ರೈತರು, ಕ್ಷೌರಿಕರು, ಚಾಲಕರಿಗೆ ಸರ್ಕಾರದಿಂದ ಬಂಪರ್ ಆಫರ್

Advertisements

ಕೊರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಆದ ಪರಿಣಾಮ ರೈತರು, ಕ್ಷೌರಿಕರು, ಆಟೋ ಚಾಲಕರು ಆಧಾಯವಿಲ್ಲದೆ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಹೀಗೆ ಸಂಕಷದಲ್ಲಿರುವ ಕ್ಷೇತ್ರಗಳಿಗೆ ಸಹಾಯ ಧನ ನೀಡುವ ಸಲುವಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರು 1610ಕೋಟಿಯ ಪ್ಯಾಕೇಜ್ ನ್ನ ಘೋಷಣೆ ಮಾಡಿದ್ದಾರೆ. ಹಾಗಾದ್ರೆ ಯಾವ ಯಾವ ಕ್ಷೇತ್ರಕ್ಕೆ ಸರ್ಕಾರ ಎಷ್ಟು ನೆರವು ನೀಡಲಿದೆ ನೋಡೋಣ ಬನ್ನಿ

Advertisements

ಕ್ಷೌರಿಕರು (ಕಟಿಂಗ್,ಶೇವಿಂಗ್ ಶಾಪ್) : ಕ್ಷೌರ ಮಾಡುವ ವೇಳೆ ಕೊರೋನಾ ಹೆಚ್ಚಾಗಿ ಹರಡುವ ಪರಿಣಾಮ ನಗರಪ್ರದೇಶಗಳು ಸೇರಿದಂತೆ, ಗ್ರಾಮೀಣ ಭಾಗಗಳಲ್ಲಿಯೂ ಸಹ ಕ್ಷೌರ ಮಾಡುವುದನ್ನ ಮತ್ತು ಅಗಸರ ತಮ್ಮ ವೃತ್ತಿಯನ್ನ ಮಾಡುವುದನ್ನ ನಿಷೇಧ ಮಾಡಲಾಗಿದೆ. ಇನ್ನು ಇದರಿಂದ ಈ ವೃತ್ತಿಯಲ್ಲಿ ತೊಡಗಿರುವವರಿಗೆ ಎರಡು ತಿಂಗಳಿಂದ ಆದಾಯವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಇವರ ನೆರವಿಗೆ ನಿಂತಿರುವ ರಾಜ್ಯ ಸರ್ಕಾರ, ರಾಜ್ಯದಲ್ಲಿ ಕ್ಷೌರ ವೃತ್ತಿಯಲ್ಲಿರುವ 2,30,000 ಮಂದಿ ಹಾಗೂ ಅಗಸರ ವೃತ್ತಿಯಲ್ಲಿರುವ 60 ಸಾವಿರ ಜನರಿಗೆ ಒಂದು ಬರಿ 5 ಸಾವಿರ ರುಗಳನ್ನ ಪರಿಹಾರವವಾಗಿ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.

ಹೂ ಹಾಗೂ ಹಣ್ಣು ತರಕಾರಿ ಬೆಳೆಯುವವರಿಗೆ : ಲಾಕ್ ಡೌನ್ ಆದ ಹಿನ್ನಲೆಯಲ್ಲಿ ಯಾವುದೇ ಮದುವೆ, ಸಮಾರಂಭಗಳಿಲ್ಲ. ದೇವಸ್ಥಾನಗಳೆನ್ನಲ್ಲ ಮುಚ್ಚಲಾಗಿದೆ. ಹೀಗಾಗಿ ಬೆಳೆದಹೂಗಳನ್ನ ಯಾರು ಕೇಳದಂತಾಗಿದ್ದು, ರೈತರು ತಾವು ಬೆಳೆದ ಹೂಗಳನ್ನ ತೋಟದಲ್ಲಿಯೇ ನಾಶಮಾಡುತ್ತಿದ್ದಾರೆ. ಸಾವಿರಾರು ಎಕರೆಗಳಲ್ಲಿ ಬೆಳೆದ ಹೂಗಳು ವ್ಯಾಪಾರವಾಗದೆ ರೈತರಿಗೆ ನಷ್ಟವಾಗಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಹೀಗಾಗಿ ಯಾವುದೇ ರೀತಿಯ ಬೆಳೆದಿರುವ ರೈತರಿಗೆ ಒಂದು ಹೆಕ್ಟೇರ್ ಗೆ ಗರಿಷ್ಟ 25 ಸಾವಿರ ರುಗಳನ್ನ ಪರಿಹಾರದ ರೂಪವಾಗಿ ನೀಡುವುದಾಗಿ ಘೋಷಣೆ ಮಾಡಿದೆ.

ಹಣ್ಣು ತರಕಾರಿ ದೇಶದಾದ್ಯಂತ ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ ಹಣ್ಣು ತರಕಾರಿಗಳನ್ನ ಬೆಳೆದ ರೈತರು ಇಳುವರಿ ಉತ್ತಮವಾಗಿದ್ದರೂ ಸೂಕ್ತ ಬೆಲೆ ಸಿಗದೇ ರೈತರು ಬಾರಿ ನಷ್ಟಕ್ಕೆ ಒಳಗಾಗಿದ್ದಾರೆ. ಇನ್ನು ಹೀಗೆ ನಷ್ಟಕ್ಕೆ ಒಳಗಾಗಿ ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ನೀಡುವ ಸಲುವಾಗಿ ಸರ್ಕಾರ ಸೂಕ್ತ ಪ್ಯಾಕೇಜ್ ನ್ನ ಘೋಷಣೆ ಮಾಡಿದ್ದಾರೆ.

ಆಟೋ ಹಾಗೂ ಟ್ಯಾಕ್ಸಿ ಚಾಲಕರು ಇನ್ನು ಲಾಕ್ ಡೌನ್ ಆದ ಪರಿಣಾಮ, ಪ್ರತಿ ದಿನ ಬರುವ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದ ಆಟೋ ಮತ್ತು ಟ್ಯಾಕ್ಸಿ ಚಾಲಕರು ಈಗ ಆದಾಯವಿಲ್ಲದೆ ಒಂದೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಹೀಗಾಗಿ ರಾಜ್ಯದಲ್ಲಿರುವ ಅಂದಾಜು 775000 ಚಾಲಕರಿಗೆ ಒಂದು ಬಾರಿಯ ಪರಿಹಾರದ ರೂಪವಾಗಿ 5ಸಾವಿರ ರೂಪಾಯಿಗಳನ್ನ ಕೊಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.