ನಟ ರಕ್ಷಿತ್ ಶೆಟ್ಟಿ ಲೈಫ್ ಸ್ಟೋರಿ ಹಾಗೂ ಅವರ ತಂಗಿ ಮತ್ತು ಅಣ್ಣ ಯಾರು ಈಗ ಹೇಗಿದ್ದಾರೆ ಗೊತ್ತಾ? ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ರಕ್ಷಿತ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ ಮತ್ತು ಯುವ ನಿರ್ದೇಶಕ ಅಂತಾನೇ ಹೇಳಬಹುದು.. ಇವರು 1983ರಲ್ಲಿ ಉಡುಪಿಯಲ್ಲಿ ಜನಿಸಿದರು ಈಗ ಇವರಿಗೆ 37 ವರ್ಷ ವಯಸ್ಸಾಗಿದೆ ಇವರು ಎನ್.ಎಮ್.ಎ.ಎಮ್. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನೀಯರಿಂಗ್ ಪದವಿಯನ್ನು ಪಡೆದುಕೊಂಡಿದ್ದರು ನಂತರ ಬೆಂಗಳೂರಿಗೆ ಬಂದು ಸಾಫ್ಟ್ ವೇರ್ ಇಂಜಿನಿಯರಿಂಗ್ ಆಗಿ ಕೆಲಸ ಶುರು ಮಾಡಿದರು.. ಆದರೆ ರಕ್ಷಿತ್ ಶೆಟ್ಟಿ ಅವರಿಗೆ ಸಿನಿಮಾ‌ ನಿರ್ದೇಶಕ ಆಗುವುದು ಅವರ ಆಸೆಯಾಗಿತ್ತು ಅದಕ್ಕಾಗಿ ಎರಡು ವರ್ಷಗಳ ನಂತರ ಕೆಲಸವನ್ನ ಬಿಟ್ಟು‌ ಸಿನಿಮಾ ರಂಗದಲ್ಲಿ ತಮ್ಮನ್ನು ತಾವು ತೊಡಗಿಕೊಂಡರು ಯಾವಾಗ ರಕ್ಷಿತ್ ಶೆಟ್ಟಿ ಅವರು ಕೆಲಸವನ್ನ ಬಿಟ್ಟರೊ ಅವರ ಜೀವನದಲ್ಲಿ ಕಷ್ಟಗಳು ಬರಲು ಶುರುವಾಯಿತು..

ತಿನ್ನುವ ಊಟಕ್ಕೂ ಕೂಡ ಯೋಚನೆ ಮಾಡುವಂತಹ ಪರಿಸ್ಥಿತಿ ಇವರಿಗೆ ಎದುರಾಗಿತ್ತು ಆ ಸಮಯದಲ್ಲಿ ಒಂದು ರೂಮಿನಲ್ಲಿ ಆರರಿಂದ ಎಂಟು ಜನರ ಮಲಗುತ್ತಿದ್ದರಂತೆ‌ ಸ್ವಲ್ಪ ವರ್ಷಗಳ ಕಾಲ ರಕ್ಷಿತ್ ಶೆಟ್ಟಿ ಅವರಿಗೆ ಸಿನಿಮಾದಲ್ಲಿ ಅವಕಾಶ ಸಿಗಲಿಲ್ಲ ‌.. ಇನ್ನೂ ರಕ್ಷಿತ್ ಶೆಟ್ಟಿ ಅವರು ಡೆಬಿ ಹೀರೋ ಆಗಿ‌‌ ಕೆಲಸ ಮಾಡಿದಂತಹ ಸಿನಿಮಾ‌ ತುಘಲಕ್.. ಆದರೆ ಆ ಸಿನಿಮಾ ಚಿತ್ರಮಂದಿರಗಳಲ್ಲಿ ಹೆಚ್ಚು ವೀಕ್ಷಣೆ ಪಡೆದಿರಲಿಲ್ಲ ಆ ಸಮಯದಲ್ಲಿ ರಕ್ಷಿತ್ ಶೆಟ್ಟಿ ಚಿತ್ರಮಂದಿರದಲ್ಲಿ ತುಂಬಾನೇ ಕಣ್ಣೀರು ಹಾಕಿದರು ಆ ಕಷ್ಟದ‌ ಸಮಯದಲ್ಲಿ ರಕ್ಷಿತ್ ಶೆಟ್ಟಿ ಅವರಿಗೆ ಮತ್ತೆ ಕೈಹಿಡಿದ ಸಿನಿಮಾ ಎಂದರೆ ಅದು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಇದು ಇವರಿಗೆ ಬ್ರೇಕ್ ಕೊಟ್ಟಂತಹ ಸಿನಿಮಾ ಅಂತಾನೇ ಹೇಳಬಹುದು.. ನಂತರ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ರಕ್ಷಿತ್ ಶೆಟ್ಟಿ ಅವರು ಕನ್ನಡದ ಚಿತ್ರರಂಗದ ನಂಬರ್‌ ಒನ್‌ ನಟನಾಗಿ ಹೊರ ಬಂದರು ಆ ಸಮಯದಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಸುಮಾರು 50 ಸಾವಿರ ಕೋಟಿಯಷ್ಟು ಹಣವನ್ನು ಕಲೆಕ್ಷನ್ ಮಾಡಿತು ಎನ್ನಲಾಗಿದೆ.

ಈಗ‌ ರಕ್ಷಿತ್ ಶೆಟ್ಟಿ ಅವರನ್ನು ಪ್ರತಿಯೊಬ್ಬರೂ ಕೂಡ ಸೋಲಿಲ್ಲದ ಸರದಾರ ಎಂದು ಕರೆಯುತ್ತಾರೆ ಇನ್ನೂ ರಕ್ಷಿತ್ ಶೆಟ್ಟಿ ಅವರಿಗೆ ಒಬ್ಬ ಅಣ್ಣ ಮತ್ತು ಮುದ್ದಾದ ತಂಗಿ ಕೂಡ ಇದ್ದಾರೆ.‌. ಇವರ ಅಣ್ಣನ ಹೆಸರು ರಂಜಿತ್ ಇವರಿಗೆ ಇಬ್ಬರು ಮಕ್ಕಳಿದ್ದು ಪ್ರಾಪರ್ಟಿ ಡೆವಲಪರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ ಇನ್ನೂ‌ ರಕ್ಷಿತ್‌‌‌ ಶೆಟ್ಟಿ ಅವರ ತಂಗಿಯ ಹೆಸರು ರಶ್ಮಿ ಅಂತ ಈಗಾಗಲೇ ಇವರಿಗೆ ಮದುವೆಯಾಗಿ ಇಬ್ಬರು ಗಂಡು ಮಕ್ಕಳು ಇದ್ದಾರೆ ರಕ್ಷಿತ್ ಶೆಟ್ಟಿ ಅವರ‌ ಕುಟುಂಬ ತುಂಬಾನೇ ದೊಡ್ದದು ಇವರು ವರ್ಷಕ್ಕೆ ಒಮ್ಮೆ ಒಟ್ಟಾಗಿ ಸೇರಿ ಸಂಭ್ರಮ ಆಚರಣೆ ಮಾಡುತ್ತಾರೆ.. ಸದ್ಯಕ್ಕೆ ರಕ್ಷಿತ್ ಶೆಟ್ಟಿ ಅವರಿಗೆ ಮದುವೆ ಮಾಡಲು ಕುಟುಂಬದವರು ಮುಂದಾಗಿದ್ದು ಆದರೆ ಹುಡುಗಿ ಯಾರೆಂದು ಇಲ್ಲಿಯವರೆಗೂ ತಿಳಿದು ಬಂದಿಲ್ಲ.‌.