ಸೀಲ್ ಆಗುತ್ತೆ ರಾಜ್ಯದ 18 ಜಿಲ್ಲೆಗಳು..ಸೀಲ್ ಅಂದರೇನು ಗೊತ್ತಾ?ನಿಮ್ಮ ಜಿಲ್ಲೆ ಇದೆಯಾ ನೋಡಿ..

News
Advertisements

ದೇಶದಾದ್ಯಾಂತ ಏಪ್ರಿಲ್ ೧೪ರವರೆಗೆ ಲಾಕ್ ಡೌನ್ ಮಾಡಲಾಗಿದೆ. ಆದರೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆಯೋ ಹೊರತು ಕಡಿಮೆ ಅಂತೂ ಆಗುತ್ತಿಲ್ಲ. ಇನ್ನು ರಾಜ್ಯ ಸರ್ಕಾರ ಕೂಡ ಏನೇ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಂಡಿದ್ದರೂ ಜನರೂ ಸಹ ಸ್ಪಂದಿಸುತ್ತಿಲ್ಲ. ಬೇಕಾಬಿಟ್ಟಿ ಮನೆಯಿಂದ ಹೊರಗೆ ಬರುತ್ತಿದ್ದಾರೆ.

Advertisements

ಹೀಗಾಗಿ ಸರ್ಕಾರ ಈ ಕೊರೋನಾವನ್ನ ತಡೆಯಲೇಬೇಕೆಂದು ಮತ್ತೊಂದು ದೊಡ್ಡ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಲು ಮುಂದಾಗಿದೆ ಎಂದು ಹೇಳಲಾಗಿದೆ. ಹೌದು, ರಾಜ್ಯದ 18 ಜಿಲ್ಲೆಗಳನ್ನ ಸೀಲ್ ಮಾಡಲು ಮುಂದಾಗಿದೆ ಎಂದು ಹೇಳಲಾಗಿದೆ. ಹಾಗಾದ್ರೆ ಸೀಲ್ ಮಾಡೋದು ಅಂದ್ರೆ ಏನು ಗೊತ್ತಾ.?

ಕೊರೋನಾ ವೈರಸ್ ಸೋಂಕಿತರು ಇರುವ ಪ್ರದೇಶಗಳನ್ನ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗುವುದು. ಇನ್ನು ಅಂತಹ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ಮಾರ್ಗಗಳನ್ನ ಬಂದ್ ಮಾಡಲಾಗುವುದು. ಜನರು ಮನೆಯಿಂದ ಆಚೆ ಬರದಂತೆ ಕಟ್ಟುನಿಟ್ಟಿನ ಆದೇಶಗಳನ್ನ ಮಾಡುವುದು. ಹೀಗೆ ಕೊರೋನಾ ಸೋಂಕಿತ ಪ್ರದೇಶವನಂ ಸಂಪೂರಣವಾಗಿ ಸೀಲ್ ಮಾಡಲಾಗುವುದು ಎಂದು ಹೇಳಲಾಗಿದೆ.

ಇನ್ನು ರಾಜ್ಯದ ೧೮ ಜಿಲ್ಲೆಗಳನ್ನ ಕೊರೋನಾ ಹ್ಯಾಟ್ ಸ್ಪಾಟ್ ಗಳೆಂದು ಗುರುತಿಸಲಾಗಿದ್ದು ಸೀಲ್ ಮಾದರಿಯಲ್ಲಿ ನಿಯಮಗಳನ್ನ ಮಾಡಿ, ಇನ್ನು ಮನೆಯಿಂದ ಹೊರಬಂದು ನಿಯಮಗಳನಂ ಉಲ್ಲಂಘನೆ ಮಾಡುವವರಿಗೆ ಕಾನೂನು ಪ್ರಕಾರ ಕ್ರಮಗಳನ್ನ ಕೈಗೊಳ್ಳಲಾಗುವ ಸಾಧ್ಯತೆಗಳು ಸರ್ಕಾರದ ಮುಂದಿದೆ ಎಂದು ಹೇಳಲಾಗಿದೆ.

ಹಾಗಾದ್ರೆ ರಾಜ್ಯದ ಯಾವೆಲ್ಲಾ ಜಿಲ್ಲೆಗಳು ಸೀಲ್ ಆಗಬಹುದು ನೋಡಿ..ಇನ್ನು ಕೊರೋನಾ ಸೋಂಕಿತರ ಸಂಖ್ಯೆಯ ಆಧಾರದ ಮೇಲೆ ಜಿಲ್ಲೆಗಳನ್ನ ವಿಂಗಡಿಸಲಾಗಿದ್ದು, ಹೆಚ್ಚು ಕೊರೋನಾ ಸೋಂಕಿತರು ಇರುವ ಬೆಂಗಳೂರು ನಗರ, ಮೈಸೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಬೀದರ್, ಕಲ್ಬುರ್ಗಿ, ಉತ್ತರ ಕನ್ನಡ, ಬೆಳಗಾವಿ, ಬಳ್ಳಾರಿ, ಬಾಗಲಕೋಟೆ, ಮಂಡ್ಯ, ಕೊಡಗು, ತುಮಕೂರು, ದಾವಣಗೆರೆ, ಉಡುಪಿ, ಧಾರವಾಡ ಮತ್ತು ಗದಗ ಸೇರಿ ರಾಜ್ಯದ ೧೮ ಕೊರೋನಾ ಹಾಟ್ ಸ್ಪಾಟ್ ಜಿಲ್ಲೆಗಳಾಗಿವೆ.