ಬಿಗ್ ಬಾಸ್ ಮನೆಯಲ್ಲಿ ಆಕ್ಟಿವ್ ಆಗಿದ್ದ ಅರವಿಂದ್ ಗೆ ಸಿಕ್ಕ ಸಂಭಾವನೆ ಇಷ್ಟೇನಾ ! ನಂಬಲು ಸಾಧ್ಯವಿಲ್ಲ..

Advertisements

ಸ್ನೇಹಿತರೇ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೋನಾ ಸೋಂಕಿನ ಕಾರಣಕ್ಕಾಗಿ ಈಗಾಗಲೇ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಇನ್ನು ಇದೆ ಕಾರಣದಿಂದಾಗಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ಕಾರ್ಯಕ್ರಮ ಬಿಗ್ ಬಾಸ್ ಕನ್ನಡ ೮ನ್ನ ರದ್ದು ಮಾಡಲಾಗಿದೆ. ಇನ್ನು ಈಗ 11ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿದ್ದು, ಬಿಗ್ ಬಾಸ್ 8ರ ವಿನ್ನರ್ ಪಟ್ಟಕ್ಕೆ ಯಾರು ಸೂಕ್ತರು ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಅರವಿಂದ್ ಕೆಪಿ, ಮಂಜು ಪಾವಗಡ ಹಾಗೂ ಪ್ರಶಾಂತ್ ಸಂಬರ್ಗಿ ಈ ಮೂವರು ಸ್ಪರ್ಧಿಗಳು ಬಿಗ್ ಬಾಸ್ ೮ರ ಪಟ್ಟಕ್ಕೆ ಸೂಕ್ತರು ಎಂಬ ಅಭಿಪ್ರಾಯ ಕೇಳಿಬಂದಿದೆ.

[widget id=”custom_html-4″]

Advertisements

ಇನ್ನು, ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿಯೇ ಆಟ ಆಡುತ್ತಿದ್ದ ಸ್ಪೋರ್ಟ್ಸ್ ಮ್ಯಾನ್ ಆಗಿರುವ ಕೆಪಿ. ಅರವಿಂದ್ ಅವರು ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಬಿಗ್ ಬಾಸ್ ಕೊಡುತ್ತಿದ್ದ ಫಿಸಿಕಲ್ ಟಾಸ್ಕ್ ಗಳು ಸೇರಿದಂತೆ ಬಿಗ್ ಬಾಸ್ ಮನೆಯ ಪ್ರತೀ ಚಟುವಟಿಕೆಗಳಲ್ಲಿ ತಮ್ಮನ್ನ ತೊಡಗಿಸಿಕೊಂಡು ಚೆನ್ನಾಗಿಯೇ ಆಟವಾಡುತ್ತಿದ್ದ ಅರವಿಂದ್ ವೀಕ್ಷಕರನ್ನ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಇನ್ನು ದಿವ್ಯಾ ಉರುಡುಗ ಅವರ ವಿಚಾರದಲ್ಲಿಯೂ ಕೂಡ ಅರವಿಂದ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಸುದ್ದಿಯಲ್ಲಿದ್ದವರು.

[widget id=”custom_html-4″]

ಬಿಗ್ ಬಾಸ್ ಮನೆಗೆ ಹೋಗುವ ಮುಂಚೆ ಸ್ವಲ್ಪ ಜನಕ್ಕೆ ಮಾತ್ರ ಪರಿಚಯವಿದ್ದ ಕೆಪಿ ಅರವಿಂದ್ ಅವರು, ಬಿಗ್ ಬಾಸ್ ನಿಂದಾಗಿ ಕರ್ನಾಟಕದಾದ್ಯಂತ ಫೇಮಸ್ ಆಗಿದ್ದಾರೆ ಎಂದರೆ ತಪ್ಪಾಗೊದಿಲ್ಲ. ಇನ್ನು ಇಷ್ಟೆಲ್ಲಾ ಹೆಸರು ಖ್ಯಾತಿ ಜೊತೆಗೆ ಈಗ ಜನಪ್ರಿಯರಾಗಿರುವ ಅರವಿಂದ್ ಅವರ ಸಂಭಾವನೆ ಬಾರಿ ಕುತೂಹಲ ವೀಕ್ಷಕರಲ್ಲಿತ್ತು. ಇನ್ನು ಮೊದಲೇ ಬಿಗ್ ಬಾಸ್ ಜೊತೆ ಮಾಡಿಕೊಂಡಿರೋ ಒಪ್ಪಂದದ ಪ್ರಕಾರ ವಾರಕ್ಕೆ ಕೇವಲ 25 ಸಾವಿರ ಸಂಭಾವನೆಯ ಮಾತಾಗಿತ್ತು ಎಂದು ಹೇಳಲಾಗಿದೆ. ಇನ್ನು ಬೇರೆ ಸ್ಪರ್ಧಿಗಳಿಗೆ ಹೋಲಿಸಿದಲ್ಲಿ ಅರವಿಂದ್ ಸಂಭಾವನೆ ತೀರಾ ಕಡಿಮೆಯೇ..ಇನ್ನು ಈಗಾಗಲೇ ಬಿಗ್ ಬಾಸ್ ಕಾರ್ಯಕ್ರಮ ರದ್ದಾಗಿದ್ದು ಎಲ್ಲಾ ಸ್ಪರ್ಧಿಗಳು ಬಿಗ್ ಮನೆಯಿಂದ ಹೊರಬಂದಿದ್ದಾರೆ..ಸ್ನೇಹಿತರೇ, ನಿಮ್ಮ ಪ್ರಕಾರ ಯಾರು ಬಿಗ್ ಬಾಸ್ 8ರ ವಿನ್ನರ್ ಎಂದು ಕಾಮೆಂಟ್ ಮಾಡಿ ತಿಳಿಸಿ..