ಪ್ರೀತಿಸುತ್ತಿದ್ದ ಹುಡುಗನ ಜೊತೆ ಬಿಗ್ ಬಾಸ್ ಖ್ಯಾತಿಯ ಸಂಜನಾ ಮದ್ವೆ ! ಹುಡುಗ ಯಾರು ಗೊತ್ತಾ ?

Entertainment
Advertisements

ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸಲ್ ನಾಲ್ಕರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ವೀಕ್ಷಕರ ಗಮನ ಸೆಳೆದಿದ್ದ ಸಂಜನಾ ಅವರ ಬಗ್ಗೆ ನಿಮಗೆ ಗೊತ್ತೇ ಇದೆ. ಇನ್ನು ಸಂಜನಾ ಅವರು ಬಿಗ್ ಬಾಸ್ ಮನೆಯಲ್ಲಿ ನಡೆದುಕೊಂಡ ರೀತಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಗಳಿಗೆ ಒಳಗಾಗಿದ್ದರು. ಇನ್ನು ಇದೆ ಸೀಸನ್ ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿದ್ದ ಒಳ್ಳೆ ಹುಡುಗ ಪ್ರಥಮ್ ಮತ್ತು ಸಂಜನಾ ನಡುವೆ ಸಾಕಷ್ಟು ಬಾರಿ ಜ’ಗಳ ಆಗಿದ್ದು ಇದೆ. ಇನ್ನು ಮತ್ತೊಬ್ಬ ಸ್ಪರ್ಧಿ ಭುವನ್ ಹಾಗೂ ಸಂಜನಾ ನಡುವೆ ಏನೋ ಇದೆ ಎಂಬ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇವರಿಬ್ಬರು ಮದ್ವೆ ಆಗಲಿದ್ದಾರಾ ಎಂಬ ಮಾತುಗಳು ಕೇಳಿಬಂದಿದ್ದವು.

[widget id=”custom_html-4″]

Advertisements

ಇನ್ನು ಈಗ ಸಂಜನಾ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬ್ರಹ್ಮಗಂಟು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಆದರೆ ಈಗ ಅವರ ಮದ್ವೆ ಬಗ್ಗೆ ಇದ್ದ ಉಹಾ ಪೋಹಗಳಿಗೆಲ್ಲಾ ತೆರೆ ಬಿದ್ದಿದೆ. ಹೌದು, ನಟಿ ಸಂಜನಾ ಮದ್ವೆ ಆಗುತ್ತಿದ್ದರೆ ಎಂದು ಹೇಳಲಾಗಿದೆ. ಆದರೆ ಹುಡುಗ ಬಿಗ್ ಬಾಸ್ ಭುವನ್ ಅಂತೂ ಅಲ್ಲ. ಸ್ವತಃ ಸಂಜನಾ ಮದ್ವೆ ಆಗುತ್ತಿರುವ ಹುಡುಗನ ಜೊತೆ ಇರೋ ಫೋಟೋವನ್ನ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇನ್ನು ಸಂಜನಾ ಪ್ರೀತಿ ಮಾಡುತ್ತಿರುವ ಹುಡುಗನ ಹೆಸರು ಮೋಹನ್ ಎಂದು. ಇನ್ನು ಸಂಜನಾ ಮೋಹನ್ ಅವರ ಕುಟುಂಬದವರು ಕೂಡ ಇವರ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

[widget id=”custom_html-4″]

ಇನ್ನು ಸಂಜನಾ ಹುಡುಗ ಮೋಹನ್ ಕೂಡ ಚಿತ್ರ ರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಮೊದಲಿಗೆ ಸಂಜನಾ ಮತ್ತು ಮೋಹನ್ ಸ್ನೇಹಿತರಾಗಿದ್ದರು ಎಂದು ಹೇಳಲಾಗಿದ್ದು ಸ್ನೇಹ ಪ್ರೀತಿಗೆ ತಿರುಗಿ ಮದುವೆಗೆ ಬಂದು ನಿಂತಿದೆ ಎಂದು ಹೇಳಲಾಗಿದೆ. ನನ್ನ ಜೀವನವನ್ನ್ನ ಸುಂದರ ಮಾಡಿದಕ್ಕೆ ನಿನಗೆ ಧನ್ಯವಾದಗಳು. ನಿನ್ನಂತಹ ಹುಡುಗ ನನ್ನ ಜೀವನದಲ್ಲಿ ಸಂಗಾತಿಯಾಗಿ ಬರುತ್ತಿರುವುದು ನನ್ನ ಪುಣ್ಯ ಅದು ಸಂಜನಾ ಹೇಳಿದ್ದಾರೆ. ಇನ್ನು ಈಗಾಗಲೇ ಎರಡು ಮನೆಗಳಲ್ಲಿ ಮದುವೆಯ ಸಿದ್ದತೆಗಳು ಶುರುವಾಗಿದ್ದು ಕೆಲವೇ ದಿನಗಳಲ್ಲಿ ಸಂಜನಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗಿದೆ.