2ನೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ಇಶಿಕಾ ಮುರುಗನ್.!ಖುಷಿ ಕ್ಷಣಗಳು ಹೇಗಿದ್ದವು ನೋಡಿ..

Entertainment

ಸ್ನೇಹಿತರೆ ಕಲರ್ಸ್ ಕನ್ನಡದಲ್ಲಿ ಈಗಾಗಲೇ ಸಾಕಷ್ಟು ವಿವಿಧ ಕಾರ್ಯಕ್ರಮಗಳು ಪ್ರಸಾರ ಆಗುತ್ತಿವೆ. ಕೆಲ ಕಾರ್ಯಕ್ರಮಗಳು ಅದರದೇ ಆದ ವೈಶಿಷ್ಟತೆ ಹೊಂದಿವೆ. ಇನ್ನು ಕೆಲವು ಶೋಗಳು ತುಂಬಾನೇ ಪ್ರಸಿದ್ಧಿ ಪಡೆದಿವೆ. ಹೌದು ರಾಜಾರಾಣಿ ಎನ್ನುವ ಕಾರ್ಯಕ್ರಮವು ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ವಿಷಯ ಈಗಾಗ್ಲೇ ಎಲ್ಲರಿಗೂ ಗೊತ್ತಿದೆ. ಈ ರಾಜಾರಾಣಿ ಎಂಬ ಕಾರ್ಯಕ್ರಮವನ್ನು ಕನ್ನಡ ಸಿನಿಮಾರಂಗದ ಖ್ಯಾತ ಹಿರಿಯ ನಟಿ ತಾರಾ ಹಾಗೂ ಮಜಾ ಟಾಕೀಸ್ ಸೃಜನ್ ಲೋಕೇಶ್ ಅವರು ಜಡ್ಜ್ ಆಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಹಾಗೆ ಬಿಗ್ ಬಾಸ್ ಮನೆಗೆ ಹೋಗಿ ಬಂದ ಹಾಗೂ ಅಕ್ಕ ಸೀರಿಯಲ್ ನಟಿ ಅನುಪಮಾ ರಾಜ ರಾಣಿ ಷೋವಿನ ನಿರೂಪಣೆ ಮಾಡುತ್ತಿದ್ದಾರೆ.

ರಾಜ ರಾಣಿ ಕಾರ್ಯಕ್ರಮ ಈಗಾಗಲೇ ಫೈನಲ್ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಸೆಮಿಫೈನಲ್ ಮುಗಿಸಿರುವ ರಾಜ-ರಾಣಿ ಕಾರ್ಯಕ್ರಮ ಇನ್ನೇನು ಫೈನಲ್ನಲ್ಲಿ ಯಾರು ವಿನ್ನರ್ ಜೋಡಿಯಾಗಿ ಹೊರ ಹೊಮ್ಮುತ್ತಾರೆಂದು ಅಭಿಮಾನಿಗಳು ಅಷ್ಟೇ ಕುತೂಹಲದಿಂದ ರಾಜ ರಾಣಿ ಫೈನಲ್ ನಡೆಯುವುದನ್ನೇ ಎದುರುನೋಡುತ್ತಿದ್ದಾರೆ. ಹೌದು ರಾಜ ರಾಣಿ ಕಾರ್ಯಕ್ರಮದಲ್ಲಿ ಅಗ್ನಿಸಾಕ್ಷಿ ಖ್ಯಾತಿಯ ಮಾಯ ಪಾತ್ರದಲ್ಲಿ ಕಾಣಿಸಿದ್ದ ನಟಿ ಇಶಿಕಾ ಹಾಗೂ ಮುರುಗನ್ ಜೋಡಿಯು ತುಂಬಾನೇ ಪ್ರಸಿದ್ಧಿ ಪಡೆದಿದೆ. ರಾಜ ರಾಣಿ ಕಾರ್ಯಕ್ರಮಕ್ಕೆ ನಿಜಜೀವನದಲ್ಲಿ ಮದುವೆ ಆಗಿರುವ ಕಿರುತೆರೆಯ ಕೆಲವು ಜೋಡಿಗಳು ಭಾಗವಹಿಸಿವೆ. ಇದೆ ಇಶಿಕ ಹಾಗೂ ಮುರುಗನ್ ಅವರು ಎರಡು ವರ್ಷದ ಹಿಂದೆ ಮದುವೆ ಆಗಿದ್ದರು. ಅವರ ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವ ಮೊನ್ನೆಯಷ್ಟೇ ಜರುಗಿದ್ದು ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡರು.

ಆ ಸವಿನೆನಪಿನ ಸುಂದರ ಸಂಭ್ರಮದ ಖುಷಿ ಕ್ಷಣಗಳನ್ನು ಇಲ್ಲೊಂದು ವಿಡಿಯೋ ಮೂಲಕ ಅಭಿಮಾನಿಗಳಲ್ಲಿ ನಟಿ ಇಶಿಕಾ ಹಂಚಿಕೊಂಡಿದ್ದಾರೆ. ಹೌದು ಮದುವೆ ವಾರ್ಷಿಕೋತ್ಸವದ ಫೋಟೋಗಳನ್ನು ಈ ವಿಡಿಯೋದಲ್ಲಿ ನೋಡಬಹುದು. ಹಾಗೆಯೇ ಈ ಜೋಡಿಗೆ ಶುಭವಾಗಲಿ ಎಂದು ಶುಭಕೋರಿ. ಇಷಿಕಾ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಆಕ್ಟಿವ್ ಇರುತ್ತಾರೆ. ತೆಲುಗು ಕಿರುತೆರೆಯಲ್ಲೂ ಕೂಡ ನಟಿ ಇಶಿಕ ಅವರು ಗಮನಸೆಳೆದಿದ್ದಾರೆ ಎನ್ನಲಾಗುತ್ತಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೇ ವಿಡಿಯೊ ನೋಡಿದ ಬಳಿಕ ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ, ಮತ್ತು ಜೋಡಿಗೆ ಒಳ್ಳೆಯದಾಗಲಿ ಎಂದು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು..