ಆ್ಯಂಕರ್ ಅನುಶ್ರೀ ಬಗ್ಗೆ ನಿಮಗೆಷ್ಟು ಗೊತ್ತು? ಅನುಶ್ರೀ ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಸತ್ಯ ಘ’ಟನೆಗಳು ಏನು ಗೊತ್ತಾ?

Inspire
Advertisements

ನಮಸ್ತೆ ಸ್ನೇಹಿತರೆ, ಆ್ಯಂಕರ್ ಅನುಶ್ರೀ ಹೆಸರು ಕೇಳಿದರೆ ಮೊದಲು ಎಲ್ಲರಿಗೂ ನೆನಪಾಗುವುದು ಅವರ ಭಾಷಾ ಶೈಲಿಯ ಉತ್ತಮ ನಿರೂಪಣೆ ಇವರು ರಾಜ್ಯದ ನಂಬರ್‌ ಒನ್ ನಿರೂಪಕಿ ಎಂದು ಹೆಸರುಗಳಿಸಿದ್ದಾರೆ, ಇವರು ಇಂತಹ ದೊಡ್ಡ ಸಾಧನೆಯನ್ನು ಮಾಡಲು ಅನುಶ್ರೀ ಪಟ್ಟ ಕಷ್ಟ ಅಷ್ಟಿಷ್ಟಲ್ಲ ಚಿಕ್ಕ ವಯಸ್ಸಿನಲ್ಲಿ ಓದಿ ಒಳ್ಳೆಯ ಕೆಲಸಕ್ಕೆ ಸೇರಬೇಕು ಎಂದು ಅನುಶ್ರೀ ಅವರ ಕನಸ್ಸು ಆಗಿತ್ತು.. ಆದರೆ ಅನುಶ್ರೀ ಸಣ್ಣ ವಯಸ್ಸಿನಲ್ಲಿ ಇರುವಾಗ ಅವರ ತಂದೆ ತಾಯಿ ಬೇರೆಯಾದರು ಆದರೂ ಎದೆಗುಂದದೆ ‌ಅನುಶ್ರೀ ಅವರ ತಾಯಿ ತನ್ನ ಇಬ್ಬರು ಮಕ್ಕಳನ್ನು ತುಂಬಾನೇ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಮಕ್ಕಳನ್ನ ಓದಿಸಿದರು ಇನ್ನೂ ಅನುಶ್ರೀ ಪಿಯುಸಿ ಓದುತ್ತಿದ್ದಾಗ ಅವರ ತಾಯಿ ಪಡುವ ಕಷ್ಟ ನೋಡಿ ತಾನು ದುಡಿಯಬೇಕು ತನ್ನ ಮನೆ ಹಾಗು ತಾಯಿ ತಮ್ಮನ ಸಂಪೂರ್ಣ ಜವಾಬ್ದಾರಿಯನ್ನು ತಾನು ಹೋರಬೇಕು ಎಂಬ ಒಳ್ಳೆಯ ಮನಸ್ಸು ಧೈರ್ಯ ಛಲ ಅನುಶ್ರೀಗೆ ಬಂದಿತು..

Advertisements

ಆಗಿನ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂದು ಅನುಶ್ರೀಗೆ ತಿಳಿದಿರಲಿಲ್ಲ, ಆಗ ತಮ್ಮ ಮಾತಿನ‌ ಶೈಲಿಯನ್ನು ದುಡಿಮೆಯನ್ನಾಗಿ ಮಾಡಿಕೊಂಡು ಮಂಗಳೂರಿನಲ್ಲಿ ನಮ್ಮ ಟಿವಿ ಎನ್ನುವ ಚಾನಲ್ ನಲ್ಲಿ ಪಿಯುಸಿ ಓದುವಾಗಲ್ಲೇ ಕೆಲಸಕ್ಕೆ ಸೇರಿಕೊಂಡರು ಇನ್ನು ಆ ಕೆಲಸದಲ್ಲಿ ಅನುಶ್ರೀಗೆ ಕಡಿಮೆ ಮೊತ್ತದ ಹಣ ಅವರಿಗೆ ಸಿಗುತ್ತಿತ್ತು ಆದರೆ ಆ ಹಣ ಕುಟುಂಬ ನಿಯಂತ್ರಣ ಮಾಡಲು ಸಾಕಾಗುತ್ತಿರಲಿಲ್ಲ.. ನಂತರ ಯೋಚನೆ ಮಾಡಿದ ಅನುಶ್ರೀ ಅವರು ಬೆಂಗಳೂರಿನಲ್ಲಿ ಬಸ್ ಏರಿ ಆತಂಕ ಮತ್ತು ಭಯದ ಜೊತೆ ನೂರಾರು ಕನಸನ್ನು ಹೊತ್ತು ತನ್ನ ತಾಯಿಯನ್ನು ಜೀವನ ಪೂರ್ತಿ ಸಂತೋಷದಿಂದ ನೋಡಿಕೊಳ್ಳಬೇಕು ಎನ್ನುವ ಛಲ ಮತ್ತು ಧೈರ್ಯದಿಂದ ಬೆಂಗಳೂರಿಗೆ ಬರುತ್ತಾರೆ..

ಬೆಂಗಳೂರಿಗೆ ಬಂದು ತನ್ನ ಬುದ್ದಿ ಹಾಗು ಪ್ರತಿಭೆಯಿಂದ ETV ನ್ಯೂಸ್ ಚಾನಲ್ ನಲ್ಲಿ ಕೆಲಸಕ್ಕೆ ಸೇರಿಕೊಂಡರು, ಆಗ ಅನುಶ್ರೀಗೆ ಒಂದು ಎಪಿಸೋಡ್ ಕಾರ್ಯಕ್ರಮದಿಂದ ಮಾಡಿದ್ದರೆ ಅವರಿಗೆ ಸಿಗುತ್ತಿದ್ದು ಕೇವಲ 250 ರೂಪಾಯಿ ಮಾತ್ರ, ಅಲ್ಲದೇ ನಿರೂಪಕಿ ಕೆಲಸ ಮಾಡುತ್ತಾ ಸಿನಿಮಾದಲ್ಲಿ ಡಬ್ಬಿಂಗ್ ಆರ್ಟಿಸ್ಟ್‌ ಆಗಿ ತುಂಬಾ ಕಷ್ಟ ಪಟ್ಟು ದುಡಿದ ಅನುಶ್ರೀ ಅವರಿಗೆ ಕೊನೆಗೆ ಅದೃಷ್ಟ ಅನ್ನೊದು ಅವರ ಜೀವನದಲ್ಲಿ ಬಂದು ಒಂದು ದಿನ ಇಡೀ ಕನ್ನಡಿಗ ಮನೆಮಾತಾದ್ದರು ನೂರಾರು ಪ್ರತಿಭಾವಂತ ವ್ಯಕ್ತಿಗಳ ಜೊತೆಗೆ ಸ್ಪರ್ಧೆಯಲ್ಲಿ ನಿಂತು ಕೊನೆಗೆ ನಂಬರ್‌ ಒನ್‌ ಆ್ಯಂಕರ್ ಆಗಿ ಹೊರ ಹೊಮ್ಮಿದರು.. ಇದರ ಜೊತೆಯಲ್ಲಿ ತಮ್ನನಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುತ್ತಾ ತಮ್ಮ‌ ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಆದರೆ ಆನುಶ್ರೀ ಅವರ ಬಗ್ಗೆ ತುಂಬಾ ಜನಕ್ಕೆ ತಿಳಿಯದ ಮತ್ತೊಂದು ವಿಷಯ ಏನೆಂದರೆ

ನಟ ಯಶ್ ನಟಿಸಿದ ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ಅಭಿನಯಿಸಲು ನಿರ್ದೇಶಕ ಶಶಾಂಕ್ ಅವರು ಮೊದಲು ಕೇಳಿದ್ದು ಆನುಶ್ರೀ ಅವರನ್ನು ಸಂಕೋಚ ಮನೋಭಾವ ಹೊಂದಿದ್ದ ಅನುಶ್ರೀ ಸಿನಿಮಾದಲ್ಲಿ ನಟನೆ ಮಾಡಲು ಹಿಂಜರಿದರು ಒಪ್ಪಿಗೆ ನೀಡಲಿಲ್ಲ ಮತ್ತೊಂದು ಖುಷಿಯ ವಿಚಾರ ಏನೆಂದರೆ ಡಬ್ಬಿಂಗ್ ಆರ್ಟಿಸ್ಟ್ ವಿಭಾಗದಲ್ಲಿ ಕರ್ನಾಟಕ ರಾಜ್ಯದ ಚಲನಚಿತ್ರ ಪ್ರಶಸ್ತಿಯನ್ನು ಕೂಡ ಆನುಶ್ರೀ ಅವರು ಪಡೆದಿದ್ದಾರೆ.. ಇನ್ನೂ ತನ್ನ ಧೈರ್ಯ ಛಲದಿಂದ ಹಾಗು ಪ್ರತಿಭೆಯನ್ನು ನಂಬಿ ಮಂಗಳೂರಿನಿಂದ ಬೆಂಗಳೂರಿಗೆ ಬಂದ ಅನುಶ್ರೀ‌ ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಎಂದರೆ ಅದಕ್ಕೆ ಅನುಶ್ರೀ ಪಟ್ಟ ಕಷ್ಟ ಅಷ್ಟಿಷ್ಟಲ್ಲ.. ಸ್ನೇಹಿತರೆ ಆ್ಯಂಕರ್ ಅನುಶ್ರೀ ಪಟ್ಟ ಕಷ್ಟ ಹಾಗು ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..