ಹೆಚ್ಚು ಸಿನಿಮಾಗಳನ್ನ ನೋಡ್ಬೇಡಿ ! ಹೀರೊಗಳನ್ನ ನಂಬಿ ಫೂಲ್ ಆಗ್ಬೇಡಿ ಎಂದ ಜಗ್ಗಣ್ಣ..

Cinema
Advertisements

ಕನ್ನಡ ಚಿತ್ರರಂಗದ ನವರಸ ನಾಯಕ ಹಿರಿಯ ನಟ ಜಗ್ಗೇಶ್ ಅವರು ಇತ್ತೀಚಿಗೆ ತಮ್ಮ ಹೇಳಿಕೆಗಳಿಂದಲೇ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ನಟ ದರ್ಶನ್ ವಿಚಾರದಲ್ಲಿ ಕೆ’ಟ್ಟದಾಗಿ ಮಾತನಾಡಿದ್ದಾರೆ ಎಂದು ಅವರ ಅಭಿಮಾನಿಗಳು ಜಗ್ಗೇಶ್ ಅವರ ಮೇಲೆ ಅ’ಟ್ಯಾಕ್ ಮಾಡಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗಳಿಗೆ ಕಾರಣವಾಗಿತ್ತು. ಇನ್ನು ಕನ್ನಡ ಚಿತ್ರಗಳನ್ನ ದೇಶವೆಲ್ಲಾ ನೋಡುವಂತಾಗಬೇಕು. ಒಳ್ಳೆಯ ಮಾರುಕಟ್ಟೆ ಸಿಗಬೇಕು ಎಂದು ಜಗ್ಗೇಶ್ ಅವರು ಸದಾ ಕನ್ನಡ ಚಿತ್ರಗಳಿಗೆ ಪ್ರೋತ್ಸಾಹ ಕೊಡುತ್ತಾ ಬಂದವರು.

[widget id=”custom_html-4″]

Advertisements

ಆದರೆ ಅದ್ಯಾಕೋ ಮೊನ್ನೆ ತಾನೇ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಹೆಚ್ಚಾಗಿ ಸಿನಿಮಾಗಳನ್ನ ನೋಡಿ ಮೂರ್ಖರಾಗಬೇಡಿ ಎಂದು ಯುವಕರಿಗೆ ಸಲಹೆ ಕೊಟ್ಟಿದ್ದಾರೆ. ಈಗಂತೂ ಯಾರ್ಯಾರೋ ಹಿರೋಗಳಾಗುತ್ತಿದ್ದಾರೆ..ಯಾವ ನಟ ನಟಿಯರು ನಿಮ್ಮ ಕಷ್ಟಕ್ಕೆ ಆಗುವುದಿಲ್ಲ.ಹೆಚ್ಚಾಗಿ ಸಿನಿಮಾಗಳನ್ನ ನೋಡೋದು ಬಿಟ್ಟು ಸಾಮಾಜಿಕ ಪರವಾದ ಸಿನಿಮಾಗಳನ್ನ ಮಾತ್ರ ನೋಡಿ ಎಂದು ಹಿರಿಯ ನಟ ಜಗ್ಗೇಶ್ ಅವರು ಹೇಳಿದ್ದಾರೆ.

[widget id=”custom_html-4″]

ಕೇವಲ ಕೆಲವು ಗಂಟೆಗಳ ಕಾಲ ಮನರಂಜನೆ ಕೊಡುವ ನಟ ನಟಿಯರು, ನಿಮಗೆ ದೇವರಾಗಬೇಕಿಲ್ಲ. ನಿಮ್ಮ ಊರು ಕೇರಿಗಳಿಗೆ ಬೇಕಾದ ಮೂಲ ಸೌಕರ್ಯಗಳನ್ನ ಯಾವ ನಟ ನಟಿಯರು ಮಾಡಿಸುವುದಿಲ್ಲ. ಈ ಸಿನಿಮಾರಂಗದಲ್ಲಿ ನನ್ನನ್ನೂ ಸೇರಿಸಿದಂತೆ ಎಲ್ಲರೂ ಸ್ವಾರ್ಥಿಗಳೇ..ಸಿನಿಮಾ ರಂಗದವರು ಯಾರೂ ನಿಮ್ಮನ್ನ ತಲೆ ಮೇಲೆ ಹೊರೆಸಿಕೊಂಡು ಓಡಾಡುವುದಿಲ್ಲ. ನಾನು ಸೇರಿದಂತೆ ಸಿನಿಮಾ ರಂಗದವರನ್ನ ನಂಬಿ ಮೂರ್ಖರಾಗಬೇಡಿ. ಸಿನಿಮಾದವರಿಂದ ನಿಮಗೆ ಸಿಗುವುದು ಏನೂ ಇಲ್ಲ, ನಮ್ಮನ್ನ ಎಲ್ಲಿಡಬೇಕೋ ಅಲ್ಲಿಡಿ.

[widget id=”custom_html-4″]

ಸಿನಿಮಾ ಬಿಡುಗಡೆಯಾದಾಗ ಹೀರೋಗಳಿಗಾಗಿ ಕಟೌಟ್ ಹಾಕುವುದು, ಹಾರ ಹಾಕುವುದು, ಹಾಲಿನ ಅಭಿಷೇಕ ಮಾಡುವುದನ್ನ ಬಿಟ್ಟು ನಿಮ್ಮ ಹೆತ್ತ ಅಪ್ಪ ಅಮ್ಮ ಹಾಗೂ ಕುಟುಂಬದವರ ಬಗ್ಗೆ ಯೋಚನೆ ಮಾಡಿ. ನೀವು ಜೀವನದಲ್ಲಿ ಹೀರೊ ಆಗಬೇಕಂದ್ರೆ ನಿಮ್ಮ ಅಂದೇ ತಾಯಿಗೆ ಹೆಗಲು ಕೊಟ್ಟು ಅವರಿಗೆ ಪ್ರೀತಿ ಕೊಡಿ. ಅದನ್ನ ಬಿಟ್ಟು ಹೀರೋಗಳು ಸಿನಿಮಾಗಳಲ್ಲಿ ಮಾಡುವ ಸ್ಟೈಲ್ ನ್ನ ನೋಡಿ ತಾವು ಅದರಂತೆ ಮಾಡಲು ಹೋಗಿ, ಇಂದಿನ ಯುವ ಪೀಳಿಗೆ ತಮ್ಮ ಜೀವನವನ ಹಾ’ಳು ಮಾಡಿಕೊಳ್ಳುತ್ತಿದ್ದಾರೆ.

ಆದರೆ ನೀವು ಕಷ್ಟದಲ್ಲಿದ್ದಾಗ ಯಾವ ನಟರು ಬರೋದಿಲ್ಲ..ಹಾಗಾಗಿ ಹೆಚ್ಚಾಗಿ ಸಿನಿಮಾಗಳನ್ನ ನೋಡಬೇಡಿ ಎಂದು ನಟ ಜಗ್ಗೇಶ್ ಅವರು ಯುವ ಜನಾಂಗಕ್ಕೆ ಸಲಹೆ ನೀಡಿದ್ದಾರೆ. ಸ್ನೇಹಿತರೇ, ಸದಾ ಕನ್ನಡ ಚಿತ್ರಗಳ ಬೆಳವಣಿಗೆಗೆ ಪ್ರೋತ್ಸಾಹ ಕೊಡುತ್ತಿದ್ದ ಜಗ್ಗೇಶ್ ಅವರು ಈ ರೀತಿಯಾಗಿ ಹೇಳಿದ್ದೇಕೆ ? ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ ಮಾಡಿ ತಿಳಿಸಿ..