ಸಾವಿನಲ್ಲೂ ತಾಯಿಯನ್ನ ಹಿಂಬಾಲಿಸಿದ ಖ್ಯಾತ ನಟ

Cinema

ಬುಧವಾರ ಬೆಳಿಗ್ಗೆ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ತಮ್ಮ ಅಭಿನಯದಿಂದಲೇ ಲಕ್ಷಾಂತರ ಅಭಿಮಾನಿಗಳನ್ನ ಹೊಂದಿದ್ದ ಬಾಲಿವುಡ್ ಖ್ಯಾತ ನಟ ಇರ್ಫಾನ್ ಖಾನ್ ವಿಧಿವಶರಾಗಿದ್ದಾರೆ.

ಇತ್ತೀಚೆಗಷ್ಟೇ ಇವರ ತಾಯಿ ನಿಧನರಾಗಿದ್ದರು. ಈಗ ತನ್ನ ತಾಯಿ ಇಹಲೋಕ ತ್ಯಜಿಸಿದ ಕೇವಲ ೫ ದಿನಗಳಲ್ಲೇ, ೫೨ ವರ್ಷದ ಇರ್ಫಾನ್ ಖಾನ್ ವಿಧಿವಶರಾಗಿದ್ದಾರೆ. ಇನ್ನು ಲಾಕ್ ಡೌನ್ ಇದ್ದ ಹಿನ್ನಲೆಯಲ್ಲಿ ತನ್ನ ತಾಯಿಯ ಸಂಸ್ಕಾರಕ್ಕೂ ಕೂಡ ಹೋಗಲು ಆಗಿರಲಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕ ತನ್ನ ತಾಯಿಯ ಅಂತಿಮ ದರ್ಶನ ಪಡೆದಿದ್ದರು.

ಇನ್ನು ಕೊಲೊನ್ ಇನ್‍ಫೆಕ್ಷನ್‍ನಿಂದಾಗಿ ಮುಂಬೈನ ಕೋಕಿಲಾಬೆನ್ ಧೀರೂಭಾಯ್ ಅಂಬಾನಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಇನ್ನು ಕಳೆದ ಶನಿವಾರವಷ್ಟೇ ತನ್ನ ತಾಯಿ ಸಾಯಿಬಾ ಬೇಗಂ ಅವರನ್ನ ಕಳೆದುಕೊಂಡಿದ್ದ ಇರ್ಫಾನ್ ಖಾನ್ ರವರು, ಎರಡು ವರ್ಷಗಳ ಹಿಂದೆಯೇ ತಮಗೆ ಅಪರೂಪದ ಕಾಯಿಲೆ ಎಂದು ಮಾಹಿತಿ ಹಂಚ್ಚಿಕೊಂಡಿದ್ದು, ವಿದೇಶದಲ್ಲಿ ಚಿಕಿತ್ಸೆ ಕೂಡ ಪಡೆದುಕೊಂಡಿದ್ದರು.

ಇನ್ನು ಮುಂಬೈನಲ್ಲಿ ವಾಸ ಮಾಡುತ್ತಿದ್ದ ಖ್ಯಾತ ನಟ ಇರ್ಫಾನ್ ಖಾನ್ ತನ್ನ ಪತ್ನಿ ಸುತಾಪಾ ಹಾಗೂ ಇಬ್ಬರು ಮಕ್ಕಳನ್ನ ಬಿಟ್ಟು ಅಗಲಿದ್ದು, ಕುಟುಂಬ ಸೇರಿದಂತೆ ಇಡೀ ಚಿತ್ರರಂಗವನ್ನುಕಣ್ಣೀರಿನ ಕಡಲಲ್ಲಿ ಮುಳುಗಿಸಿದೆ.