ಅಂದು ಕೂಲಿ ಕೆಲಸ ಮಾಡುತ್ತಿದ್ದ ಈ‌ ವ್ಯಕ್ತಿ ಈಗ ಕೋಟ್ಯಾಧಿಪತಿ ! ಇದು ಹೇಗೆ ಸಾಧ್ಯ ಗೊತ್ತಾ? ಅದೃಷ್ಟ ಅಂದ್ರೆ ಇದೆ ನೋಡಿ..

Inspire
Advertisements

ನಮಸ್ತೆ ಸ್ನೇಹಿತರೆ, ಅದೃಷ್ಟ ಹಾಗು ದುರಾದೃಷ್ಟ ಅನ್ನೋದು ಮನುಷ್ಯನಿಗೆ ಯಾವಾಗ ಹೇಗೆ ಬರುತ್ತದೆ ಎಂದು‌‌ ಊಹಿಸಲು ಸಾಧ್ಯವಿಲ್ಲ.. ತುಂಬಾ ನಿರ್ಗತಿಕ‌ ಹಾಗು ಬಡತನದಲ್ಲಿ ಇರುವ ವ್ಯಕ್ತಿಗೆ‌ ಅದೃಷ್ಟ ಅನ್ನೋದು ಅವನ ಕೈ ಹಿಡಿದರೆ ಸಾಕು ಉನ್ನತ ಮಟ್ಟಕ್ಕೆ ಬೆಳೆದು ಶ್ರೀಮಂತ ವ್ಯಕ್ತಿಯಾಗಿ ಬೆಳೆಯುತ್ತಾನೆ.. ಆಗೆಯೇ ತುಂಬಾ ಶ್ರೀಮಂತ ವ್ಯಕ್ತಿಯ ಜೀವನದಲ್ಲಿ ದುರಾದೃಷ್ಟ ಅನ್ನೋದು ಒಂದು ಬಾರಿ ಬಂದರೆ ಸಾಕು ಅವನ ಜೀವನ ಬೀದಿಗೆ ಬಂದುಬಿಡುತ್ತದೆ. ಇನ್ನು ಇಂತಹ ಹಲವಾರು ಉದಾಹರಣೆಗಳನ್ನ ನಮ್ಮ ಜೀವನದಲ್ಲಿ ತುಂಬಾನೇ ನೋಡಿರುತ್ತೇವೆ. ಇಂತಹುದೇ ಒಂದು‌ ಘ’ಟನೆ ಒಬ್ಬ ಬಡ ವ್ಯಕ್ತಿಯ ಜೀವನದಲ್ಲಿ ನಡೆದಿದೆ. ಅಷ್ಟಕ್ಕೂ ಈ ವ್ಯಕ್ತಿ ಯಾರು ! ಆ ವ್ಯಕ್ತಿಯ ಜೀವನದಲ್ಲಿ ನಡೆದ ಊಹಿಸಲಾಗಿದ ಘ’ಟನೆ ಏನು ಗೊತ್ತಾ? ನೋಡೋಣ ಬನ್ನಿ.. ಹೌದು ಸ್ನೇಹಿತರೆ ಈ ಒಂದು ಘ’ಟನೆ ನಡೆದಿರೋದು ಕೇರಳ ರಾಜ್ಯದಲ್ಲಿ‌. ರಾಜನ್ ಎನ್ನುವ ವ್ಯಕ್ತಿ ತನ್ನ‌ ಊರಿನಲ್ಲಿ ಸಣ್ಣದಾದ ಮನೆಯೊಂದನ್ನು ಕಟ್ಟುವ ಸಲುವಾಗಿ ಸಾಕಷ್ಟು ಸಾಲ ಮಾಡಿದರು.

[widget id=”custom_html-4″]

Advertisements

ಅಷ್ಟೇ ಅಲ್ಲದೆ ತಮ್ಮ‌ ಮಗಳ‌‌ ಮದುವೆಗೆ ಮಾಡಿದ ಸಾಲ ಕೂಡ ಆಗೆಯೇ ಉಳಿದಿತ್ತು. ಈ‌ ಎಲ್ಲ ರೀತಿಯ ಸಾಲವನ್ನು ರಾಜನ್ ಅವರು ಬ್ಯಾಂಕ್ ಮೂಲಕ ಪಡೆದು ಕೊಂಡಿದ್ದರು. ಇಷ್ಟೊಂದು ಸಾಲ ಮಾಡಿದರಿಂದ‌ ಮನೆ ಕಟ್ಟುವ ಕೆಲಸ ಅರ್ಧಕ್ಕೆ ನಿಂತು ಹೋಗಿತ್ತು. ಆದರೆ, ಹೇಗಾದರೂ ಮಾಡಿ ನಿಂತು ಹೋಗಿರುವ ಮನೆ ಕೆಲಸವನ್ನ ಪೂರ್ಣಗೊಳಿಸುವ ಸಲುವಾಗಿ ಮತ್ತೆ ನಾಲ್ಕನೇ ಬಾರಿ ಬ್ಯಾಂಕ್ ನಲ್ಲಿ ಸಾಲ ಕೇಳಲು ರಾಜನ್ ನಿರ್ಧಾರ ಮಾಡಿದರು. ಇನ್ನೂ ನಾಲ್ಕನೇ ಬಾರಿ ಬ್ಯಾಂಕ್ ನಲ್ಲಿ ಸಾಲ ಪಡೆಯುವ ಮುನ್ನ ರಾಜನ್ 300‌ ರೂಪಾಯಿ ಕೊಟ್ಟು ಒಂದು ಲಾಟರಿ ಟಿಕೆಟ್ ಅನ್ನು ಖರೀದಿ ಮಾಡಿದರು.. ಟಿಕೆಟ್ ತೆಗೆದುಕೊಂಡಿದ್ದೆ ನೋಡಿ, ರಾಜನ್ ಅವರಿಗೆ ಅದೃಷ್ಟ ಅನ್ನೊದು ಬಂತೆ ಬಿಟ್ಟಿತು. ಯಾಕೆಂದರೆ ರಾಜನ್ ಲಾಟರಿ ಟಿಕೆಟ್ ಪಡೆದ‌ ಮಾರನೆ ದಿನವೇ ಆ ಲಾಟರಿಯಿಂದ ಬರೋಬ್ಬರಿ 12 ಕೋಟಿಯಷ್ಟು ಹಣ ಬಹುಮಾನವಾಗಿ ರಾಜನ್ ಗೆ ಸಿಕ್ಕಿತು.

[widget id=”custom_html-4″]

ಇದಕ್ಕೂ ಮೊದಲು ರಾಜನ್ ಅವರು ಸಾಕಷ್ಟು ಬಾರಿ ಲಾಟರಿ ಟಿಕೆಟ್ ಖರೀದಿ ಮಾಡಿದ್ದು, ಇದೆ ಲಾಟರಿಯ ವಿಚಾರವಾಗಿ ತನ್ನ ಹೆಂಡತಿಯ ಜೊತೆ ಹಲವಾರು ಬಾರಿ ಜ’ಗಳ ಮಾಡಿಕೊಂಡಿದ್ದರು. ವಿಪರ್ಯಾಸ‌ ಏನೆಂದರೆ ಈ ಬಾರಿ ರಾಜನ್ ಅವರು ತಮ್ಮ ಪತ್ನಿಗೆ‌ ಲಾಟರಿ ಪಡೆದ ವಿಚಾರವನ್ನ ತಿಳಿಸಿರಲಿಲ್ಲ.. ಈಗ ರಾಜನ್ ಹಾಗೂ ಆತನ ಪತ್ನಿ ಮಕ್ಕಳು ಲಾಟರಿಯಿಂದ 12 ಕೋಟಿ ಹಣ ಬಂದಿರುವುದನ್ನು ನೋಡಿ ತುಂಬಾನೇ ಸಂತೋಷ ಪಟ್ಟಿದ್ದಾರೆ.. ಅಲ್ಲದೆ ಜೀವನದಲ್ಲಿ ತುಂಬಾ ಕಷ್ಟದ ದಿನಗಳನ್ನು ಕಂಡಿರುವ ರಾಜನ್ ಈ ಲಾಟರಿ ಟಿಕೆಟ್ ನಿಂದ ಬಂದ ಹಣದಿಂದ ತಮ್ಮ ಎಲ್ಲಾ ಸಾಲಗಳನ್ನು ತಿರಿಸಿಕೊಂಡು ಅರ್ಧದಲ್ಲಿ ನಿಂತು ಹೋಗಿದ್ದ ಮನೆಯನ್ನು ಪೂರ್ಣಗೊಳಿಸಿ ಈಗ ತಮ್ಮ ಹೊಸ ಮನೆಯಲ್ಲಿಯೇ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.. ನೋಡಿದ್ರಲ್ಲ ಸ್ನೇಹಿತರೆ ಅದೃಷ್ಟ ಅನ್ನೊದು ವ್ಯಕ್ತಿಯ ಜೀವನದಲ್ಲಿ ಯಾವ ರೀತಿ ಬರುತ್ತದೆ ಎಂದು. ಹಣೆಬರಹ ಅನ್ನೋದು ಸಿರಿವಂತನನ್ನ ಬಡವಾನಾಗಿ, ಬಡವನನ್ನು ಸಿರಿವಂತನಾಗಿ ಮಾಡುತ್ತದೆ ಅನ್ನೋದಕ್ಕೆ ಈ ವ್ಯಕ್ತಿಯೇ ಜೀವನವೇ ನೈಜ ನಿದರ್ಶನ..