ಪತಿಯ ಅಂತ್ಯಕ್ರಿಯೆ ವೇಳೆ ವೀರ ಯೋಧನ ಪತ್ನಿ ಆಡಿದ ಮಾತುಗಳನ್ನ ಕೇಳಿದ್ರೆ ಮೈ ರೋಮಾಂಚನವಾಗುತ್ತೆ.!

News

ನಾಲ್ಕು ದಿನಗಳ ಹಿಂದಷ್ಟೇ ಜಮ್ಮು ಮತ್ತು ಕಾಶ್ಮೀರದ ಹಂದ್ವಾರ್ ನಲ್ಲಿ ನಡೆದ ಶತ್ರುಗಳ ವಿರುದ್ದದ ಕಾರ್ಯಾಚರಣೆಯಲ್ಲಿ ಕರ್ನಲ್ ಅಶುತೋಷ್ ಶರ್ಮಾ ಹುತಾತ್ಮರಾಗಿದ್ದಾರೆ. ಈ ವೀರ ಯೋಧನ ಹೆಸರು ಕೇಳಿದ್ರೆ ಶತ್ರುಗಳು ಬೆಚ್ಚಿಬೀಳುತ್ತಿದ್ದರು.

ಇನ್ನು ಇಂತಹ ರಕ್ಕಸರ ಕಾರ್ಯಾಚರಣೆಯಲ್ಲಿ ಸದಾ ಮುಂದೆ ನಿಲ್ಲುತ್ತಿದ್ದ ಎರಡು ಬಾರಿ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದ, ಕರ್ನಲ್ ಅಶುತೋಷ್ ಶರ್ಮಾರವರು ಮೇ ೩ರಂದು, ಸ್ಥಳೀಯರನ್ನು ಒತ್ತೆಯಾಗಿ ಇಟ್ಟುಕೊಂಡಿದ್ದ ಶತ್ರುಗಳ ವಿರುದ್ಧ ಹೋರಾಡಲು ಹೋಗಿ ಹುತಾತ್ಮರಾಗಿದ್ದಾರೆ.

ಈಗ ಇಂತಹ ವೀರ ಯೋಧನ ಪತ್ನಿಯಾಗಿರುವ ಪಲ್ಲವಿ ಶರ್ಮಾ ಭಾರತೀಯ ಸೇನೆ ಸೇರಿ ದೇಶ ಸೇವೆ ಮಾಡಲು ನಾನು ಸಿದ್ದ, ಒಂದು ನನಗೆ ಅದು ಸಾಧ್ಯವಾಗದಿದ್ದರೆ ಸೇನೆಗೆ ತನ್ನ ಮಗಳನ್ನ ಸೇರಿಸುತ್ತಾನೆ ಎಂದು ವೀರೋಚಿತವಾಗಿ ಮಾತನಾಡಿದ್ದಾರೆ. ವಯಸ್ಸಿನ ಕಾರಣದಿಂದ ಒಂದು ವೇಳೆ ನಾನು ಸೇನೆ ಸೇರಲು ಸಾಧ್ಯವಾಗದಿದ್ದಲ್ಲಿ, ನನ್ನ ಮಗಳನ್ನ ಸೇನೆಗೆ ಸೇರಿಸಲು ತಾನು ಸಿದ್ದ ಎಂದು ಶಪಥವನ್ನೇ ಮಾಡಿದ್ದಾರೆ ವೀರ ಯೋಧನ ಪತ್ನಿ ಪಲ್ಲವಿ ಶರ್ಮಾ. ಇದಕೊಸ್ಕರ ಸೇನೆಗೆ ಸಂಬಂಧಿಸಿದವರೊಂದಿಗೆ ಮಾತನಾಡುವೆ ಎಂದು ಹೇಳಿದ್ದಾರೆ.

ಹುತಾತ್ಮರಾದ ಕರ್ನಲ್ ಅಶುತೋಷ್ ಶರ್ಮಾರವರಿಗೆ ೧೧ ವರ್ಷದ ಮಗಳಿದ್ದು, ಜೈಪುರದಲ್ಲಿ ಇವರ ಕುಟುಂಬ ವಾಸವಿತ್ತು. ಇನ್ನು ಸೇನೆಗೆ ಸಂಬಂಧಿಸಿದ ಸಚಿವಾಲಯ ಅನುಮತಿ ನೀಡಿದ್ರೆ, ನಾನು ಸೇನೆಯ ಸಮವಸ್ತ್ರದಲ್ಲಿ ಇರಲು ಬಯಸುತ್ತೇನೆ ಎಂದು ಅಭಿಮಾನದ ಮಾತುಗಳನ್ನಾಡಿರುವ ಪಲ್ಲವಿ ಶರ್ಮಾ, ನಾನು ಸ್ವ ಇಚ್ಛಾ ಶಕ್ತಿಯಿಂದಲೇ ಸೈನ್ಯ ಸೇರಲು ಬಯಸುತ್ತೇನೆ ಎಂದು ಹೇಳಿದ್ದಾರೆ.