ಅತೀ ಹೆಚ್ಚು ಸಂಭಾವನೆ ಪಡೆದುಕೊಳ್ಳೋ ಕನ್ನಡ ಸೀರಿಯಲ್ ನಟಿ ಯಾರು ಗೊತ್ತಾ ?ನಿಮ್ಮ ಮೆಚ್ಚಿನ ಧಾರವಾಹಿ ಹಾಗೂ ನಟಿ ಯಾರು ನೋಡಿ..

Entertainment
Advertisements

ಸ್ನೇಹಿತರೇ, ಈಗಂತೂ ಕಿರುತೆರೆಯಲ್ಲಿ ಮೂಡಿಬರುವ ಧಾರಾವಾಹಿಗಳಿಗೆ ಸಾಕಷ್ಟು ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಟ ಅನಿರುದ್ದ್ ಅಭಿನಯದ ಜೊತೆ ಜೊತೆಯಲಿ ಧಾರವಾಹಿ ಕಿರುತೆರೆಯಲ್ಲಿ ದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದು. ಹೌ ದು, ಇತ್ತೀಚಿಗೆ ಕೇವಲ ಮಹಿಳೆಯರು ಮಾತ್ರವಲ್ಲದೆ ಹುಡುಗರು ಸಹ ಧಾರಾವಾಹಿಗಳನ್ನ ನೋಡಲು ಶುರುಮಾಡಿದ್ದಾರೆ. ಇನ್ನು ಈ ಧಾರಾವಾಹಿಗಳಲ್ಲಿ ನಟಿಸುವ ನಟಿಯರ ವೈಯುಕ್ತಿಕ ಜೀವನ ಹಾಗೂ ಅವರು ತಮ್ಮ ನಟನೆಗಾಗಿ ಪಡೆಯುವ ಸಂಭಾವನೆ ಬಗ್ಗೆ ವೀಕ್ಷಕರಲ್ಲಿ ಕುತೂಹಲ ಇದ್ದೆ ಇದೆ. ಹಾಗಾದ್ರೆ ಸೀರಿಯಲ್ ನಾಯಕಿ ನಟಿಯರು ಒಂದು ಎಪಿಸೋಡ್ ನಲ್ಲಿ ಅಭಿನಯಿಸಲು ಪಡೆಯುವ ಸಂಭಾವನೆ ಎಷ್ಟು ಎಂಬುದರ ಬಗ್ಗೆ ನೋಡೋಣ ಬನ್ನಿ..

[widget id=”custom_html-4″]

Advertisements

ಜೊತೆ ಜೊತೆಯಲಿ ಧಾರವಾಹಿ ಮೂಲಕ ಫೇಮಸ್ ಆಗಿರೋ ನಟಿ ಮೇಘಾ ಶೆಟ್ಟಿ ಒಂದು ಎಪಿಸೋಡ್ ಗೆ 40 ಸಾವಿರದವರೆಗೆ ಸಂಭಾವನೆ ಪಡೆಯುತ್ತಿದ್ದಾರೆ. ಇನ್ನು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗಟ್ಟಿ ಮೇಲೆ ಧಾರವಾಹಿ ಕೂಡ ಟಾಪ್ ಟಿಆರ್ ಪಿ ರೇಟಿಂಗ್ ನ್ನ ಹೊಂದಿದ್ದು ಈ ಸೀರಿಯಲ್ ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಇನ್ನು ಗಟ್ಟಿಮೇಳ ಧಾರಾವಾಹಿಯಲ್ಲಿ ಅಮೂಲ್ಯ ಪಾತ್ರದ ಮೂಲಕ ರೌಡಿ ಬೇಬಿ ಎಂದು ಕರೆಸಿಕೊಳ್ಳುವ ನಟಿ ನಿಶಾ ಮಿಲನ ಅವರು ಒಂದು ಎಪಿಸೋಡ್ ಗೆ 35ಸಾವಿರದವರೆಗೆ ಸಂಭಾವನೆ ಪಡೆಯುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೇ ಶುರುವಾದ ಧಾರವಾಹಿ ಸತ್ಯ ಕೂಡ ವೀಕ್ಷಕರನ್ನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದು ಸತ್ಯ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಗೌತಮಿ ಜಾಧವ್ ಅವರೂ ಕೂಡ ಒಂದು ಎಪಿಸೋಡ್ ಗೆ 35ಸಾವಿರದವರೆಗೆ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗಿದೆ.

[widget id=”custom_html-4″]

ಇನ್ನು ಉತ್ತಮ ಧಾರಾವಾಹಿಯೆಂದು ಹೆಸರು ಪಡೆದಿರುವ, ಉತ್ತಮ ಟಿಆರ್ ಪಿ ರೇಟಿಂಗ್ ಕೂಡ ಹೊಂದಿರುವ ಕನ್ನಡತಿ ಸೀರಿಯಲ್ ನ ನಟಿ ರಂಜನಿ ರಾಘವನ್ ಒಂದು ಎಪಿಸೋಡ್ ಗೆ ೩೦ಸಾವಿರದವರೆಗೆ ಸಂಭಾವನೆ ಪಡೆಯುತ್ತಿದ್ದಾರೆ. ಇನ್ನು ಕಿರುತೆರೆಯ ಮತ್ತೊಂದು ಹಿಟ್ ಧಾರಾವಾಹಿಯಾದ ಕಮಲಿ ಸೀರಿಯಲ್ ನಲ್ಲಿ ಕಮಲಿ ಪಾತ್ರದಲ್ಲಿ ಹಳ್ಳಿ ಹುಡುಗಿಯಾಗಿ ನಟಿಸಿರುವ ನಟಿ ಅಮೂಲ್ಯ ಗೌಡ ಒಂದು ಎಪಿಸೋಡ್ ಗೆ ಸಂಭಾವನೆ ರೂಪದಲ್ಲಿ 25ಸಾವಿರ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಇದೆ. ಜೀ ಕನ್ನಡದ ಮತ್ತೊಂದು ಧಾರವಾಹಿ ಪಾರು ನಲ್ಲಿ ನಟಿಸಿರುವ ಪಾರು ಪಾತ್ರದ ನಟಿ ಮೋಕ್ಷಿತಾ ಪೈ ಅವರು ಒಂದು ಎಪಿಸೋಡ್ ಗೆ ೨೦ಸಾವಿರದವರೆಗೆ ಸಂಭಾವನೆ ಪಡೆಯುತ್ತಿದ್ದಾರೆ.

[widget id=”custom_html-4″]

ಇನ್ನು ಮಂಗಳ ಗೌರಿ ಧಾರಾವಾಹಿಯಲ್ಲಿ ನಟಿಸಿರುವ ನಟಿ ಕಾವ್ಯಶ್ರೀ ಒಂದು ಎಪಿಸೋಡ್ ಗೆ 25ಸಾವಿರ ಪಡೆದ್ರೆ, ಮುದ್ದುಲಕ್ಷ್ಮಿಯ ನಟಿ ಅಶ್ವಿನಿ 20ಸಾವಿರ ಪಡೆಯುತ್ತಿದ್ದಾರೆ. ಇನ್ನು ತನ್ನದೇ ಆದ ಜನಪ್ರಿಯತೆ ಪಡೆದುಕೊಂಡಿರುವ ಗೀತಾ ಧಾರಾವಾಹಿಯ ನಟಿ ಭವ್ಯ ಗೌಡ ಒಂದು ಎಪಿಸೋಡ್ ಗೆ 15ಸಾವಿರದವರೆಗೆ ಸಂಭಾವನೆ ಪಡೆಯುತ್ತಿದ್ದಾರೆ. ಇನ್ನು ಗಿಣಿರಾಮ ಸೀರಿಯಲ್ ಖ್ಯಾತಿಯ ನಟಿ ನಯನ ಒಂದು ಎಪಿಸೋಡ್ ಗೆ ೨೦ಸಾವಿರದವರೆಗೆ ಸಂಭಾವನೆ ಪಡೆದ್ರೆ, ನಮ್ಮನೆಯುವರಾಣಿ ಧಾರವಾಹಿ ಖ್ಯಾತಿಯ ಅಂಕಿತ 15ಸಾವಿರದವರೆಗೆ ಒಂದು ಎಪಿಸೋಡ್ ಸಂಭಾವನೆಯಾಗಿ ಪಡೆಯುತ್ತಿದ್ದಾರೆ. ಇನ್ನು ನನ್ನರಸಿ ಧಾರಾವಾಹಿಯಲ್ಲಿ ನಟಿಸಿರುವ ನಟಿ ಕೌಸ್ತುಭ ಅವರು ೧೫ಸಾವಿರದವರೆಗೆ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಸ್ನೇಹಿತರೆ, ನಿಮ್ಮ ಮೆಚ್ಚಿನ ಧಾರವಾಹಿ ಹಾಗೂ ಮೆಚ್ಚಿನ ನಟಿ ಯಾರೆಂದು ಕಾಮೆಂಟ್ ಮಾಡಿ ತಿಳಿಸಿ..