ಅತ್ತೆ ಮಾವನಿಗೆ ಚಾಲೆಂಜ್ ಹಾಕಿ ತನ್ನ ಪತ್ನಿಯನ್ನ ಕೇವಲ ಎರಡೇ ವರ್ಷದಲ್ಲಿ PSI ಮಾಡಿ ಸೆಲ್ಯೂಟ್ ಹೊಡೆದ ಪತಿ !

Inspire

ಸ್ನೇಹಿತರೇ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಗಾದೆ ಮಾತಿದೆ. ಆದರೆ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ವಿಷಯ ಬಂದಾಗ ಬಹುತೇಕರಲ್ಲಿ ಇದು ತದ್ವಿರುದ್ದ. ಹೆಣ್ಣು ಮಕ್ಕಳನ್ನ ಮದ್ವೆ ಮಾಡಿ ಗಂಡನ ಮನೆಗೆ ಕಳುಹಿಸಿದ್ರೆ ಸಾಕು ಅನ್ನೋ ಎಷ್ಟೋ ಜನ ಪೋಷಕರೂ ಈಗಲೂ ಇದ್ದಾರೆ. ಇನ್ನು ಮದ್ವೆ ಆಗಿ ಗಂಡನ ಮನೆಗೆ ಹೋದ ಮೇಲೆ ಮಹಿಳೆ ಕಾಲೇಜಿಗೆ ಹೋಗಿ ವಿದ್ಯಾಭ್ಯಾಸ ಮಾಡುವುದೆಂದರೆ ಅದು ಅಷ್ಟೊಂದು ಸುಲಭವಲ್ಲ. ಮದ್ವೆಯಾದ ಮೇಲೆ ಗಂಡ ಮಕ್ಕಳು ಮನೆಯ ಜವಾಬ್ದರಿಯಲ್ಲೇ ಕಳೆದುಹೋಗುತ್ತದೆ. ಹೀಗೆ ಎಷ್ಟೋ ಮಹಿಳೆಯರು ತಮ್ಮ ಕನಸುಗಳನ್ನೆಲ್ಲಾ ಮೂಟೆ ಕಟ್ಟಿ ಜೀವನ ನಡೆಸಬೇಕಾಗುತ್ತದೆ.

ಆದರೆ ಇದೆಲ್ಲದಕ್ಕೂ ತದ್ವಿರುದ್ದ ಈ ವ್ಯಕ್ತಿ. ಈತನ ಹೆಸರು ಜಯದೀಪ್ ಪೈಸಲ್ ದೇಶಮುಖ್ ಎಂದು. ಮಹಾರಾಷ್ಟ್ರಕ್ಕೆ ಸೇರಿದ ಸತಾರಾ ಜಿಲ್ಲೆಯಲ್ಲಿ ವಾಸಮಾಡುತ್ತಿರುವ ಈತ ತನ್ನ ಬಾಲ್ಯದಿಂದಲೇ ತುಂಬಾ ಕಷ್ಟಪಟ್ಟು ಬೆಳೆದಿರುವ ವ್ಯಕ್ತಿ. ಉತ್ತಮ ವಿದ್ಯಾಭ್ಯಾಸ ಪಡೆದುಕೊಂಡಿದ್ದರೂ ಸಹ ಕಬ್ಬಿಣ ಹಾಲು ಮಾಡಿ ಜೀವನ ನಡೆಸುತ್ತಿದ್ದನು. ಇನ್ನು ಇದೆ ವೇಳೆ ಕಲ್ಯಾಣಿ ಎಂಬ ಯುವತಿಯ ಜೊತೆ ಜೊತೆ ಜಯದೀಪ್ ಗೆ ಪ್ರೀಟಿ ಹುಟ್ಟುತ್ತದೆ. ಇನ್ನು ಇವರ ಪ್ರೀತಿ ಮದುವೆಗೆ ತಿರುಗಿದ್ದು ಹೆಣ್ಣು ಕೇಳುವ ಸಲುವಾಗಿ ಕಲ್ಯಾಣಿಯ ಮನೆಗೆ ಹೋಗುತ್ತಾನೆ.

ಆದರೆ, ಹುಡುಗ ಕಬ್ಬಿನ ಹಾಲು ಮಾರುತ್ತಾನೆ ಎನ್ನೋ ಕಾರಣಕ್ಕೆ ಕಲ್ಯಾಣಿ ಪೋಷಕರು ತಮ್ಮ ಮಗಳನ್ನ ಜಯದೀಪ್ ಗೆ ಮದ್ವೆ ಮಾಡಿಕೊಡಲು ಒಪ್ಪೋದಿಲ್ಲ. ಆಗ ಜಯದೀಪ್ ನಿಮ್ಮ ಮಗಳನ್ನ ಮದ್ವೆಯಾದ ಎರಡೇ ವರ್ಷಕ್ಕೆ ಆಕೆಯನ್ನ ಪಿಎಸ್ ಐ ಆಗಿ ಮಾಡಿ ತೋರಿಸುವೆ ಎಂದು ಯುವತಿಯ ಪೋಷಕರಿಗೆ ಚಾಲೆಂಜ್ ಮಾಡುತ್ತಾನೆ. ಬಳಿಕ ಹಾಗೂ ಈಗೂ ಕಲ್ಯಾಣಿಯ ತಂದೆ ಇದಕ್ಕೆ ಒಪ್ಪಿ ಮದ್ವೆ ಮಾಡಿಕೊಡುತ್ತಾರೆ. ಇನ್ನು ಮದ್ವೆಯಾದ ಮೇಲೆ ಹನಿ ಮೂನ್ ಗೆ ಹೋಗುವುದು ಸಾಮಾನ್ಯ. ಆದ್ರೆ ಜಯದೀಪ್ ತನ್ನ ಪತ್ನಿ ಕಲ್ಯಾಣಿಗೆ ಓದಲು ಬೇಕಾದ ಎಲ್ಲಾ ಸೌಲಭ್ಯಗಳನ್ನ ಮಾಡಿಕೊಡುತ್ತಾನೆ.

ಇನ್ನು ತನ್ನ ಪತಿ ಜಯದೀಪ್ ಕೊಟ್ಟ ಬೆಂಬಲ, ಧೈರ್ಯ ಪ್ರೋತ್ಸಾಹದಿಂದ ಕಷ್ಟಪಟ್ಟು ಓದಿದ ಕಲ್ಯಾಣಿ ಮಹಾರಾಷ್ಟ್ರದ MPSC ಪರೀಕ್ಷೆಯಲ್ಲಿ ಉತ್ತೀರ್ಣಳಾಗುತ್ತಾಳೆ. ಬಳಿಕ ತರಭೇತಿ ಪೂರ್ಣಗೊಳಿಸಿದ ಕಲ್ಯಾಣಿ ಈಗ ಮುಂಬೈ ಪೊಲೀಸ್ ಇಲಾಖೆಯಲ್ಲಿ ಪಿಎಸ್ಐ ಪೊಲೀಸ್ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಇನ್ನು ತನ್ನ ಪತ್ನಿ ಪಿಎಸ್ಐ ಆಗಿ ತನ್ನ ಮುಂದೆ ಬಂದು ನಿಂತಾಗ ಗೌರವದಿಂದ ಹೆಂಡತಿಗೆ ಸೆಲ್ಯೂಟ್ ಹೊಡೆದಿದ್ದಾನೆ ಪತಿ ಜಯದೀಪ್. ಒಟ್ಟಿನಲ್ಲಿ ಹೆಣ್ಣುಮಕ್ಕಳು ಮದ್ವೆಯಾದ ಮೇಲೂ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಜಯದೀಪ್ ಅಂತಹವರು ನೈಜ ಉದಾಹರಣೆ.