ಲಾಕ್ ಡೌನ್ ವೇಳೆ ನಾರಾಯಣಮೂರ್ತಿಯವರು ಭಾರತೀಯರಿಗೆ ಕೊಟ್ಟ ಸಲಹೆ ಆದ್ರೂ ಏನ್ ಗೊತ್ತಾ.?

Advertisements

ಕೊರೋನಾ ಹಿನ್ನಲೆಯಲ್ಲಿ ಭಾರತ ದೇಶದಾದ್ಯಂತ ಲಾಕ್ ಡೌನ್ ಹೇರಲಾಗಿದ್ದು ಉದ್ಯಮಗಳು, ವ್ಯವಹಾರಗಳು ನಿಂತುಹೋಗಿವೆ. ಇನ್ನು ದೇಶದ ಅಭಿವೃದ್ಧಿ ಕುಂಠಿತವಾಗಿದ್ದು, ಭಾರತ ಆರ್ಥಿಕವಾಗಿ ಪಾತಾಳಕ್ಕೆ ಇಳಿದಿದೆ. ಹಾಗಾದ್ರೆ ಈ ಆರ್ಥಿಕ ನಷ್ಟವನ್ನ ಸರಿದೂಗಿಸುವುದು ಹೇಗೆ ಎಂದು, ಭಾರತದ ಟಾಪ್ ಬ್ಯುಸಿನೆಸ್ ಮ್ಯಾನ್ ಗಳಲ್ಲಿ ಒಬ್ಬರಾದ ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣಮೂರ್ತಿಯವರು ಏನ್ ಹೇಳಿದ್ದಾರೆ ನೋಡಿ..

Advertisements

ಹೌದು, ನಾರಾಯಣಮೂರ್ತಿಯವರು ಹೇಳಿರುವ ಪ್ರಕಾರ ಭಾರತದ ಆರ್ಥಿಕ ನಷ್ಟವನ್ನ ಸರಿದೂಗಿಸಲು ಭಾರತೀಯರು ವಾರದಲ್ಲಿ ೬೦ ಗಂಟೆಗಳ ಕಾಲ ಕೆಲಸ ಮಾಡುವ ಪ್ರತಿಜ್ಞೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಭಾರತ ವೇಗವಾಗಿ ಅಭಿವೃದ್ದಿ ಆಗಬೇಕಾದ್ರೆ ವಾರದ ಆರು ದಿನಗಳ ಕಾಲ ದಿನಕ್ಕೆ ಹತ್ತು ಗಂಟೆಗಳ ಕಾಲ ಕೆಲಸ ಮಾಡಬೇಕು. ಈಗಾಗಲೇ ವಾರದಲ್ಲಿ ೪೦ ಗಂಟೆ ಕೆಲಸ ಮಾಡುತ್ತಿದ್ದಾರೆ. ಅದರ ಬದಲು ೬೦ ಗಂಟೆ ಕೆಲಸ ಮಾಡಿದ್ರೆ ದೇಶ ವೇಗವಾಗಿ ಅಭಿವೃದ್ಧಿ ಹೊಂದಲಿದೆ ಎಂದು ನಾರಾಯಣಮೂರ್ತಿಯವರು ಹೇಳಿದ್ದಾರೆ.

ಇನ್ನು ಹನ್ನೆರಡರಿಂದ ಹದಿನೆಂಟು ತಿಂಗಳುಗಳ ಕಾಲ ಕೊರೋನಾ ಸೋಂಕು ಇರಲಿದ್ದು ಕೆಲಸದ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಾರ್ಪೋರೇಟ್ ಸೇರಿದಂತೆ ಕಂಪೆನಿಗಳಲ್ಲಿ ಹೆಚ್ಚು ಶಿಫ್ಟ್ ಗಳನ್ನ ಮಾಡಿಕೊಳ್ಳಬೇಕು. ಇನ್ನು ಭಾರತದಲ್ಲಿ ಕೊರೋನಾದಿಂದ ಜೀವ ಕಳೆದುಕೊಳ್ಳುವವರಿಗಿಂತ ಅದಕ್ಕಿನ ಹೆಚ್ಚು ಊಟ ಇಲ್ಲದೆ ಹಸಿವಿನಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ನಾರಾಯಣಮೂರ್ತಿಯವರು ಹೇಳಿದ್ದಾರೆ.