ಲಾಕ್ ಡೌನ್ ನಲ್ಲಿ ಹೊಸ ಆವಿಷ್ಕಾರ ಮಾಡಿದ ಕರುನಾಡಿನ ರೈತ ! ಇಡೀ ದೇಶದಾದ್ಯಂತ ವೈರಲ್..

Inspire

ಸ್ನೇಹಿತರೇ, ಕೊರೋನಾ ಲಾಕ್ ಡೌನ್ ಇರೋ ಕಾರಣ ರೈತರು ಬಾರೀ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಕಾರಣ ಕೆಲ ರೈತರು ಹೂ, ಟೊಮೊಟೋ ಸೇರಿದಂತೆ ಹಣ್ಣು, ತರಕಾರಿಗಳನ್ನ ರಸ್ತೆಗೆಸೆದ ಘಟನೆಗಳನ್ನ ನೋಡಿದ್ದೇವೆ. ಆದರೆ ಇಲ್ಲೊಬ್ಬ ರೈತ ತಾನು ಬೆಳೆದ ಬೆಳೆಯಿಂದ ಹೊಸ ಅವಿಷ್ಕಾರವನ್ನೇ ಮಾಡಿದ್ದಾನೆ. ಹೌದು, ಶಿವಮೊಗ್ಗದ ಹೊಸನಗರ ತಾಲ್ಲೂಕಿಗೆ ಸೇರಿದ ನಿಟ್ಟೂರು ಗ್ರಾಮದ ರೈತನಾಗಿರುವ ಜಯರಾಮ್ ಶೆಟ್ಟಿ ಎಂಬುವವರು ತಮ್ಮ ಎಂಟು ಎಕರೆ ತೋಟದಲ್ಲಿ ಕಲ್ಲಂಗಡಿ ಹಣ್ನನ್ನ ಬೆಳೆದಿದ್ದರು. ಆದರೆ ಈಗ ಲಾಕ್ ಡೌನ್ ಕಾರಣ ವ್ಯಪಾರಗಳಿಲ್ಲದಿರುವುದರಿಂದ ಯಾರೂ ಕಲ್ಲಂಗಡಿ ಹಣ್ಣುಗಳನ್ನ ಕೊಳ್ಳಲಿಕ್ಕೆ ಮುಂದೆ ಬರಲಿಲ್ಲ. ೪ ಎಕರೆಯಲ್ಲಿ ಬೆಳೆದ ಬೆಳೆ ಕೈಗೆ ಸೇರದಂತೆ ನಷ್ಟವಾಗುವ ಭೀತಿ ಎದುರಾಗಿತ್ತು.

ಆದರೆ ಇದ್ಯಾವುದಕ್ಕೂ ಭಯ ಗೊಳ್ಳದೆ, ಈ ಕಲ್ಲಂಗಡಿ ಹಣ್ಣುಗಳಿಂದ ನಾವೇ ಏನಾದರು ಮಾಡಬಹುದಾ ಎಂದು ಯೋಚಿಸಿದ ರೈತ ಜಯರಾಮ್ ಅವರು ಸಿಹಿಯಾದ ಕಲ್ಲಂಗಡಿ ಹಣ್ಣಿನಿಂದ ಬೆಲ್ಲ ತಯಾರು ಮಾಡಿದ್ರೆ ಹೇಗೆ ಎಂಬ ಆಲೋಚನೆ ಬಂದಿದೆ. ಇನ್ನು ನಮಗೆಲ್ಲರಿಗೂ ಗೊತ್ತಿರುವಂತೆ ಕಬ್ಬಿನಲ್ಲಿ ಬೆಲ್ಲ ತಯಾರಿಸುವುದಂಟು. ಹಾಗಾಗಿ ಅದೇ ರೀತಿ ಕಲ್ಲಂಗಡಿ ಹಣ್ಣುಗಳಿಂದ ಬೆಲ್ಲ ತಯಾರು ಮಾಡಲು ಮುಂದಾಗಿದ್ದಾರೆ ಈ ರೈತ. ಇನ್ನು ಇವರು ವ್ಯವಸಾಯ ಮಾಡುವದಕ್ಕೆ ಮುಂಚೆ ಮುಂಬೈನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದರು ಎಂದು ಹೇಳಲಾಗಿದೆ. ಆದರೆ ಕಳೆದ ವರ್ಷದ ಕೊರೊನದಿಂದಾಗಿ ಊರಿಗೆ ಬಂದಿದ್ದ ಜಯರಾಮ್ ಅವರು ವ್ಯವಸಾಯ ಮಾಡಲು ಶುರು ಮಾಡಿದ್ದಾರೆ. ಜೊತೆಗೆ ಊರಿನಲ್ಲಿಯೇ ಹೋಟೆಲ್ ಕೂಡ ನಡೆಸುತ್ತಿದ್ದಾರೆ.

ಇನ್ನು ಈಗಿನ ಲಾಕ್ ಡೌನ್ ಕಾರಣದಿಂದಾಗಿ ಕೆಲ ವ್ಯಾಪಾರಿಗಳು ಕೆಜಿಗೆ ನಾಲ್ಕು ರೂಪಾಯಿ ಕೇಳಿದ್ದಾರೆ. ಆದರೆ ಇದರಿಂದ ಅಸಲು ಕೂಡ ಸಿಗೋದಿಲ್ಲ. ಹಾಗಾಗಿ ನಾನು ನಮ್ಮ ಹೋಟೆಲ್ ಸಿಬ್ಬಂದಿಯೊಂದಿಗೆ ಸೇರಿ ಕಲ್ಲಂಗಡಿ ಹಣ್ಣಿನಿಂದ ಬೆಲ್ಲ ತಯಾರು ಮಾದಿದ್ರೆ ಹೇಗೆ ಯೋಚನೆ ಮಾಡಿ ಶುರು ಮಾಡಿದೆವು. ಇನ್ನು ಶುರುವಿನಲ್ಲಿ ಕಲ್ಲಂಗಡಿಯಿಂದ ತಯಾರು ಮಾಡಿದ ಬೆಲ್ಲವನ್ನ ಕೆಲ ಸಿಹಿ ತಿನಿಸುಗಳಿಗೆ ಹಾಕಿ ತಿಂದಾಗ ಒಳ್ಳೆಯ ರುಚಿಯೇ ಸಿಕ್ಕಿತು. ಮೊದಲಿಗೆ ಕಲ್ಲಂಗಡಿ ಹಣ್ಣಿನಿಂದ ರಸ ತೆಗೆದು ಅದನ್ನ ಎರಡು ಬರಿ ಫಿಲ್ಟರ್ ಮಾಡಿ ಬಳಿಕ ನಾಲ್ಕು ಗಂಟೆಗಳ ಕಾಲ ದಪ್ಪ ಆಗುವವರೆಗೂ ಕುಡಿಸುತ್ತೇವೆ. ಒಂದು ಟನ್ ಹಣ್ಣಿನಿಂದ ಬರೋಬ್ಬರಿ ೭೫ಕೆಜಿ ವರೆಗೆ ಬೆಲ್ಲ ಮಾಡಬಹುದು ಎಂದು ರೈತ ಜಯರಾಮ್ ಶೆಟ್ಟಿ ಹೇಳಿದ್ದಾರೆ. ಇನ್ನು ರೈತರು ಮಾಡುವ ಇಂತಹ ಆವಿಷ್ಕಾರಗಳ ಬಗ್ಗೆ ಸರ್ಕಾರ ಸಂಶೋಧನೆ ನಡೆಸಿ ಅದನ್ನ ಬೆಳೆಸಿದಲ್ಲಿ ನೂರಾರು ರೈತರಿಗೆ ಇದರಿಂದ ಉಪಯೋಗವಾಗಬಹುದು.