ಅಪ್ಪು ಕೊನೆ ಸಿನಿಮಾ ಜೇಮ್ಸ್ ಗೆ ಈ ನಟ ನಟಿಯರು ಪಡೆದ ಸಂಭಾವನೆ ಎಷ್ಟು ಗೊತ್ತಾ.?

Advertisements

ಸ್ನೇಹಿತರೇ, ಪವರ್ ಸ್ಟಾರ್, ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರು ಈಗ ನಮ್ಮೊಂದಿಗೆ ಇಲ್ಲ. ಆದ್ರೆ ಅವರು ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಸದಾ ಅಮರರಾಗಿರುತ್ತಾರೆ. ಇನ್ನು ಅಪ್ಪು ಅವರು ನಟಿಸಿದ ಕೊನೆಯ ಸಿನಿಮಾ ಜೇಮ್ಸ್. ಹೌದು, ಅಪ್ಪು ಅವರ ಹುಟ್ಟಿದ ಹಬ್ಬದ ದಿನ ಅಂದರೆ ಮಾರ್ಚ್ 17ರಂದು ಜೇಮ್ಸ್ ಸಿನಿಮಾವನ್ನ ಬಿಡುಗಡೆ ಮಾಡುವ ಸಲುವಾಗಿ ಎಲ್ಲಾ ರೀತಿಯ ಸಿದ್ದತೆಗಳು ನಡೆಯುತ್ತಿವೆ. ಅಪ್ಪು ಅಭಿಯಾನಿಗಳಂತೂ ಪುನೀತ್ ಅವರ ಕೊನೆಯ ಸಿನಿಮಾ ಜೇಮ್ಸ್ ನ್ನ ಕಣ್ತುಂಬಿಕೊಳ್ಳಲು ಕಾಯುತ್ತಿದ್ದು, ಜೇಮ್ಸ್ ಬಿಡುಗಡೆಯಾದ ವಾರ ಕರ್ನಾಟಕದಲ್ಲಿ ಹಬ್ಬ ನಡೆಯುವುದು ಅಂತೂ ಗ್ಯಾರಂಟಿ. ಇನ್ನು ದೊಡ್ಡ ಮನೆಯ ಅಭಿಯಾನಿಗಳು ಖುಷಿ ಪಡುವ ವಿಚಾರ ಏನೆಂದರೆ ಜೇಮ್ಸ್ ಸಿನಿಮಾದಲ್ಲಿ ಶಿವಣ್ಣ, ರಾಘಣ್ಣ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

[widget id=”custom_html-4″]

[widget id=”custom_html-4″]

ಇನ್ನು ಕನ್ನಡಿಗರು ತುಂಬಾ ಕುತೂಹಲದಿಂದ ಕಾಯುತ್ತಿರುವ ಜೇಮ್ಸ್ ಸಿನಿಮಾದಲ್ಲಿ ನಟಿಸಿರುವ ನಟ ನಟಿಯರು ಪಡೆದ ಸಂಭಾವನೆ ಎಷ್ಟು ಎಂಬುದರ ಬಗ್ಗೆ ಮುಂದೆ ನೋಡೋಣ ಬನ್ನಿ..ಇನ್ನು ಜೇಮ್ಸ್ ಚಿತ್ರದಲ್ಲಿ ದೊಡ್ಡ ತಾರಾ ಬಳಗದ ದಂಡೇ ಇದೆ ಎಂದು ಹೇಳಲಾಗಿದೆ. ಅಭಿಯಾನಿಗಳಿಗೆ ಅಪ್ಪು ಅವರನ್ನ ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಇದು ಕೊನೆಯ ಅವಕಾಶ ಎಂದು ಹೇಳಲು ತುಂಬಾ ಬೇಸರವಾಗುತ್ತೆ. ಅಂದಹಾಗೆ ಜೇಮ್ಸ್ ಸಿನಿಮಾದಲ್ಲಿ ಸ್ಯಾಂಡಲ್ವುಡ್ ನ ಹಿರಿಯ ನಟ ಅವಿನಾಶ್ ನಟಿಸಿದ್ದು, ಸಂಭಾವನೆಯಾಗಿ 15ಲಕ್ಷ ಹಣ ಪಡೆದಿದ್ದಾರೆ ಎಂದು ಹೇಳಲಾಗಿದೆ. ಕನ್ನಡ ಸಿನಿಮಾ ರಂಗದ ಖ್ಯಾತ ಹಾಸ್ಯ ನಟ ಸಾಧು ಕೋಕಿಲ ಅವರ ಹಾಸ್ಯದ ಮನರಂಜನೆ ಉಣಬಡಿಸಲಿದ್ದು ಸಾಧು ಅವರು ೩೦ ಲಕ್ಷ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ.

[widget id=”custom_html-4″]

Advertisements

[widget id=”custom_html-4″]

ಇನ್ನು ಸಾಧು ಕೋಕಿಲ ಜೊತೆಗೆ ಮತ್ತೊಬ್ಬ ಖ್ಯಾತ ಹಾಸ್ಯ ನಾಟಕ್ ಚಿಕ್ಕಣ್ಣ ಕೂಡ ಜೇಮ್ಸ್ ನಲ್ಲಿ ಕಾಣಿಸಿಕೊಂಡಿದ್ದು 25ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ತೆಲುಗಿನ ಶರತ್ ಕುಮಾರ್ ಅವರು ಕೂಡ ಈ ಸಿನಿಮಾದಲ್ಲಿದ್ದು 35ಲಕ್ಷ ಸಂಭಾವನೆ ಪಡೆದಿದ್ದಾರೆ. ತೆಲುಗಿನ ಮತ್ತೊಬ್ಬ ಖ್ಯಾತ ನಟ ಶ್ರೀಕಾಂತ್ ಜೇಮ್ಸ್ ನಲ್ಲಿ ನಟಿಸಿದ್ದು 30ಲಕ್ಷ ಸಂಭಾವನೆ ಪಡೆದಿದ್ದಾರೆ. ಜೇಮ್ಸ್ ಸಿನಿಮಾದ ನಾಯಕಿ ನಟಿ ಪ್ರಿಯಾ ಆನಂದ್ 1.50ಕೋಟಿಯವರೆಗೆ ಸಂಭಾವನೆ ಪಡೆದಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ೫ ಲಕ್ಷ, ಮತ್ತೊಬ್ಬ ಬಹುಭಾಷಾ ನಟ ಆದಿತ್ಯ ಮೆನನ್ ಸಂಭಾವನೆ 25 ಲಕ್ಷ,

[widget id=”custom_html-4″]

ಗಂಡ ಹೆಂಡತಿ ಖ್ಯಾತಿಯ ನಟ ತಿಲಕ್ ಗೆ 10 ಲಕ್ಷ, ನಟ ಮುಕೇಶ್ ರಿಷಿ ಅವರ ಸಂಭಾವನೆ ೧೫ ಲಕ್ಷ, ಸಕಾಲವಲ್ಲಭ ನಟ ರಂಗಾಯಣ ರಘು ಅವರಿಗೆ 30ಲಕ್ಷ, ನಟಿ ಅನುಪ್ರಭಾಕರ್ ಅವರಿಗೆ 10ಲಕ್ಷ, ಸಂಗೀತ ನಿರ್ದೇಶಕ ಚರಣ್ ರಾಜ್ ಅವರಿಗೆ 40ಲಕ್ಷ, ಜೇಮ್ಸ್ ಸಿನಿಮಾ ನಿರ್ದೇಶಕ ಚೇತನ್ ಅವರಿಗೆ 50ಲಕ್ಷ ಸಂಭಾವನೆ ನೀಡಲಾಗಿದೆ. ಇನ್ನು ಜೇಮ್ಸ್ ಸಿನಿಮಾದ ನಾಯಕ ನಟ ನಮ್ಮೆಲ್ಲರ ನೆಚ್ಚಿನ ಅಪ್ಪು ಅವರಿಗೆ 9 ರಿಂದ 10ಕೋಟಿಯವರೆಗೆ ಸಂಭಾವನೆ ನೀಡಲಾಗಿದೆ ಎಂದು ಹೇಳಲಾಗಿದೆ. ಅಪ್ಪು ನಟಿಸಿದ ಯಾವ ಸಿನಿಮಾ ನಿಮಗೆ ತುಂಬಾ ಇಷ್ಟವಾಗಿದೆ..ಕಾಮೆಂಟ್ ಮಾಡಿ ತಿಳಿಸಿ..

[widget id=”custom_html-4″]