ಇವನ ವಿಷಯ ಕೇಳಿ ಕಣ್ಣು ಕಿತ್ತರೂ ನಿದ್ದೆ ಬರ್ತಿಲ್ಲ ! ಇನ್ನು ಮುಂದೆ ಯಾರೇ ಬಂದ್ರೂ ನಂಬೋದಿಲ್ಲ ಎಂದಿದ್ದೇಕೆ ಜಗ್ಗೇಶ್ ?

News

ನೆನ್ನೆಯಿಂದ ಟ್ರೋಲ್ ಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಡ್ರೋನ್ ಪ್ರತಾಪ್ ನದ್ದೇ ಸುದ್ದಿ. ಯಾಕೆಂದರೆ ಪ್ರತಾಪ್ ಯಾವುದೇ ಸಾಧನೆ ಮಾಡಿಲ್ಲ ಎಲ್ಲಾ ಬುರಡೆ..ಅವರು ಹೇಳಿದ್ದಲ್ಲಾ ಸುಳ್ಳು..ಎಲ್ಲರನ್ನು ನಂಬಿಸಿ ಮೂರ್ಖರನ್ನಾಗಿ ಮಾಡಿದ್ದಾನೆ ಎಂದು ರಾಷ್ಟೀಯ ಮಟ್ಟದ OPIndia ಪ್ರತಾಪ್ ಬಗೆಗಿನ ಸತ್ಯವನ್ನ ಬಹಿರಂಗ ಮಾಡಿತ್ತು. ಅವರು ನಡೆಸಿದ ಫ್ಯಾಕ್ಟ್ ಚೆಕ್ ನಲ್ಲಿ ಪ್ರತಾಪ್ ಹೇಳಿಕೊಂಡಿರುವ ಹಾಗೆ 600 ಡ್ರೋನ್ ಗಳನ್ನ ತಯಾರು ಮಾಡಿಲ್ಲ..ಹಾಗೇನಾದರೂ ಇದ್ದರೆ ಅದಕ್ಕೆ ಸಂಬಂಧಿಸಿದ ವಿಡಿಯೋ ಆಗಲಿ ಫೋಟೋಗಳನ್ನಾಗಲಿ ತೋರಿಸಲಿ ಎಂದು OPIndia ವರದಿ ಮಾಡಿತ್ತು.

ಇನ್ನು ಪ್ರತಾಪ್ ಗೆ ಯಾವುದೇ ಮೆಡಲ್ ಬಂದಿಲ್ಲ..ಎಲ್ಲಾ ಸುಳ್ಳು ಎಲ್ಲರನ್ನ ಗುಗ್ಗುಗಳನ್ನಾಗಿ ಮಾಡಿದ್ದಾನೆ ಎಂದು ಒಪ್ ಇಂಡಿಯಾ ತನ್ನ fact checkನಲ್ಲಿ ವರದಿ ಮಾಡಿತ್ತು. ಇನ್ನು ಈ ಸುದ್ದಿಗಳ ಬಗ್ಗೆ ತಿಳಿದ ನವರಸ ನಾಯಕ ಜಗ್ಗೇಶ್ ರವರು ಪ್ರತಾಪ್ ಬಗ್ಗೆ ಮಾತನಾಡಿದ್ದಾರೆ. ಹೌದು, ಎರಡು ವರ್ಷಗಳ ಹಿಂದೆ ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿದ್ದ ಕಾರ್ಯಕ್ರಮವೊಂದಕ್ಕೆ ಇದೆ ಪ್ರತಾಪ್ ಗೆಸ್ಟ್ ಆಗಿ ಬಂದಿದ್ದರು. ನಾನು ನನ್ನ ತಾಯಿಯ ತಾಳಿಯನ್ನ ಅಡವಿಟ್ಟು ಇಷ್ಟು ದೊಡ್ಡ ಸಾಧನೆ ಮಾಡಿದ್ದೇನೆ ಎಂದು ಪ್ರತಾಪ್ ಹೇಳಿಕೊಂಡಿದ್ದರು. ಇನ್ನು ಅದೇ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದ ನಟ ಜಗ್ಗೇಶ್ ರವರು ಚಿಕ್ಕ ವಯಸ್ಸಿಗೆ ಇವರ ಸಾಧನೆಯನ್ನ ಮೆಚ್ಚಿ ತಮ್ಮದೆ ಆದ ರೀತಿಯಲ್ಲಿ ಪ್ರತಾಪ್ ಗೆ ಪ್ರೋತ್ಸಾಹ ಕೊಟ್ಟಿದ್ದರು. ಈಗ ಇದೆಲ್ಲಾ ಸುಳ್ಳು ಅಂತ ಗೊತ್ತಾದ ಮೇಲೆ ಜಗ್ಗೇಶ್ ರವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪ್ರತಾಪ್ ಬಗ್ಗೆ ಈ ರೀತಿ ಬರೆದುಕೊಂಡಿದ್ದಾರೆ..

ಕಣ್ಣು ಕಿತ್ತರು ನಿದ್ರೆ ಬರಲಿಲ್ಲಾ ಇವನ ವಿಷಯ ಕೇಳಿ..!ಇವನ ಬಗ್ಗೆ ಬರೆದದ್ದು ಪ್ರಯೋಜನವಿಲ್ಲಾ ಎಂದು ತೆಗೆದುಬಿಟ್ಟೆ..!ಕಷ್ಟ ಅಂತ ಬಂದವರಿಗೆ ಭುಜಕೊಡುತ್ತಿದ್ದೆ ಇನ್ನು ಮುಂದೆ ನನ್ನ ಬಳಿ ಯಾರು ಅನಾಮಿಕರು ಬಂದರು ನಂಬುವುದಿಲ್ಲಾ.!ನನ್ನ ಬದಲಾವಣೆ ಮಾಡಿದ ಪ್ರತಾಪ್ ಗೆ ಧನ್ಯವಾದ..!!ತುತ್ತು ಸಿಕ್ಕರು ಪ್ರಾಮಾಣಿಕವಾಗಿ ದುಡಿದು ಗಳಿಸಬೇಕು..!57ನೆ ವಯಸ್ಸಿಗೆ ಹೊಸ ಪಾಠ ಕಲಿತೆ..ಇದು ಕಲಿಯುಗ ಎಂದು ಬರೆದುಕೊಂಡಿದ್ದಾರೆ.