ಲಾಕ್ ಡೌನ್ ಹಿನ್ನಲೆಯಲ್ಲಿ ಮಾನವೀಯತೆ ಮೆರೆದ ಜೊತೆ ಜೊತೆಯಲಿ ಅನು ಸಿರಿಮನೆ..

Kannada News - Entertainment

ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ, ಕರುನಾಡ ಜನರ ಮನಗೆದ್ದ ಫೇಮಸ್ ಟಾಪ್ ರೇಟೆಡ್ ಸೀರಿಯಲ್ ಜೊತೆ ಜೊತೆಯಲಿ. ಕಿರುತೆರೆ ಲೋಕದಲ್ಲಿ ಇತಿಹಾಸ ಸೃಷ್ಟಿಸಿದ ಸೀರಿಯಲ್ ಅಂದರೂ ತಪ್ಪಾಗೋದಿಲ್ಲ.

ಇನ್ನು ಸಾಲ್ಟ್ ಅಂಡ್ ಪೆಪ್ಪರ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ನಟ ಅನಿರುದ್ದ್ ಹಾಗೂ ಅವರ ಜೊತೆಯಾಗಿ ಮೊದಲ ಬಾರಿಗೆ ಕಿರುತೆರೆಯ ಧಾರಾವಾಹಿಯಲ್ಲಿ ನಟಿಸಿದ್ದುಅನು ಸಿರಿಮನೆ ಪಾತ್ರದಲ್ಲಿ ಮಿಂಚುತ್ತಿರುವವರು ಮೇಘಾ ಶೆಟ್ಟಿ.

ಇನ್ನು ತಮ್ಮ ಮೊದಲ ಧಾರಾವಾಹಿ ಜೊತೆ ಜೊತೆಯಲ್ಲಿ ನಟಿಸಿರುವ ಮೇಘಾ ಶೆಟ್ಟಿ ಬಹುಬೇಗ ಹೆಸರು ಮಾಡಿದ್ದಲ್ಲದೆ, ತಮ್ಮದೇ ಆದ ಅಭಿಮಾನಿ ಬಳಗವನ್ನ ಕೂಡ ಗಳಿಸಿಕೊಂಡಿದ್ದಾರೆ.

ಈಗ ಕೊರೋನಾ ಹಿನ್ನಲೆಯಲ್ಲಿ ಎಲ್ಲರೂ ಮೆಚ್ಚುವ ಕೆಲಸ ಮಾಡುತ್ತಿದ್ದಾರೆ ನಟಿ ಮೇಘಾ ಶೆಟ್ಟಿ. ಹೌದು, ಕೊರೋನಾ ಸೋಂಕಿನಿಂದ ಲಾಕ್ ಡೌನ್ ಆಗಿದ್ದು, ಬಹುತೇಕ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ಈಗಾಗಿ ಜನರ ನೆರವಿಗೆ ಬಂದಿರುವ ನಟಿ ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ನಿರ್ಗತಿಕರು, ಬಡಜನರಿಗೆ ಊಟ ಕೊಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇನ್ನು ಸಂಕಷ್ಟದಲ್ಲಿರುವ ಜನರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿರುವ ನಟಿ ಮೇಘಾ ಶೆಟ್ಟಿಯವರ ದೊಡ್ಡತನಕ್ಕೆ ಜನರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.