ಅಬ್ಬಬ್ಬಾ ! 5.1 ಕೋಟಿಗೆ ಮಾರಾಟ ಆಯ್ತು ಭೈರವ ಪೇಂಟಿಂಗ್..ಅಂತದ್ದೇನಿದೆ ಇದರಲ್ಲಿ ?

News
Advertisements

ಇಶಾ ಫೌಂಡೇಶನ್ ಸಂಸ್ಥಾಪಕರಾಗಿರುವ ಜಗ್ಗಿ ವಾಸುದೇವ್ ಅವರು ಇತ್ತೀಚೆಗಷ್ಟೇ ಭೈರವ ಎಂಬ ಪೇಂಟಿಂಗ್ ನ್ನ ಆನ್ಲೈನ್ ನಲ್ಲಿ ಮಾರಾಟಕ್ಕಿಟ್ಟಿದ್ದು ಅದು ಕೋಟಿಗಳಲ್ಲಿ ಮಾರಾಟಗೊಂಡಿದೆ. ಇನ್ನು ಒಂದು ತಿಂಗಳ ಕಾಲ ಆನ್ಲೈನ್ ನಲ್ಲಿ ಈ ಪೇಂಟಿಂಗ್ ನ್ನ ಹರಾಜಿಗೆ ಇಡಲಾಗಿತ್ತು. ಅಂತಿಮವಾಗಿ ಬರೋಬ್ಬರಿ ೫.೧ಕೋಟಿಗೆ ಬಿಡ್ ಆಗಿದ್ದು, ಈ ಹಣವನ್ನ ಸಾಮಾಜಿಕ ಕಾರ್ಯಗಳಿಗೆ ಬಳಸುತ್ತೇವೆ ಎಂದು ಇಶಾ ಫೌಂಡೇಶನ್ ಹೇಳಿದೆ.

ಏನಿದು ‘ಭೈರವ’ ಪೈಂಟಿಗ್ ? ಆನ್ಲೈನ್ ನಲ್ಲಿ 5.1 ಕೋಟಿಗೆ ಮಾರಾಟಗೊಂಡಿರುವ ಈ ಭೈರವ ಪೇಂಟಿಂಗ್ ಏಪ್ರಿಲ್ ನಲ್ಲಿ ಸಾವಿಗೀಡಾಗಿದ್ದ ಭೈರವ ಹೆಸರಿನ ಎತ್ತಿನ ನೆನಪಿಗಾಗಿ ಜಗ್ಗಿ ವಾಸುದೇವ್ ಅವರು ಈ ಪೇಂಟಿಂಗ್ ಮಾಡಿದ್ದಾರೆ. ಇನ್ನು ವಿಶೇಷ ಎಂದರೆ ಈ ಪೇಂಟಿಂಗ್ ನ ಬ್ಯಾಕ್ ಡ್ರಾಪ್ ನಲ್ಲಿ ಹಸುವಿನ ಸಗಣಿ ಬಳಸಿದ್ದು ಇದರ ಜೊತೆಗೆ ಸುಣ್ಣದ ಕಲ್ಲು, ಇದ್ದಿಲು ಮತ್ತು ಅರಿಶಿಣವನ್ನ ಬಳಸಲಾಗಿದೆ.

ಇನ್ನು ಭೈರವ ಪೇಂಟಿಂಗ್ ಮಾರಾಟವಾದ ಬಗ್ಗೆ ಜಗ್ಗಿ ವಾಸುದೇವ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಆದರೆ ಈ ಪೇಂಟಿಂಗ್ ಖರೀದಿಸಿದ್ದು ಯಾರೆಂಬುದನ್ನ ಅವರು ಹೇಳಿಲ್ಲ. ಇನ್ನು ಭೈರವ ಎತ್ತಿನ ಬಗ್ಗೆ ನಮ್ಮ ಪ್ರೀತಿಯ ಎತ್ತು ಬದುಕಿದ್ದಾಗ ಹಾಗೂ ಸತ್ತ ಮೇಲೆಯೂ ನಮ್ಮೇಲ್ಲರ ಸೇವೆ ಮಾಡುತ್ತಿದೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಇನ್ನು ಇದಕ್ಕೂ ಮುಂಚೆ ಕೂಡ ಜಗ್ಗಿ ವಾಸುದೇವ್ ಅವರ ಒಂದು ಪೇಂಟಿಂಗ್ ಬರೋಬ್ಬರಿ ೪ಕೋಟಿಗಳಿಗೆ ಮಾರಾಟವಾಗಿದ್ದು ಆ ಹಣವನ್ನ ಬೀಟ್ ದ ವೈರಸ್ ಎಂಬ ಸಂಸ್ಥೆಗೆ ದಾನವಾಗಿ ನೀಡಿದ್ದರು.