ಸ್ಟೀಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ದೊಡ್ಡಣ್ಣ ಇಷ್ಟು ದೊಡ್ಡ ನಟನಾಗಿ ಬೆಳೆದೆದ್ದೇಗೆ ಗೊತ್ತಾ ? ಹೆಂಡತಿ ಮಕ್ಕಳು ಹೇಗಿದ್ದಾರೆ ನೋಡಿ..

Cinema
Advertisements

ಕನ್ನಡ ಚಿತ್ರರಂಗದ ಅತ್ಯದ್ಭುತ ನಟರಲ್ಲಿ ಹಿರಿಯ ನಟ ದೊಡ್ಡಣ್ಣ ಕೂಡ ಒಬ್ಬರು. ಶುರುವಿನಲ್ಲಿ ಖ’ಳನಟನಾಗಿ, ಪೋಷಕ ನಟನಾಗಿ ಮಿಂಚಿದ ದೊಡ್ಡಣ್ಣ ಬರಬರುತ್ತಾ ಕಾಮಿಡಿ ಪಾತ್ರಗಳಲ್ಲಿ ಹೆಚ್ಚಾಗಿ ಅಭಿನಯಿಸಿ ಅದರಲ್ಲಿ ಯಶಸ್ಸು ಕಂಡವರು. ೧೧ ನವಂಬರ್ ೧೯೪೯ರಲ್ಲಿ ಹಾಸನದ ಅರಿಸೀಕೆರೆಯಲ್ಲಿ ಹುಟ್ಟಿದ್ದ ದೊಡ್ಡಣ್ಣ ಅವರು ಥಿಯೇಟರ್ ನಟನಾಗಿ ತಮ್ಮ ವೃತ್ತಿ ಜೀವನ ಪ್ರಾರಂಭ ಮಾಡಿದ್ದು ಇದುವರೆಗೂ ಬರೋಬ್ಬರಿ 800ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಡಿವಾಳ ಸಮುದಾಯಕ್ಕೆ ಸೇರಿದ ಕುಟುಂಬದಲ್ಲಿ ಹುಟ್ಟಿದ ದೊಡ್ಡಣ್ಣ ದೊಡ್ಡ ಮಗನಾಗಿದ್ದರು. ತಾತ ಕಡ್ಲೆ ದೊಡ್ಡಪ್ಪ ಅವರ ಹೆಸರನ್ನೇ ದೊಡ್ಡಣ್ಣ ಹೆಸರಾಗಿ ಇಡಲಾಯಿತು.

[widget id=”custom_html-4″]

Advertisements

ದೊಡ್ಡಣ್ಣ ಥಿಯೇಟರ್ ಕಲಾವಿದನಾಗಿ ವಿಘ್ನೇಶ್ವರ ಕಲಾಸಂಘ ಭದ್ರಾವತಿಯಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭ ಮಾಡುತ್ತಾರೆ. ಇದೆ ವೇಳೆ ಭದ್ರಾವತಿಯ ಸ್ಟೀಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಾರೆ. ದೊಡ್ಡಣ್ಣ ತಮ್ಮ ಸ್ನೇಹಿತರ ಜೊತೆ ಸೇರಿ ಗಂಧರ್ವ ರಂಗ ನಾಟಕ ಎಂಬ ತಂಡವನ್ನ ಕಟ್ಟುತ್ತಾರೆ. ಬಳಿಕ ಬಣ್ಣದ ಲೋಕಕ್ಕೆ ಕಾಲಿಟ್ಟ ದೊಡ್ಡಣ್ಣ ಖ’ಳ ನಟ ಮತ್ತು ಪೊಲೀಸ್ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟನಾಗಿ ಬೆಳೆಯುತ್ತಾರೆ. ಬಳಿಕ ಕಾಮಿಡಿ ಪಾತ್ರಗಳ ಕಡೆ ವಾಲಿದ ದೊಡ್ಡಣ್ಣ ನಗೆಯ ರಸದೌತಣವನ್ನ ಪ್ರೇಕ್ಷಕರಿಗೆ ಬಡಿಸುತ್ತಾ ಯಶಸ್ವಿ ಕಾಮಿಡಿ ನಟನಾಗುತ್ತಾರೆ. ಕನ್ನಡ ಮಾತ್ರವಲ್ಲದೆ ತೆಲುಗು ಮತ್ತು ತಮಿಳಿನ ಕೆಲ ಚಿತ್ರಗಳಲ್ಲಿ ದೊಡ್ಡಣ್ಣ ನಟಿಸಿದ್ದಾರೆ.

[widget id=”custom_html-4″]

ದೊಡ್ಡಣ್ಣನ ಪತ್ನಿಯ ಹೆಸರು ಶಾಂತ ಎಂದು. ದಾಂಪತ್ಯ ಜೀವನಕ್ಕೆ ಕಾಲಿಟ್ಟು ಕೆಲ ವರ್ಷಗಳ ಕಾಲ ಪತ್ನಿಯ ಮೇಲೆ ಮುನಿಸಿಕೊಂಡಿದ್ದ ದೊಡ್ಡಣ್ಣ, ಮಕ್ಕಳಾದ ಬಳಿಕ ಪತ್ನಿಯನ್ನ ಅಪಾರವಾಗಿ ಪ್ರೀತಿ ಮಾಡುತ್ತಾರೆ. ಎರಡು ಹೆಣ್ಣು, ಒಂದು ಗಂಡು ಸೇರಿ ದೊಡ್ಡಣ್ಣನವರಿಗೆ ಮೂರು ಜನ ಮಕ್ಕಳಿದ್ದಾರೆ. ಪುತ್ರಿಯ ಹೆಸರು ಉಷಾ. ಇವರು ರಾಜಕಾರಣಿಯಾಗಿರುವ ವೀರೇಂದ್ರ ಎಂಬುವವರ ಜೊತೆ ಮದ್ವೆಯಾಗಿದ್ದಾರೆ. ಇನ್ನು ಎರಡನೆಯ ಪುತ್ರಿಯ ಹೆಸರು ಚೈತ್ರಾ. ಹಿರಿಯ ನಟ ದೊಡ್ಡಣ್ಣನವರ ಏಕೈಕ ಪುತ್ರನ ಹೆಸರು ಸುಗರೇಶ್ ಎಂದು. ಕೆಲ ತಿಂಗಳ ಇಂದಷ್ಟೇ ಉತ್ತರ ಕರ್ನಾಟಕದವರಾದ ಜ್ಯೋತಿ ಎಂಬುವವರ ಜೊತೆ ತಮ್ಮ ಮಗನ ಮದುವೆಯನ್ನ ತುಂಬಾ ಸರಳವಾಗಿ ನೆರವೇರಿಸಿದ್ದರು. ಸ್ನೇಹಿತರೆ, ದೊಡ್ಡಣ್ಣ ನಟಿಸಿದ ಯಾವ ಚಿತ್ರ ನಿಮಗೆ ಇಷ್ಟ ಎಂಬುದನ್ನ ಕಾ’ಮೆಂಟ್ ಮಾಡಿ ತಿಳಿಸಿ..