ದುಬಾರಿ ಕಾರಿನ ಒಡತಿಯಾದ ಬಿಗ್ ಬಾಸ್ ಖ್ಯಾತಿಯ ನಟಿ ! ಈ ಲಕ್ಸುರಿ ಕಾರ್ ನ ಬೆಲೆ ಎಷ್ಟು ಗೊತ್ತಾ ?

Advertisements

ಸ್ನೇಹಿತರೇ, ನಾವು ಬೆವರು ಸುರಿಸಿ ಕಷ್ಟಪಟ್ಟು ದುಡಿದ ಹಣದಲ್ಲ್ ಏನಾದರೂ ಕೊಂಡಾಗ ಆಗ ಆಗುವ ಸಂತೋಷವೇ ಬೇರೆ. ಈಗ ನಟಿ ಕಾರುಣ್ಯ ರಾಮ್ ಕೂಡ ಅದೇ ಸಂತೋಷ ಸಂಭ್ರಮದಲ್ಲಿದ್ದಾರೆ. ಹೌದು, ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ, ಬಿಗ್ ಬಾಸ್ ಸೀಸಲ್ ೫ ರ ಸ್ಪರ್ಧಿಯೂ ಆಗಿದ್ದ ಕಾರುಣ್ಯ ರಾಮ್ ಅವರು ಈಗ ದುಬಾರಿ ಕಾರಿನ ಒಡತಿಯಾಗಿದ್ದಾರೆ. ಇದರ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ ಕಾರುಣ್ಯ ಅವರು ತಮ್ಮ ಮನೆಗೆ ಬಂದಿರುವ ಹೊಸ ಅತಿಥಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

[widget id=”custom_html-4″]

Advertisements

ಹೌದು, ತನ್ನ ಕನಸಾಗಿದ್ದ ದುಬಾರಿ ಕಾರ್ ನ್ನ ಕೊಳ್ಳುವುದರ ಮೂಲಕ ಅದರ ಫೋಟೋ, ವಿಡಿಯೊಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮ ಪಟ್ಟಿದ್ದಾರೆ ನಟಿ ಕಾರುಣ್ಯ ರಾಮ್. ದುಬಾರಿ ಕಾರ್ ಕೊಳ್ಳುವುದು ನನ್ನ ಕನಸಾಗಿತ್ತು, ಆಮೇಲೆ ಅದೇ ನನ್ನ ಗುರಿಯಾಯ್ತು, ಈಗ ಇದು ನನ್ನ ಸಾಧನೆ ಎಂಬ ಖುಷಿ ನನ್ನಲಿದೆ. ನನ್ನ ಬಹಳ ದಿನಗಳ ಶ್ರಮದ ಫಲವಾಗಿ ಇಂದು ನನ್ನ ಕನಸು ಈಡೇರಿದ್ದು, ನನಗಿದ್ದ ಕನಸುಗಳ ಪಟ್ಟಿಯಲ್ಲಿ ಇದೊಂದು ಸಣ್ಣ ಸಾಧನೆ ಈಡೇರಿದೆ ಎಂದು ಹೇಳಿದ್ದಾರೆ. ಇದು ನನ್ನ ಜೀವನದ ಮೊದಲ ದುಬಾರಿ ಹಾಗೂ ಲಕ್ಸುರಿಯಸ್ ಕಾರ್ ಆಗಿದೆ. ನನಗೆ ಸದಾ ಹಾರೈಸುತ್ತಾ ಬಂದಿರುವ ಕುಟುಂಬದವರಿಗೂ, ಅಭಿಮಾನಿಗಳಿಗೂ ಧನ್ಯವಾಗಳು ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ ನಟಿ ಕಾರುಣ್ಯ ರಾಮ್.

[widget id=”custom_html-4″]

ಒಟ್ಟಿನಲ್ಲಿ ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ನಟಿಸುತ್ತಿರುವ ಕಾರುಣ್ಯ ರಾಮ್ ಅವರು ತನ್ನ ತಂದೆ ತಾಯಿ ಹಾಗೂ ಸಹೋದರಿಯ ಜೊತೆ ಕಾರ್ ಶೋ ರೂಮ್ ಗೆ ಹೋಗಿ ‘BMW ಗ್ರಾನ್ ಲಿಮೋಸಿನ್’ ಎಂಬ ಲಕ್ಸುರಿಯಸ್ ಕಾರ್ ನ್ನ ಖರೀದಿ ಮಾಡಿದ್ದು, ಈ ಕಾರಿನ ಬೆಲೆ 65.5 ಲಕ್ಷಕ್ಕಿಂತ ಹೆಚ್ಚು ಎಂದು ಹೇಳಲಾಗಿದೆ. ಇನ್ನು ತಮ್ಮ ಪ್ರೀತಿಯ ಕಾರ್ ನ ಜೊತೆ ವಿಭಿನ್ನ ರೀತಿಯಲ್ಲಿ ಫೋಟೋಗಳನ್ನ ಇಡಿಸಿಕೊಂಡು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ನಟಿ ಕಾರುಣ್ಯ. ಇನ್ನು ಎರಡು ವರ್ಷದ ಹಿಂದಷ್ಟೇ ಕ್ಯಾ’ನ್ಸರ್ ರೋಗಿಗಳಿಗಾಗಿ ತಮ್ಮ ಸುಂದರ ಕೂದಲನ್ನ ದಾನ ಮಾಡಿ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದರು ನಟಿ ಕಾರುಣ್ಯ ರಾಮ್.