ಕುಲುಮೆ ಕೆಲಸ ಮಾಡಿ 35ರೂ ಸಂಪಾದನೆ ಮಾಡುತ್ತಿರುವ ಖ್ಯಾತ ಸಂಗೀತ ನಿರ್ದೇಶಕ.?

Cinema

ಇಡೀ ಜಗತ್ತಿನೆಲ್ಲೆಡೆ ರಣಕೇಕೆ ಹಾಕುತ್ತಿರುವ ಈ ಕೊರೋನಾ ಸೋಂಕು ಎಷ್ಟು ಮಹಾಮಾರಿಯೋ, ಹಾಗೆಯೆ ಜನರಿಗೆ ವಾಸ್ತವ ಏನೆಂಬುದನ್ನ ತೋರಿಸಿಕೊಟ್ಟಿದೆ. ಜೀವನಕ್ಕಾಗಿ ಹುಟ್ಟಿದ ಊರನ್ನ ಬಿಟ್ಟು ಎಲ್ಲೆಲ್ಲೋ ಹೋಗಿದ್ದ ಜನರು ಈಗ ತಮ್ಮ ತಮ್ಮ ಹಳ್ಳಿಗಳ ಕಡೆ ಹೋಗಿದ್ದಾರೆ.

ಇನ್ನು ಈ ಕೊರೋನಾದಿಂದಾಗಿ ತಮ್ಮ ತಂದೆ ತಾಯಿಗಳ ಜೊತೆಯಲ್ಲಿ, ತನ್ನೂರಿನಲ್ಲಿ ಕಾಲ ಕಳೆಯಲು ಎಲ್ಲರಿಗೂ ಸಮಯ ಸಿಕ್ಕಿದೆ. ಅದರಲ್ಲಿ ಕೆಜಿಎಫ್ ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರ್ ಕೂಡ ಒಬ್ಬರು. ಹೌದು, ಈಗ ಚಿತ್ರರಂಗದ ಕೆಲಸಗಳೆಲ್ಲಾ ನಿಂತಿದ್ದು, ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರ್ ಕೂಡ ತಮ್ಮ ಹುಟ್ಟೂರಾದ ಕುಂದಾಪುರಕ್ಕೆ ಹೋಗಿದ್ದಾರೆ.

ಸ್ಯಾಂಡಲ್ವುಡ್ ನಲ್ಲಿ ಬ್ಯುಸಿಯಾಗಿದ್ದ ರವಿ ಬಸ್ರೂರ್ ಈಗ ತಮ್ಮ ತಂದೆ ತಾಯಿಗಳ ಜೊತೆ ತಮ್ಮ ತಂದೆಗೆ ಕುಲುಮೆ ಮಾಡುವ ಕೆಲಸದಲ್ಲಿ ಸಹಾಯಕರಾಗಿ ಸಮಯ ಕಳೆಯುತ್ತಿದ್ದಾರೆ. ಇನ್ನು ರವಿಯವರು ತಾವು ಕುಲುಮೆ ಕೆಲಸ ಮಾಡುತ್ತಿರುವ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಇನ್ನು ಈ ವಿಡಿಯೋದಲ್ಲಿ ಸಲಾಕೆಯನ್ನ ತಯಾರು ಮಾಡುತ್ತಿದ್ದು ಹದ ಸರಿ ಇದೆಯಾ ಎಂದು ತನ್ನ ತಂದೆಗೆ ಕೇಳುತ್ತಾರೆ. ಇನ್ನು ಇದರಿಂದ ಅಪ್ಪನಿಗೆ ನಿರಾಳವಾಗಿದ್ದು, ನನಗೆ ತಲೆ ಬಿಸಿ ಕಡಿಮೆಯಾಗಿದೆ ಎಂದು ಹೇಳಿದ್ದಾರಂತೆ. ಇನ್ನು ಕುಲುಮೆ ಕೆಲಸ ಮಾಡಿವ ಮೂಲಕ ದಿನಕ್ಕೆ ೩೫ರೂಗಳನ್ನ ಸಂಪಾದನೆ ಮಾಡುತ್ತಿರುವೆ ಎಂದು ರವಿಯವರು ಹೇಳಿಕೊಂಡಿದ್ದಾರೆ.

ಇನ್ನು ಫೇಸ್ಬುಕ್ ನಲ್ಲಿ ವಿಡಿಯೋ ಪೋಸ್ಟ್ ಸಂಗೀತ ನಿರ್ದೇಶಕ ರವಿ ಬಸ್ರೂರ್ ರವರು ಮತ್ತೆ ಹಳೆ ನೆನಪುಗಳ ನೆನಪಿಸಿದ ಭಗವಂತ, ಸೂತ್ರಧಾರನವನು ಪಾತ್ರಧಾರಿಗಳು ನಾವು ಎಂದು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಈ ಕೊರೋನಾ ಮಹಾಮಾರಿ ಜನರಿಗೆ ತಮ್ಮ ಅಸಲಿ ವಾಸ್ತವವನ್ನ ನೆನಪಿಸುವಂತೆ ಮಾಡಿದ್ದಂತೂ ಸತ್ಯ.