲ್ಲರ ಜೀವನ ಯಾವಾಗಲು ಒಂದೇ ರೀತಿ ಇರುವುದಿಲ್ಲ. ಹೀಗೊಂದು ದಿನ ಸಂಧ್ಯಾ ಅವರ ಪತಿ ಅಪಘಾತಹೊಂದರಲ್ಲಿ ಪರಲೋಕ ಸೇರುತ್ತಾನೆ. ಇನ್ನು ಪತಿಯು ಇಲ್ಲವಾದ ಮೇಲೆ ತನ್ನ ಮೂರೂ ಮಕ್ಕಳನ್ನ ಸಾಕುವುದರ ಜೊತೆಗೆ ಮನೆಯ ಸಂಪೂರ್ಣ ಜವಾಬ್ದಾರಿ ಸಂಧ್ಯಾ ಅವರ ಮೇಲೆ ಬೀಳುತ್ತದೆ. ಇನ್ನು ಗಂಡ ಎಲ್ಲ ಮುಂದೇನು ಮಾಡುವುದು ಅಂತ ಯೋಚನೆ ಮಾಡುತ್ತಾ ಮನೆಯಲಿ ಕುಳಿತುಕೊಳ್ಳದ ಸಂಧ್ಯಾ ಗಟ್ಟಿ ನಿರ್ಧಾರ ಮಾಡಿ ಕೆಲಸಕ್ಕೆ ಹೋಗುತ್ತಾರೆ. ಮಧ್ಯಪ್ರದೇಶದ ಜಬಲ್ ಪುರ್ ನಲ್ಲಿರುವ ರೇಲ್ವೆ ಸ್ಟೇಷನ್ ಒಂದ್ರಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ ಮಹಿಳೆ ಸಂಧ್ಯಾ.ಕೇವಲ ೩೦ ವರ್ಷದವರಾಗಿದ್ದ ಸಂಧ್ಯಾ ಅವರು ಪ್ರಯಾಣಿಕರ ಲಗ್ಗೇಜುಗಳನ್ನ ಹೊರುವ ಕೆಲಸ ಮಾಡುತ್ತಿದ್ದಳು. ಎಷ್ಟರ ಮಟ್ಟಿಗೆ ಎಂದರೆ ಗಂಡಸರು ಕೂಡ ನಾಚುವಂತೆ ಪ್ರಯಾಣಿಕರ ಭಾರವಾದ ವಸ್ತುಗಳನ್ನ ಅವರು ಕೇಳಿದ ಸ್ಥಳಕ್ಕೆ ಎತ್ತಿಕೊಂಡು ಹೋಗುತ್ತಿದ್ದಳು.

[widget id=”custom_html-4″]

ಕೇವಲ ಗಂಡಸರೇ ತುಂಬಿರುವ ಆ ಕೆಲಸದಲ್ಲಿ ಸಂಧ್ಯಾ ಏಕಾಂಗಿ ಮಹಿಳೆಯಾಗಿ ಮೂರ್ನಾಕು ವರ್ಷಗಳಿಂದ ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಇನ್ನು ಸಂಧ್ಯಾ ಅವರ ಮನೆ ಮಾತು ರೈಲ್ವೆ ಸ್ಟೇಷನ್ ಗೆ ಕಿಮೀಗಟ್ಟಲೆ ಅಂತರವಿದ್ದು, ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ದುಡಿಯುವ ಸಂಧ್ಯಾ ತನ್ನ ಮೂರೂ ಮಕ್ಕಳನ್ನ ಚೆನ್ನಾಗಿಯೇ ಸಾಕುತ್ತಿದ್ದಳು. ಕಳೆದ ವರ್ಷವಷ್ಟೇ ಸಂಧ್ಯಾ ಅವರಿಗೆ ೧೫ನೇ ನಂಬರಿನ ಕೂಲಿ ಬ್ಯಾಡ್ಜ್ ಕೂಡ ಸಿಕ್ಕಿದೆ. ವಿಶೇಷ ಎಂದರೆ ಭಾರತದ ಪ್ರಪ್ರಥಮ ಮಹಿಳಾ ಕೂಲಿ ಎಂಬ ಹೆಗ್ಗಳಿಗೆ ಸಂಧ್ಯಾ ಅವರದ್ದು. ಇನ್ನು ತಾನು ಮಾಡುತ್ತಿರುವ ಕೂಲಿ ಕೆಲಸದ ಬಗ್ಗೆಯೂ ಸಹ ಸಂಧ್ಯಾ ಅವರಿಗೆ ಬಹಳ ಹೆಮ್ಮೆ ಇದೆ. ಸ್ನೇಹಿತರೇ, ಇದರಿಂದ ನಮಗೆ ತಿಳಿಯುವ ವಿಷಯ ಏನೆಂದರೆ..ಮಹಿಳೆಯೊಬ್ಬಳು ಮನಸ್ಸು ಮಾಡಿದ್ರೆ ಯಾವ ಕೆಲಸ ಬೇಕಾದರೂ ಮಾಡಿ ಸೈ ಎಣಿಸಿಕೊಳ್ಳುತ್ತಾಳೆ ಎನ್ನುವುದು..ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂಬುದನ್ನ ತಿಳಿಸಿ..