ನಾಳೆಯಿಂದ ರಾಜ್ಯದಲ್ಲಿ ಸಡಿಲವಾಗಲಿದೆ ಲಾಕ್ ಡೌನ್.ಏನಿರುತ್ತೆ?ಏನಿರಲ್ಲ?

Advertisements

ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರು ಹೆಚ್ಚಾಗುತ್ತಿದ್ದ ಕಾರಣ ಕರ್ನಾಟಕ ಸೇರಿದಂತೆ ಇಡೀ ಭಾರತದಾದ್ಯಂತ ಮೇ 3ರವರೆಗೆ ಲಾಕ್ ಡೌನ್ ನ್ನ ವಿಸ್ತರಣೆ ಮಾಡಲಾಗಿತ್ತು. ಇನ್ನು ನಾಳೆ ಗುರುವಾರದಿಂದ ಕೆಲವೊಂದು ನಿಯಮಗಳ ಮೇರೆಗೆ ಸಡಿಲಮಾಡಲಾಗುತ್ತಿದೆ.

Advertisements

ಹೆಚ್ಚು ಸೋಂಕಿತರಿರುವ ಅಂದರೆ, ಕಟೈಂನ್‍ಮೆಂಟ್ ವಲಯ ಎಂದು ಗುರುತಿಸಲ್ಪಟ್ಟಿರುವ ಏರಿಯಾಗಳನ್ನ ಹೊರತುಪಡಿಸಿ ಉಳಿದ ಕಡೆ ಲಾಕ್ ಡೌನ್ ನಿಯಮಗಳು ಸಡಿಲಗೊಳ್ಳುತ್ತವೆ ಎಂದು ಹೇಳಲಾಗಿದೆ. ಆದರೆ ಮಾಸ್ಕ್ ಖಡ್ಡಾಯವಾಗಿದ್ದು, ಸಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇದರ ಜೊತೆಗೆ ೫ಕ್ಕಿಂತ ಹೆಚ್ಚು ಜನರು ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲುವಂತಿಲ್ಲ ಎಂದು ಸರ್ಕಾರ ಹೇಳಿದೆ.

ಹಾಗಾದ್ರೆ ಲಾಕ್ ಡೌನ್ ಸಡಿಲಗೊಳ್ಳುವುದರಿಂದ ಏನಿರುತ್ತೆ?ಏನಿರಲ್ಲ ನೋಡಿ..

ರಸ್ತೆ ಕಾಮಗಾರಿ, ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿದ್ದು, ಇನ್ನು ಇದಕ್ಕೆ ಬೇಕಾದ ಸಿಮೆಂಟ್, ಜೆಲ್ಲಿ, ಗೂಡ್ಸ್ ಸಂಚಾರಕ್ಕೆ ಪರ್ಮಿಷನ್ ನೀಡಲಾಗಿದೆ. ಇನ್ನು ಮೋಟಾರ್ ಮೆಕಾನಿಕ್, ಎಲಿಕ್ಟ್ರೀಷಿಯನ್, ಪ್ಲಂಬರ್, ಕಾರ್ಪೆಂಟರ್ಸ್ ಹೀಗೆ ಸ್ವಂತ ಕೆಲಸ ಮಾಡುವವರು ಕೆಲಸಮಾಡಲು ಅವಕಾಶ ನೀಡಲಾಗಿದೆ. ಇನ್ನು ತುರ್ತು ಅಗತ್ಯ ಸೇವೆಗಳಿಗಾಗಿ ವಾಹನಗಳಿಗೆ ಅವಕಾಶ ನೀಡಲಾಗಿದೆ.

ಇನ್ನು ಅಗತ್ಯವಾದ ಸರ್ಕಾರಿ ಇಲಾಖೆಗಳನ್ನ ತೆರೆಯಬಹುದಾಗಿದ್ದು, ಶೇ.೩೩ರಷ್ಟು ಸಿಬ್ಬಂದಿಗಳು ಮಾತ್ರ ಕೆಲಸ ಮಾಡಬಹುದು ಎಂದು ಸರ್ಕಾರ ಹೇಳಿದೆ. ಇನ್ನು ವ್ಯವಸಾಯ ಸೇರಿದಂತೆ, ಹೈನುಗಾರಿಕೆ, ಮೀನುಗಾರಿಕೆಗೆ ಅವಕಾಶ ನೀಡಾಲಾಗಿದೆ. ಇನ್ನು ಕಾರಿನಲ್ಲಿ ಸಂಚಾರ ಮಾಡುವವರು ಕೇವಲ ಇಬ್ಬರು ಮಾತ್ರ ಇರಬೇಕು.

ಏನೆಲ್ಲಾ ಸೇವೆಗಳು ಇರಲ್ಲ : ಮೇ ೩ನೇ ತಾರೀಖಿನವರೆಗೆ ಲಾಕ್ ಡೌನ್ ಜಾರಿಯಲ್ಲಿರುವುದರಿಂದ KSRTC, BMTC, ಮೆಟ್ರೋ ರೈಲು ಸಂಚಾರ, ಪ್ರೈವೇಟ್ ಬಸ್ ಗಳ ಸಂಚಾರಕ್ಕೆ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ. ಬೈಕ್ ಸಂಚಾರಕ್ಕೂ ಅನುಮತಿ ಇಲ್ಲ ಎಂದು ಹೇಳಲಾಗಿದೆ. ಜೊತೆಗೆ ಐಟಿ ಬಿಟಿ ಕಂಪನಿಗಳಿಗೂ ಕೂಡ ತೆರೆಯಲು ಅನುಮತಿ ಇಲ್ಲ.

ಆದರೆ ಏನೇ ಸಡಿಲ ಮಾಡಿದ್ದರೂ ಎಣ್ಣೆ ಪ್ರಿಯರಿಗೆ ಮಾತ್ರ ಸರ್ಕಾರ ಶಾಕ್ ನೀಡಿದೆ. ಹೌದು, ಮೇ ೩ರವರೆಗೆ ಮಧ್ಯ ಇರುವುದಿಲ್ಲ. ಇನ್ನು ರೆಸ್ಟೋರೆಂಟ್, ಹೋಟೆಲ್ ಗಳಿಗೂ ಅವಕಾಶ ಇಲ್ಲ. ಇನ್ನು ಇದೆಲ್ಲದರ ಜೊತೆಗೆ ಯಾವುದೇ ಸಭೆ, ಸಾಮಾರಂಭಗಳು ನಡೆಸುವಂತಿಲ್ಲ ಎಂದು ಸರ್ಕಾರ ಹೇಳಿದೆ.