ದಾರಿ ಮಧ್ಯೆ ಸಿಕ್ಕ 500 ರೂ ನೋಟುಗಳಿರುವ ಕಂತೆಯನ್ನ ಈ ಮಹಿಳೆ ಮಾಡಿದ್ದೇನು ಗೊತ್ತಾ ! ಈ ಕಾಲದಲ್ಲೂ ಇದೆಲ್ಲಾ ಸಾಧ್ಯನಾ..

Inspire

ಹಣ ಅಂದ್ರೆ ಹೆ’ಣ ಕೂಡ ಬಾಯಿ ಬಿಡುತ್ತೆ ಅನ್ನೋ ಗಾದೆ ಮಾತಿದೆ. ದುಡ್ಡಿದ್ರೆ ದುನಿಯಾ, ಈ ಹಣದ ವ್ಯಾಮೋಹ ಮನುಷ್ಯರಲ್ಲಿ ಎಷ್ಟರ ಮಟ್ಟಿಗೆ ಇದೆ ಎಂದರೆ ಇದರ ಮುಂದೆ ಸಂಬಂಧಗಳಿಗೂ ಕೂಡ ಪುಡಿಗಾಸು ಬೆಲೆ ಇಲ್ಲ. ಸ್ನೇಹಿತರೇ, ನಿಮಗೇನಾದರೂ ದಾರಿಯ ಮಧ್ಯೆ ಎಲ್ಲಿಯಾದರೂ ಹಣ ಸಿಕ್ಕಿತು ಎಂದರೆ, ಏನು ಮಾಡುತ್ತೀರಾ ಗೊತ್ತಿಲ್ಲ..ಆದರೆ ಇಲ್ಲೊಬ್ಬ ಮಹಿಳೆಗೆ ೫೦೦ ನೋಟುಗಳಿರುವ ಕಂಟೆಗಟ್ಟಲೆ ಹಣ ಸಿಕ್ಕಿದ್ದು, ಆ ಹಣವನ್ನ ಆ ಮಹಿಳೆ ಮಾಡಿದ್ದೇನು ಎಂಬುದನ್ನ ಕೇಳಿದ್ರೆ ನೀವು ಕೂಡ ಅಚ್ಚರಿ ಪಡ್ತೀರಾ.. ಹೌದು ಸ್ನೇಹಿತರೇ, ಹಣಕ್ಕೋಸ್ಕರ ಪ್ರಾ’ಣವನ್ನೇ ತೆಗೆದುಬಿಡುವಂತಹ ಇಂತಹ ಕಾಲದಲ್ಲಿ ನಿಯತ್ತಿನ ಜನ ಸಿಗುವುದು ತೀರಾ ಕಡಿಮೆಯೇ ಸರಿ.

ಆದರೆ ಜಾರ್ಕಂಡ್ ನ ಈ ಮಹಿಳೆ ಮಾಡಿರುವ ಕೆಲಸ ನೋಡಿದ್ರೆ ಇಂತಹವರು ಇರ್ತಾರ ಅಂತ ಅಚ್ಚರಿಯಾಗದೆ ಇರೋದಿಲ್ಲ. ಹೌದು, ರಸ್ತೆ ಮಧ್ಯೆ ಹೋಗುವಾಗ ಈ ಮಹಿಳೆಗೆ 500 ಮೌಲ್ಯದ ನೋಟುಗಳಿರುವ ಕಂತೆ ಗಟ್ಟಲೆ ಹಣ ಸಿಕ್ಕಿದೆ. ಸ್ನೇಹಿತರೇ, ನಮಗಾಗಲಿ ನಿಮಗಾಗಲಿ ರಸ್ತೆ ಮಧ್ಯೆ ಹೋಗುವಾಗ ಹತ್ತ, ಇಪ್ಪತ್ತ ಹಣ ಸಿಕ್ಕಿದ್ರೆ ಸಾಕು, ಈ ದಿನ ನಾನು ಒಳ್ಳೆಯವರ ಮುಖವನ್ನೇ ನೋಡಿದ್ದೇನೆ ತಮಗೆ ತಾವೇ ಅಂದುಕೊಂಡು ಸಿಕ್ಕ ಹಣವನ್ನ ಜಾಬಿನಲ್ಲಿ ಹಾಕಿಕೊಂಡು ಹೊರಟುಬಿಡುತ್ತಾರೆ. ಆದರೆ ಜಾರ್ಖಂಡ್ ನ ರಾಂಚಿ ಎಂಬ ಹಳ್ಳಿಯ ನಿವಾಸಿಯಾಗಿರುವ ರುಪಾದೇವಿ ಅನ್ನೋ ಈ ಮಹಿಳೆ ಮನೆಗೆ ದಿನಸಿ ಏನೋ ತರುವ ಸಲುವಾಗಿ ತಮ್ಮ ಮಗಳ ಜೊತೆ ಮಾರುಕಟ್ಟೆಗೆ ಹೋಗುತ್ತಾರೆ.

ಹೀಗೆ ಅವರು ರಸ್ತೆಯಲ್ಲಿ ಹೋಗುತ್ತಿರುವ ವೇಳೆ ಕವರ್ ಒಂದು ಈ ಮಹಿಳೆಯ ದೃಷ್ಟಿಗೆ ಬಿದ್ದಿದೆ. ಇನ್ನು ಆ ಕವರ್ ನ್ನ ಎತ್ತಿ ಅದರಲ್ಲಿ ಏನಿದೆ ಅಂತ ನೋಡಿದಾಗ ೫೦೦ ರೂಗಳ ನೋಟಿನ ಕಂತೆ ಗಟ್ಟಲೆ ಹಣ ಇರುವುದು ಕಾಣುತ್ತದೆ. ಗರಿ ಗರಿಯಂತಿದ್ದ ಆ ನೋಟಿನ ಕಟ್ಟಿನ ಮೇಲೆ ಬ್ಯಾಂಕ್ ಆಫ್ ಇಂಡಿಯಾ ಎಂಬ ರಿಬ್ಬನ್ ಒಂದನ್ನ ಹಾಕಲಾಗಿರುತ್ತದೆ. ಇನ್ನು ಈ ಬ್ಯಾಂಕ್ ನ ಬ್ರಾಂಚ್ ಅಲ್ಲೇ ಸ್ವಲ್ಪ ದೂರದಲ್ಲೇ ಇರುತ್ತದೆ. ಇನ್ನು ಆ ಮಹಿಳೆ ಸೀದಾ ಆ ನೋಟಿನ ಕಂತೆಯ ಕವರ್ ನ್ನ ಎತ್ತಿಕೊಂಡು ಬ್ಯಾಂಕ್ ಒಳಗೆ ಹೋಗಿ ಬ್ಯಾಂಕ್ ಮ್ಯಾನೇಜರ್ ಗೆ ಹಣ ಸಿಕ್ಕ ವಿಷಯದ ಬಗ್ಗೆ ಹೇಳುತ್ತಾಳೆ. ಇನ್ನು ಇದರ ಬಗ್ಗೆ ಬ್ಯಾಂಕ್ ನಲ್ಲಿ ಮ್ಯಾನೇಜರ್ ಹಣದ ಕಟ್ ನ್ನ ಚೆಕ್ ಮಾಡಿದಾಗ ನೋಟುಗಳಲ್ಲಿರುವ ಸೀರಿಯಲ್ ನಂಬರ್ ಗಳಿಂದ ಈ ಹಣ ನಮ್ಮ ಬ್ಯಾಂಕ್ ನದ್ದೇ ಎಂದು ಆ ಮ್ಯಾನೇಜರ್ ಗೆ ತಿಳಿಯುತ್ತದೆ.

ಇನ್ನು ಇದರ ಬಗ್ಗೆ ಸಂಪೂರ್ಣವಾಗಿ ವಿಚಾರಿಸಿ ನೋಡಿದಾಗ ಕೆಲ ಸಮಯದ ಹಿಂದಷ್ಟೇ ಸುಂದರ್ ಸಿಂಗ್ ಎನ್ನೋ ವ್ಯಕ್ತಿ ತನ್ನ ಮನೆಯ ಕಟ್ಟುವುದೋಕೋಸ್ಕರ ಬ್ಯಾಂಕ್ ನ ತನ್ನ ಖಾತೆಯಿಂದ ಸುಮಾರು ಮೂರೂ ಲಕ್ಷ ಹಣವನ್ನ ಡ್ರಾ ಮಾಡಿಕೊಂಡು ಹೋಗಿರುತ್ತಾನೆ. ಅದರಲ್ಲಿ ೫೦ ಸಾವಿರದ ಕಂತೆಯ ಕಟ್ ನ್ನ ಬೀಳಿಸಿಕೊಂಡು ಹೋಗಿರುತ್ತಾನೆ. ಬಳಿಕ ಸುಂದರ್ ಸಿಂಗ್ ಅವರನ್ನ ಬ್ಯಾಂಕ್ ಗೆ ಕರೆಸಿ ಅವರ ಹಣವನ್ನ ಹಿಂತಿರುಗಿಸಲಾಗುತ್ತದೆ. ಆಗ ಸುಂದರ್ ಸಿಂಗ್ ಅವರು ರೂಪಾದೇವಿಯವರ ಪ್ರಾಮಾಣಿಕತೆಯನ್ನ ಮೆಚ್ಚಿ ಅವರಿಗೆ ಧನ್ಯವಾದ ತಿಳಿಸಿದ್ದಲ್ಲದೆ ಬಹುಮಾನದ ರೂಪವಾಗಿ ೫ ಸಾವಿರ ರೂಗಳನ್ನ ಕೊಡಲು ಮುಂದಾಗುತ್ತಾರೆ.

ಆದರೆ ಆ ಹಣವನ್ನ ನಿರಾಕರಿಸಿದ ರೂಪಾದೇವಿಯವರು ನನಗೆ ಹಣದ ಅವಶ್ಯಕತೆ ಇಲ್ಲ ಎಂದು ಹೇಳಿ ಅಲ್ಲಿಂದ ರುಪಾದೇವಿಯವರು ಹೊರಟು ಬಿಡುತ್ತಾರೆ. ಇದನ್ನ ನೋಡಿದಾಗ ಈ ಕಲಿಯುಗದಲ್ಲೂ ಇಂತಹ ಪ್ರಾಮಾಣಿಕತೆಯುಳ್ಳ ಜನರು ಇದ್ದಾರೆ ಎಂದರೆ ಅಚ್ಚರಿಯಾಗದೆ ಇರೋದಿಲ್ಲ..ಸ್ನೇಹಿತರೇ, ನಿಮಗೇನಾದರೂ ಇಷ್ಟೊಂದು ಹಣ ಸಿಕ್ಕಿದ್ದರೆ ಏನು ಮಾಡುತ್ತಿದ್ದೀರಿ ? ಕಾಮೆಂಟ್ ಮಾಡಿ ತಿಳಿಸಿ..