ಖ್ಯಾತ ಹಾಸ್ಯನಟ ಕೋಮಲ್ ಅವರ ಮನೆಯ ಗೃಹಪ್ರವೇಶ ಹೇಗಿತ್ತು ? ಯಾರೆಲ್ಲಾ ಬಂದಿದ್ರು ?

Cinema

ಕೋಪ ತರಿಸುವಷ್ಟು ಸುಲಭವಲ್ಲ ನಗಿಸುವುದು. ಆದ್ರೆ ಕೆಲವರು ಕೂತರು, ನಿಂತರು ಅವರೇನು ಮಾಡಿದ್ರೂ ಕೂಡ ನಗು ಬರುತ್ತದೆ. ಅವರ ಮ್ಯಾನರಿಸಂ ಆಗಿರುತ್ತದೆ. ತಮ್ಮಲ್ಲಿ ಏನೇ ಕಷ್ಟ ನೋವುಗಳಿದ್ದರೂ ಸಹ ಬೇರೆಯವರನ್ನ ನಕ್ಕು ನಗಿಸುವ ಅದ್ಭುತ ಶಕ್ತಿ ಹೊಂದಿರುತ್ತಾರೆ. ಹೀಗೆ ನಕ್ಕು ನಗಿಸುವ ಹಾಸ್ಯ ನಟರಲ್ಲಿ ಒಬ್ಬರು ನಟ ಕೋಮಲ್. ಇವರು ಸಿನಿಮಾ ರಂಗಕ್ಕೆ ಕಾಲಿಟ್ಟ ವೇಳೆ ನವರಸನಾಯಕ ನಟ ಜಗ್ಗೇಶ್ ಅವರ ತಮ್ಮ ಎಂದು ಗುರುತಿಸುತ್ತಿದ್ದರು.

ಆದರೆ ಕೇವಲ ಕೆಲವೇ ವರ್ಷಗಳಲ್ಲಿ ತಮ್ಮ ಅದ್ಭುತ ಹಾಸ್ಯಾಭಿನಯದಿಂದ ಕನ್ನಡಿಗರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದ ನಟ ಕೋಮಲ್ ಸ್ಯಾಂಡಲ್ವುಡ್ ನಲ್ಲಿ ತಮ್ಮದೇ ಆದ ಬ್ರಾಂಡ್ ಕ್ರಿಯೇಟ್ ಮಾಡಿದ್ರು. ಕೋಮಲ್ ಅವರ ಸಿನಿಮಾಗಳು ಬಿಡುಗಡೆಯಾಗುತ್ತಿದಂತೆ ಥಿಯೇಟರ್ ನತ್ತ ಹೋಗುತ್ತಿದ್ದ ಜನ ಅವರ ಹಾಸ್ಯಾಭಿನಯವನ್ನ ನೋಡಿ, ಕೊಂಚ ಹೊತ್ತಾದರೂ ಮನಸ್ಸಿಗೆ ನೆಮ್ಮದಿ ಸಿಕ್ತು ಎಲ್ಲ ಎಂಬ ಸಂತೋಷದಿಂದ ಥಿಯೇಟರ್ ನಿಂದ ಹೊರಗಡೆ ಬರುತ್ತಿದ್ದರು. ಒಂದು ಹಂತದ ಹೊತ್ತಿಗೆ ಸ್ಯಾಂಡಲ್ವುಡ್ ಸ್ಟಾರ್ ನಟರ ಮಟ್ಟಿಗೆ ಮಿಂಚಿದವರು ನಟ ಕೋಮಲ್ ಕುಮಾರ್ ಅವರು.

ಇನ್ನು ತಮ್ಮ ಕುಟುಂಬಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದ ನಟ ಕೋಮಲ್ ತಮ್ಮ ಕನಸಿನ ಮನೆಯೊಂದನ್ನ ಕಟ್ಟಿ ೨೦೧೯ರಲ್ಲಿ ಗುರುಪ್ರವೇಶ ಕೂಡ ಮಾಡಿದ್ರು. ಇನ್ನು ಈ ಕಾರ್ಯಕ್ರಮದಲ್ಲಿ ಜಗ್ಗೇಶ್ ಅವರು ಸೇರಿದಂತೆ ಅವರ ಕುಟುಂಬದ ಎಲ್ಲರೂ ಪಾಲ್ಗೊಂಡು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕುಟುಂಬದವರು, ಚಿತ್ರರಂಗದವರು ಹಾಗೂ ಆಪ್ತ ಸ್ನೇಹಿತರು ಗೃಹ ಪ್ರವೇಶದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾವು ಹಾಸ್ಯ ಚಿತ್ರಗಳಲ್ಲಿ ತುಂಬಾ ಬ್ಯುಸಿಯಾಗಿದ್ದ ಸಮಯದಲ್ಲೇ ಸಿನಿಮಾಗಳಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡ ಕೋಮಲ್ ಅವರು ಫಿಟ್ನೆಸ್ ಕಡೆಗೆ ಗಮನ ಕೊಟ್ಟು ಹೀರೋನಂತೆ ಎದ್ದು ಬಂದು ಕಾಮಿಡಿ ಸಿನಿಮಾಗಳನ್ನ ಬಿಟ್ಟು ನಾಯಕ ನಟನಾಗಿ ಕೆಂಪೇಗೌಡ ಭಾಗ ೨ ಚಿತ್ರದಲ್ಲಿ ಅಭಿನಯಿಸಿದ್ರು. ಆದರೆ ಚಿತ್ರ ಚೆನ್ನಾಗಿದ್ದರೂ ಸಹ ಯಾಕೋ ಅಷ್ಟಾಗಿ ಥಿಯೇಟರ್ ಗಳಲ್ಲಿ ನಿಲ್ಲಲಿಲ್ಲ.

ನಟ ಕೋಮಲ್ ಅವರ ಹಾಸ್ಯ ಪಾತ್ರಗಳನ್ನ ಇಷ್ಟಪಡುವ ದೊಡ್ಡ ಬಳಗವೇ ಇದೆ. ಹಾಗಾಗಿ ಮತ್ತಷ್ಟು ಗ್ಯಾಪ್ ತೆಗೆದುಕೊಳ್ಳದೆ ಕೋಮಲ್ ಅವರು ಮತ್ತೆ ವಿಭಿನ್ನ ಕತೆಯೊಂದಿಗೆ ತೆರೆ ಮೇಲೆ ಬಂದು ಪ್ರೇಕ್ಷಕರಿಗೆ ರಸದೌತಣ ನೀಡಲಿ, ಮತ್ತಷ್ಟು ನಮ್ಮನ್ನ ನಗಿಸಲು ಎಂಬುದೇ ನಮ್ಮ ಆಶಯ. ಸ್ನೇಹಿತರೇ, ಕೋಮಲ್ ಅವರ ಯಾವ ಸಿನಿಮಾ ನೋಡಿ ನೀವು ತುಂಬಾ ನಕ್ಕಿದ್ದೀರಿ ? ನಿಮ್ಮ ಅನಿಸಿಕೆ ತಿಳಿಸಿ..