ಟಿಕ್ ಟಾಕ್ ನಲ್ಲಿ ಟ್ರೋಲ್ ಮಾಡುವವರ ವಿರುದ್ಧ ಸಿಡಿದೆದ್ದ ನಟಿ.?

Kannada News - Cinema Kannada News - Entertainment

ಮಕ್ಕಳಿಂದ ಮುದುಕರವರೆಗೂ,ಯುವತಿಯರು, ಮಹಿಳೆಯರು, ಖ್ಯಾತ ನಟ ನಟಿಯರು ಹೀಗೆ ಪ್ರತಿಯೊಬ್ಬರಿಗೂ ಟಿಕ್ ಟಾಕ್ ವಿಡಿಯೋ ಮಾಡುವುದು ಒಂದು ಫ್ಯಾಶನ್ ಆಗಿಬಿಟ್ಟಿದೆ. ಸಿಕ್ಕ ಸಿಕ್ಕಲ್ಲಿ ಟಿಕ್ ಟಾಕ್ ವಿಡಿಯೊಗಳನ್ನ ಮಾಡಿ ಎಂಜಾಯ್ ಮಾಡುತ್ತಾರೆ.

ಒಂದು ಕಡೆ ಎಷ್ಟೋ ಪ್ರತಿಭೆಗಳಿಗೆ ಟಿಕ್ ಟಾಕ್ ಒಂದು ಅದ್ಭುತ ವೇದಿಕೆಯಾಗಿದ್ದರೆ, ಅಷ್ಟೇ ಮಂದಿ ಇದರಿಂದ ತಮ್ಮ ಪ್ರಾಣ, ಕಳೆದುಕೊಂಡಿದ್ದಾರೆ. ಮಾನಸಿಕ ಹಿಂಸೆಯನ್ನು ಸಹ ಅನುಭವಿಸಿದ್ದಾರೆ. ಕೆಲವರು ಟಿಕ್ ಟಾಕ್ ವಿಡಿಯೊಗಳನ್ನ ಬಳಸಿ ಟ್ರೋಲ್ ಮಾಡುವುದನ್ನ ಶುರುಹಚ್ಚಿಕೊಂಡಿದ್ದಾರೆ.

ಈಗ ಟಿಕ್ ಟಾಕ್ ನಲ್ಲಿ ಸ್ಯಾಂಡಲ್ವುಡ್ ನಟಿಯೊಬ್ಬರನ್ನ ಕೆಟ್ಟದಾಗಿ ಕಾಮೆಂಟ್ ಮಾಡಿ ಟ್ರೋಲ್ ಮಾಡಲಾಗುತ್ತಿದ್ದು, ಆ ನಟಿ ಟಿಕ್ ಟಾಕ್ ಟ್ರೋಲಿಗರ ವಿರುದ್ಧ ಸಿಡಿದೆದ್ದಿದ್ದು ದೂರು ಕೂಡ ದಾಖಲು ಮಾಡಿದ್ದಾರೆ.

ಹೌದು, ಆಪ್ತಮಿತ್ರ ಸೇರಿದಂತೆ ಹಲೋ ಮಾಮ, ಅತಂತ್ರ ಸೇರಿದಂತೆ ಕನ್ನಡದ ೧೫ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಈ ನಟಿಯ ಹೆಸರು ಭೂಮಿಕಾ. ನಂದಿನಿ ಲೇಔಟ್ ನ ರಾಜೀವ್ ಗಾಂಧಿ ನಗರದಲ್ಲಿ ವಾಸ ಮಾಡುತ್ತಿದ್ದಾರೆ. ನಟಿ ಭೂಮಿಕಾ ಕೂಡ ಟಿಕ್ ಟಾಕ್ ವಿಡಿಯೊಗಳನ್ನ ಮಾಡಿ ಅಪ್ಲೋಡ್ ಮಾಡುತ್ತಾರೆ.

ಆದರೆ ಭೂಮಿಕಾ, ನಾನು ಧರಿಸುವ ಬಟ್ಟೆಗಳ ಬಗ್ಗೆ ಕೆಟ್ಟದಾಗಿ ಟ್ರೋಲ್ ಮಾಡಲಾಗುತ್ತಿದ್ದು, ಇದರಿಂದ ನನಗೆ ಮಾನಸಿಕವಾಗಿ ನೋವಾಗಿದೆ ಎಂದು ಪೋಲೀಸರ ಬಳಿ ತನ್ನ ನೋವನ್ನ ಹೇಳಿಕೊಂಡಿದ್ದು ದೂರು ದಾಖಲಿಸಿದ್ದಾರೆ.