ಸೋಂಕಿತರ ಜೀವ ಉಳಿಸಲು ಮುಂದಾದ ವಿಪರೀತ ಟೀಕೆಗೆ ಒಳಗಾಗಿದ್ದ ಗಾಯಕಿ

Cinema
Advertisements

ಕೊರೋನಾ ಸೋಂಕಿಗೆ ಒಳಗಾದವರು ಸ್ವಯಂ ದಿಗ್ಬಂದನ ಮಾಡಿಕೊಳ್ಳಬೇಕು. ಸಾಮಾಜಿಕ ನಂತರ ಮಾಡಿಕೊಳ್ಳಬೇಕು. ಆದರೆ ಬಾಲಿವುಡ್ ನ ಫೇಮಸ್ ಗಾಯಕಿ ಕನಿಕಾ ಕಪೂರ್ ಸೋಂಕು ತಗುಲಿದ ಬಳಿಕವೂ ರಾಜಕಾರಣಿಗಳು ಗಣ್ಯರು ಭಾಗವಹಿಸಿದ್ದ ಪಾರ್ಟಿಯೊಂದರಲ್ಲಿ ಭಾಗವಹಿಸಿವಿಪರೀತ ಟೀಕೆಗೆ ಗುರಿಯಾಗಿದ್ದರು. ಆದರೆ ಈಗ ಸಮಾಜ, ಜನರು ಕೊಂಡಾಡುವಂತೆ ಮಾಡುತ್ತಿದ್ದು, ಜೀವ ಉಳಿಸುವ ನಿರ್ಧಾರ ಮಾಡಿದ್ದು, ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

Advertisements

ನಮಗೀಗಾಲೇ ಗೊತ್ತಿರುವಂತೆ ಕೊರೋನಾಗೆ ಸದ್ಯಕ್ಕೆ ಯಾವುದೇ ಮದ್ದಿಲ್ಲ. ಇನ್ನು ಈಗಾಗಲೇ ಕೊರೋನಾ ಸೋಂಕಿತರ ಮೇಲೆ ಪ್ಲಾಸ್ಮಾ ಥೆರಪಿಯನ್ನ ಪ್ರಯೋಗ ಮಾಡಲಾಗಿದ್ದು, ಸೋಂಕಿತ ವ್ಯಕ್ತಿ ಬೇಗ ಗುಣಮುಖರಾಗಲು ಇದು ಅತ್ತ್ಯತ್ತಮ ಮಾರ್ಗ ಎಂದುಈಗಾಗಲೇ ಸಾಬೀತು ಮಾಡಿದ್ದಾರೆ. ಕೊರೋನಾ ಸೋಂಕಿತ ವ್ಯಕ್ತಿಯನ್ನ ಬೇಗ ಗುಣಮಾಡಲು ಪ್ಲಾಸ್ಮಾ ಥೆರಪಿ ಅಗತ್ಯ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಈಗಾಗಲೇ ಹೇಳಿದ್ದಾರೆ. ಜೊತೆಗೆ ಕೊರೋನಾದಿಂದ ಗುಣಮುಖರಾದವರು ಬೇರೆ ಸೋಂಕಿತರಿಗೆ ಪ್ಲಾಸ್ಮಾ ದಾನ ಮಾಡುವ ಮೂಲಕ ಅವರು ಗುಣಮುಖರಾಗಲು ಸಹಾಯ ಮಾಡಬೇಕು ಎಂದು ಮನವಿ ಕೂಡ ಮಾಡಿಕೊಂಡಿದ್ದರು.

ಈಗ ಸೋಂಕು ತಗಲಿದ ಮೇಲೆ ಪಾರ್ಟಿಯಲ್ಲಿ ಭಾಗವಹಿಸಿ ವಿಪರೀತ ಟೀಕೆಗೆ ಒಳಗಾಗಿದ್ದ ಗಾಯಕಿ ಕಾಣಿಕಾ ಕಪೂರ್ ಈಗ ಪ್ಲಸ್ಮಾ ದಾನ ಮಾಡಲು ಮುಂದಾಗಿದ್ದಾರೆ.ಇನ್ನು ಈಗಾಗಲೇ ಕೊರೋನಾದಿಂದ ಗುಣಮುಖರಾಗಿರುವ ಗಾಯಕಿಯ ರಕ್ತ ಪರೀಕ್ಷೆ ಮಾಡಲಾಗಿದ್ದು, ವರದಿಯಲ್ಲಿ ಸರಿಯಾದ ರಿಸಲ್ಟ್ ಬಂದರೆ ಪ್ಲಸ್ಮಾ ದನಾ ಮಾಡುವುದಾಗಿ ಹೇಳಿದ್ದಾರೆ. ಇನ್ನು ಈ ಗಾಯಕಿಗೆ ಮಾರ್ಚ್ ೨೦ ರಂದೇ ಕೊರೋನಾ ಪಾಸಿಟಿವ್ ಆಗಿದ್ದರೂ, ಇಂಗ್ಲೆಂಡ್ ನಿಂದ ಬಂದಮೇಲೆ ಸ್ವಯಂ ದಿಗ್ಬಂದನಕ್ಕೆ ಒಳಗಾಗದೆ ಪಾರ್ಟಿಯಲ್ಲಿ ಭಾಗವಹಿಸಿ ನೆಟ್ಟಿಗರಿಂದ ಟೀಕೆಗೆ ಒಳಗಾಗಿದ್ದರು. ಈಗ ಪ್ಲಸ್ಮಾ ದಾನ ಮಾಡುವ ಮೂಲಕ ನೆಟ್ಟಿಗರ ಮೆಚ್ಚುಗಿಗೆ ಪಾತ್ರರಾಗಿದ್ದಾರೆ.