ನಾನು ಅಮೆರಿಕದಲ್ಲಿ ಹುಟ್ಟಿರಬಹುದು ಆದ್ರೆ ಕರ್ನಾಟಕ ನನ್ನದು..ಟಾಂಗ್ ಕೊಟ್ಟ ಚೇತನ್ !

Cinema
Advertisements

ಆ ದಿನಗಳು ಸಿನಿಮಾ, ಬಿರುಗಾಳಿ ಸಿನಿಮಾ ಖ್ಯಾತಿಯ ನಟ ಚೇತನ್. ಆ ದಿನಗಳು ಸಿನಿಮಾದಲ್ಲಿ ಮುಗ್ಧ ಹುಡುಗನಾಗಿ, ಕ್ಯೂಟ್ ಕ್ಯೂಟ್ ಆಗಿ ನಟಿಸಿದ್ದರು. ಇನ್ನ ಬಿರುಗಾಳಿಯಲ್ಲಂತೂ ಬಿರುಗಾಳಿ ತರನೇ ನುಗ್ಗಿ ಫೈಟ್ ಮಾಡ್ತಾ ಎಲ್ಲರ ಜನಮನ ಗೆದ್ದಿದ್ದರು. ಚಿಕ್ಕವಯಸ್ಸಿನಲ್ಲೇ ಮಗನನ್ನ ಕ’ಳೆದುಕೊಂಡ ತಾಯಿ ಹುಡುಕಾಟದಲ್ಲಿದ್ರೆ, ಮಗ ಮಾತ್ರ ಪರಿಚಯವೇ ಇಲ್ಲದಿರೋ ಹುಡುಗಿಯಾಗಿ ಇಡೀ ಸಿನಿಮಾದಲ್ಲಿ ಹುಡುಕುತ್ತಿದ್ದ. ಕೊನೆಗೆ ಆ ತಾಯಿಗೆ ಮಗನೇ ಸಿಗುವುದಿಲ್ಲ. ಇತ್ತ, ಆ ಪರಿಚಯವಿಲ್ಲದಿರೋ ಹೀರೋಯಿನ್ ಸಹ ದಕ್ಕಲ್ಲ. ಮತ್ತೊಂದೆಡೆ, ಬಾಲ್ಯದಿಂದ ಹೀರೋನನ್ನ ಇಷ್ಟಪಡುತ್ತಿದ್ದ ಬಾಲ್ಯದ ಗೆಳತಿ ಸಹ ಸಾ’ವ’ನ್ನಪ್ಪುತ್ತಾಳೆ. ಈ ಬಿರುಗಾಳಿ ಸಿನಿಮಾ ಮೂಲಕ ನಟ ಚೇತನ್ ಕನ್ನಡ ಚಿತ್ರರಂಗದಲ್ಲಿ ಮುನ್ನೆಲೆಗೆ ಬಂದಿದ್ದರು. ತದನಂತರ ಅಷ್ಟಾಗಿ ಹೆಚ್ಚು ಸಿನಿಮಾಗಳನ್ನ ನಟ ಚೇತನ್ ಮಾಡಲಿಲ್ಲ. ಇನ್ನ ನಟಿ‌ ನಿತ್ಯಮೆನನ್ ಜೊತೆ ಮೈನಾ ಸಿನಿಮಾ ಮಾಡಿ ನಟ ಚೇತನ್ ಫುಲ್ ಹಿಟ್ ಆಗಿದ್ರು. ಎರಡೂ ಕಾಲಿಲ್ಲದ ಸುಂದರ ಯುವತಿಯ ಪ್ರೇಮಪಾಶದಲ್ಲಿ ಬಿದ್ದು ಆ ಪ್ರೀತಿಯನ್ನ ಕಾಪಾಡಿಕೊಳ್ಳಲು ಹೋಗಿ ಮೈನಾ ಸಿನಿಮಾದಲ್ಲಿ ಹೀರೋ ಹೀರೋಯಿನ್ ಇಬ್ಬರು ಕೊನೆಗೆ ಸಾ’ವ’ನ್ನಪ್ತಾರೆ.

[widget id=”custom_html-4″]

Advertisements

ಹೀಗೆ, ಅತಿರಥ, ಸೂರ್ಯಕಾಂತಿ, ನೂರೊಂದು ನೆನಪು,ರಣಂ, ದಶಮುಖ ಸೇರಿ ಹಲವು ಚಿತ್ರಗಳಲ್ಲಿ ನಟ ಚೇತನ್ ಮಿಂಚಿದ್ದಾರೆ. ಅದಲ್ದೆ,
ತಮ್ಮ ವೈಚಾರಿಕತೆ, ಪ್ರೌಢತೆ, ಬುದ್ಧಿವಂತಿಕೆ ಸೇರಿ ಇವರು ಒಂದಿಲ್ಲೊಂದು ವಿಷಯದಿಂದ ಸುದ್ದಿಯಾಗ್ತಾನೇ ಇದಾರೆ. ತಮ್ಮ ಬಾಲ್ಯದ ಗೆಳತಿಯನ್ನ ಸರಳವಾಗಿ ಮದುವೆಯಾಗುವ ಮೂಲಕ ಸುದ್ದಿಯಾಗಿದ್ರು. ಅದೂ, ಅನಾಥ ಮಕ್ಕಳ ಜೊತೆ ಸಿಂಪಲ್ ಆಗಿ ಮದುವೆ ಆಗಿ, ಊಟ ಹಾಕಿಸಿದ್ದರು. ಸಾಮಾಜಿಕ ಕಾರ್ಯಕರ್ತರಾಗಿಯೂ ಕೆಲಸ ಮಾಡ್ತಿರುವ ನಟ ಚೇತನ್, ವಿವಿಧ ಹೋರಾಟಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಮೊನ್ನೆ ಮೊನ್ನೆಯಷ್ಟೇ, ಬ್ರಾಹ್ಮಣರು ಮತ್ತು ಬ್ರಾಹ್ಮಣ್ಯ ಕುರಿತು ಅ’ವಹೇ’ಳನಕಾರಿ ಹೇಳಿಕೆ ನೀಡಿ ಎಲ್ಲರ ಕೆಂ’ಗೆಣ್ಣಿಗೆ ಗುರಿ ಆಗಿದ್ರು. ಅದಲ್ದೇ, ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ನಟ ಚೇತನ್ ವಿರುದ್ಧ ಕಂ’ಪ್ಲೇಂಟ್ ಕೂಡ ದಾಖಲಾಗಿತ್ತು. ಪೊಲೀಸ್ ಮೆಟ್ಟಿಲೇರಿ, ಈ ಬಗ್ಗೆ ಸ್ಪಷ್ಟನೆ ಸಹ ಕೊಟ್ಟಿದ್ರು. ನಾನು ಯಾವುದೇ ಧರ್ಮ, ಜಾ’ತಿ ಬಗ್ಗೆ ಮಾತನಾಡಿಲ್ಲ. ನಂಗೆ ಯಾವುದೇ ದು’ರುದ್ದೇಶ ಇಲ್ಲ ಅಂತಲೂ ನಟ ಚೇತನ್ ಹೇಳಿದ್ದರು.

[widget id=”custom_html-4″]

ಇದೀಗ ಸಚಿವ ಶಿವರಾಮ್ ಹೆಬ್ಬಾರ್ ವಿ’ರುದ್ಧ ನಟ ಚೇತನ್ ಒಂದು ರೂಪಾಯಿ ಮಾ’ನನಷ್ಟ ಮೊ’ಕದ್ದಮೆ ಹೂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರೋ ಚೇತನ್, ಸಚಿವರಾಗಿದ್ದು ಸಾಮಾನ್ಯರಂತೆ ಮಾತನಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ. ಮಂತ್ರಿಯಾಗಿ ಅಧಿಕಾರದಲ್ಲಿದ್ದು, ಗಂಜಿ ಕಾಸು ಅಂತ ಮಾತನಾಡಿದ್ದಾರೆ. ಆ ವಿಚಾರವನ್ನು ಚರ್ಚೆಗೆ ಮಾತ್ರ ಮುಂದುವರೆಸಬೇಕು. ಅದನ್ನು ಬಿಟ್ಟು ನನ್ನ ಬಂ’ಧಿಸಿ ಜೈಲಿಗೆ ಹಾಕಿ ಅನ್ನೋದು ಎಷ್ಟು ಸರಿ? ಸಚಿವರು ಅವರ ಅಧಿಕಾರವನ್ನು ದು’ರುಪಯೋಗ ಪಡಿಸಿಕೊಂಡಿದ್ದಾರೆ. ಸಚಿವರ ಮಾತುಗಳು, ಟ್ವೀಟ್ ಗಳು ನಮ್ಮ ರಾಜ್ಯಕ್ಕೆ ಮಾ’ರ’ಕ ಎಂದು ನಟ ಚೇತನ್ ಕಿ’ಡಿಕಾ’ರಿದ್ದಾರೆ. ಪೌರತ್ವ ವಿಚಾರಕ್ಕೂ ಕ್ಲಾರಿಟಿ ಕೊಟ್ಟಿರೋ ನಟ ಚೇತನ್, ಪಾಸ್ ಪೋಟ್೯ ಇದ್ದವರು ಭಾರತೀಯರಲ್ಲವಾ? ನಾವು 70 ಸಾವಿರ ವರ್ಷಗಳ ಮೂಲ ನಿವಾಸಿಗಳು‌. ನನ್ನ ಅಜ್ಜಿ, ತಾತ ಸ್ವಾತಂತ್ರ್ಯ ಹೋರಾಟ ಮಾಡಿ, ಜೈ’ಲಿಗೆ ಹೋಗಿ ಬಂದಿದ್ದಾರೆ. ನಮ್ಮ ತಂದೆ- ತಾಯಿ ಭಾರತದಲ್ಲೇ ಹುಟ್ಟಿ ಬೆಳೆದವರು. ನಾನು ಅಮೆರಿಕದಲ್ಲಿ ಹುಟ್ಟಿರಬಹುದು. ಅಣ್ಣಾವ್ರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡನ್ನ ಕೇಳಿದಾಗ ಭಾವನಾತ್ಮಕವಾಗಿ ಫೀಲ್ ಆಗುತ್ತೆ. ನಾನು‌ ಕರ್ನಾಟಕದಲ್ಲಿ ಹುಟ್ಟಿಲ್ಲ ನಿಜ. ಆದ್ರೆ, ಕರ್ನಾಟಕ ನನ್ನದು. ಇಲ್ಲಿ ಪಾಸ್ ಪೋಟ್೯ ಮುಖ್ಯವಲ್ಲ. ಮಾನವೀಯತೆ ಮುಖ್ಯ. ಗಂಜಿ ಕಾಸಿನ ಬಗ್ಗೆ ಮಾತನಾಡುವ ಸಚಿವ ಶಿವರಾಮ್ ಹೆಬ್ಬಾರ್ ಭಾರತೀಯರಾ ಎಂದು ನಟ ಚೇತನ್ ಟಾಂಗ್ ಕೊಟ್ಟಿದ್ದಾರೆ.