ನಟಿ ವಿನಯಾ ಪ್ರಸಾದ್ ಅವರ ಗಂಡ ಯಾರು ಗೊತ್ತಾ? ಇವರು ಕೂಡ ತುಂಬಾನೇ ಫೇಮಸ್..

Cinema
Advertisements

ನಮಸ್ತೆ ಸ್ನೇಹಿತರೆ, ದಕ್ಷಿಣ ಭಾರತದ ಜನಪ್ರಿಯ ಚಿತ್ರನಟಿ ವಿನಯಾ ಪ್ರಸಾದ್ ಅವರು, ಇವರು ದೂರದರ್ಶನ ವಾಹಿನಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.. 1986ರಲ್ಲಿ ತೆರೆಕಂಡ ಜಿ.ವಿ. ಅಯ್ಯರ್ ರವರ ಮಧ್ವಾಚಾರ್ಯ ಸಿನಿಮಾದಲ್ಲಿ ಸಣ್ಣ ಪಾತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು ವಿನಯಾ ಪ್ರಸಾದ್ ಅವರು. ಅಷ್ಟೇ ಅಲ್ಲದೆ ಕನ್ನಡ ಚಿತ್ರರಂಗದ ಖ್ಯಾತ ಹಲವಾರು ಸಿನಿಮಾ ಮತ್ತು ಧಾರಾವಾಹಿಯಲ್ಲಿ ಕೂಡ ಅದ್ಭುತವಾಗಿ ನಟಿಸಿದ್ದಾರೆ..

[widget id=”custom_html-4″]

ಇನ್ನೂ ವಿನಯಾ ಪ್ರಸಾದ್ ಅವರ ಪತಿ ಕೂಡ ಖ್ಯಾತ ಸೆಲೆಬ್ರಿಟಿ ಎಂದು ಅನೇಕರಿಗೆ ತಿಳಿದಿಲ್ಲ.. ಹೌದು ವಿನಯಾ ಪ್ರಸಾದ್ ಅವರು 1988 ರಲ್ಲಿ ವಿ.ಆರ್.ಕೃಷ್ಣ ಪ್ರಸಾದ್ ಅವರನ್ನು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಅದರೆ ಕೃಷ್ಣ ಪ್ರಸಾದ್ ಅವರು ಅಚಾನಕವಾಗಿ ಚಿಕ್ಕ ವಯಸ್ಸಿನಲ್ಲಿಯೇ ಸಾ’ವನ್ನಪ್ಪಿದರು.. ಈ ದಂಪತಿಗಳಿಗೆ ಪ್ರತಿಮಾ ಪ್ರಸಾದ್ ಎಂಬ ಒಬ್ಬ ಮಗಳು ಕೂಡ ಇದ್ದಾಳೆ..

[widget id=”custom_html-4″]

Advertisements

ಸತತ ಏಳು ವರ್ಷಗಳ ಕಾಲ ವಿನಯಾ ಪ್ರಸಾದ್ ಅವರು ತಮ್ಮ ಪ್ರೀತಿಯ ಮಗಳ ಜೊತೆ ಏಕಾಂಗಿ ಜೀವನವನ್ನ ನಡೆಸಿದರು.‌ ನಂತರ 2002 ರಲ್ಲಿ ಸಿನಿಮಾ‌‌ ಶೂಟಿಂಗ್ ಮಾಡುವ ಸಮಯದಲ್ಲಿ ‌ವಿನಯ್ ಪ್ರಸಾದ್ ಅವರಿಗೆ ಜ್ಯೋತಿಪ್ರಕಾಶ್ ಅವರು ಪರಿಚಯವಾದರ..‌ ಅಷ್ಟೇ ಅಲ್ಲದೆ ಜ್ಯೋತಿಪ್ರಕಾಶ್ ಅವರಿಗೆ ವಿನಯಾ ಪ್ರಸಾದ್ ಅವರನ್ನು ತುಂಬಾನೇ ಇಷ್ಟ ಪಡುತ್ತಿದ್ದರು, ನಂತರ ಅವರನ್ನು ಒಪ್ಪಿಸಿ ಅವರೊಂದಿಗೆ ಮರು ವಿವಾಹವಾದರು.

[widget id=”custom_html-4″]

ಇನ್ನೂ ಜ್ಯೋತಿಪ್ರಕಾಶ್ ಅವರಿಗೂ ಕೂಡ ಇದು ಎರಡನೇ ಮದುವೆಯಾಗಿತ್ತು.. ಈಗ ವಿನಯಾ ಪ್ರಸಾದ್ ಅವರು ಪ್ರಸ್ತುತ ಬೆಂಗಳೂರಿನಲ್ಲಿ ತಮ್ಮ ಪತಿ ಜ್ಯೋತಿಪ್ರಕಾಶ್ ಮತ್ತು ಮಗಳು ಪ್ರತಿಮಾ ಪ್ರಸಾದ್ ಅವರೊಂದಿಗೆ ವಾಸಿಸುತ್ತಿದ್ದಾರೆ. ಇನ್ನೂ ಜ್ಯೋತಿಪ್ರಕಾಶ್ ಅವರು ಕೂಡ ಕೆಲವು ಸಿನಿಮಾಗಳಲ್ಲಿ ಕಾಯನ ಮಾಡಿದ್ದು ಹಲವಾರು ವೇದಿಕೆಯಲ್ಲಿ ವಿನಯಾ ಪ್ರಸಾದ್ ಹಾಗು ಜ್ಯೋತಿಪ್ರಕಾಶ್ ಅವರು ಒಟ್ಟಿಗೆ ನಿಂತು ಹಾಡುಗಳನ್ನು ಹಾಡಿದ್ದಾರೆ.. ಸ್ನೇಹಿತರೆ ನಟಿ ವಿನಯಾ ಪ್ರಸಾದ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..