ಆಸ್ಪತ್ರೆ ಸೇರಿದ ಅಭಿನಯ ಶಾರದೆ! ಏನಾಗಿದೆ ಹಿರಿಯ ನಟಿ ಜಯಂತಿಗೆ?

Cinema

ಕನ್ನಡ ಚಿತ್ರರಂಗದ ಅಭಿನಯ ಶಾರದೆ ಎಂದು ಕರೆಸಿಕೊಂಡಿರುವ ಹಿರಿಯ ನಟಿ ಜಯಂತಿಯವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಯಂತಿಯವರು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ICUನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪುತ್ರ ಕೃಷ್ಣಕುಮಾರ್ ಹೇಳಿದ್ದಾರೆ.

ಇನ್ನು ನಟಿ ಜಯಂತಿಯವರು ಹಲವು ದಿನಗಳಿಂದ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಕಳೆದ ಎರಡು ದಿನಗಳಿಂದ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಕೊರೋನಾ ಹಿನ್ನೆಲೆಯಲ್ಲಿ ಕೊರೋನಾ ಟೆಸ್ಟ್‌ ಕೂಡ ಮಾಡಿಸಲಾಗಿದ್ದು ರಿಪೋರ್ಟ್ ನೆಗಟೀವ್ ಬಂದಿದೆ ಎಂದು ಹೇಳಲಾಗಿದ್ದು ಭಯಪಡುವ ಯಾವುದೇ ಕಾರಣ ಇಲ್ಲ ಎಂದು ವೈದ್ಯಾದಿಕಾರಿಗಳು ತಿಳಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ನಟರೊಂದಿಗೆ ನಟಿಸಿ ಅಭಿನಯ ಶಾರದೆ ಹೆಸರನ್ನು ಪಡೆದುಕೊಂಡಿರುವ ಹಿರಿಯ ನಟಿ ಜಯಂತಿಯವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂಬುದೇ ಕನ್ನಡಿಗರ ಆಶಯ..