ನಮಸ್ತೇ ಸ್ನೇಹಿತರೇ, ಹಿಂದೂಗಳ ಮಹಾನ್ ಗ್ರಂಥಗಳಲ್ಲಿ ಒಂದಾದ ಮಹಾಭಾರತದ ಕತೆಗಳ ಬಗ್ಗೆ ತಿಳಿದಷ್ಟೂ ಮತ್ತಷ್ಟು ತಿಳಿಯಬೇಕೆನ್ನುವ ಕುತೂಹಲ ಇದ್ದೆ ಇರುತ್ತದೆ. ಜೊತೆಗೆ ಹಲವಾರು ಪ್ರಶ್ನೆಗಳನ್ನ ಹುಟ್ಟುಹಾಕುತ್ತಲೇ ಇರುತ್ತದೆ. ಅದರಲ್ಲಿ ಇಲ್ಲಿರುವ ಕತೆಯೂ ತುಂಬಾ ಕುತೂಹಲಕಾರಿಯಾಗಿದ್ದು ನಂಬಲು ಅಸಾಧ್ಯ ಎಂಬಂತಿದೆ. ಹೌದು, ವಾಸುದೇವ ಶ್ರೀ ಕೃಷ್ಣನು ಅರ್ಜುನನಿಗೆ ಮಾವ ಎಂಬ ವಿಷಯ ತಿಳಿಯದವರು ಬಹುಶಃ ಯಾರೂ ಇಲ್ಲ. ಆದರೆ ಕೃಷ್ಣ ಅರ್ಜುನನಿಗೆ ಸೊಸೆ ಎಂದರೆ ಎಲ್ಲರೂ ನಗುತ್ತಾರೆ. ಇದು ನಂಬಲಾರದ ವಿಷಯವೇ ಸರಿ. ಆದರೆ ಇದು ಸತ್ಯ.

ಅರ್ಜುನನ ತಾಯಿ ಕುಂತಿ ಕೃಷ್ಣನಿಗೆ ಸೋದರ ಅತ್ತೆ. ಕೃಷ್ಣನ ತಂಗಿ ಸುಭದ್ರೆ ಅರ್ಜುನನ ಹೆಂಡತಿ. ಹೀಗೆ ಪಾಂಡವ ಹಾಗೂ ಕೃಷ್ಣ ನ ಸಂಬಂಧ. ಕುರುಕ್ಷೇತ್ರ ಯು’ದ್ಧ ಶುರುವಾದಾಗ ಪಾಂಡವ ಅಥವಾ ಕೌರವರಲ್ಲಿ ಒಬ್ಬರ ಬ’ಲಿ ಕೊಡಲೇ ಬೇಕಾಗಿರುತ್ತದೆ. ಆದರೆ ಅದಕ್ಕೆ ಅರ್ಹರಾಗಿದ್ದು ಮಾತ್ರ ಮೂರು ಜನ. ಕೃಷ್ಣ , ಅರ್ಜುನ ಮತ್ತು ಅರ್ಜುನನ ಮಗ ಇರುವನ್. ನಾಗ ಕನ್ನಿಕೆ ಉಲುಪಿ ಮತ್ತು ಅರ್ಜುನನ ಮಗನೇ ಇರೂವನ್. ಯು’ದ್ಧಕ್ಕೆ ತನ್ನನ್ನೇ ಬ’ಲಿಕೊಡಲು ಅರ್ಜುನ ಮುಂದಾಗುತ್ತಾನೆ.

ಯು’ದ್ಧದಲ್ಲಿ ಅವನ ಮಹತ್ವ ಹೆಚ್ಚಾಗಿದ್ದ ಕಾರಣ ಕೃಷ್ಣ ಅವನನ್ನು ತಡೆಯುತ್ತಾನೆ. ಸ್ವತಃ ತಾನು ಭಗವಂತ ಆಗಿದ್ದರಿಂದ ಅವನೂ ಬ’ಲಿದಾನ ಮಾಡಲಿಲ್ಲ. ಆದ್ದರಿಂದ ಇರುವನ್ ನನ್ನು ಪ್ರಾಣ ತ್ಯಾಗ ಮಾಡುವಂತೆ ಕೃಷ್ಣ ಕೇಳಿಕೊಳ್ಳುತ್ತಾನೆ. ಆದರೆ ಅರ್ಜುನ ಉಲೂಪಿಯ ಪುತ್ರನಾಗಿದ್ದ ಇರುವನ್ ತಾನು ಮದುವೆಯಾಗಬೇಕು, ತಾನು ಸ’ತ್ತ ನಂತರ ನನ್ನ ಹೆಂಡತಿ ನನ್ನನ್ನು ನೆನೆದು ಅಳಬೇಕು ಎಂಬ ಷರತ್ತಿನ ಮೇರೆಗೆ ಯು’ದ್ಧದಲ್ಲಿ ತನ್ನ ಬ’ಲಿ ನೀಡಲು ಇರುವನ್ ಒಪ್ಪಿದನು. ನಾಳೆ ಸಾ’ಯುವವರನ್ನು ಇಂದು ಯಾರು ತಾನೇ ಮದುವೆಯಾಗುತ್ತಾರೆ ಹೇಳಿ.?

ಯಾರೂ ಒಪ್ಪಲಿಲ್ಲ. ಆಗ ಕೃಷ್ಣ ಮೋಹಿನಿಯ ಅವತಾರ ತಾಳಿ ಅರ್ಜುನನ ಮಗ ಇರುವನ್ ಮದುವೆಯಾಗಿ ಅವನೊಟ್ಟಿಗೆ ಇದ್ದು ಅವನನ್ನು ಸಂತೋಷ ಪಡಿಸುತ್ತಾನೆ ಮತ್ತು ಯು’ದ್ಧದಲ್ಲಿ ಅವನ ಬಲಿ ಕೊಟ್ಟಮೇಲೆ ಕಣ್ಣೀರು ಸುರಿಸುತ್ತಾನೆ. ಹಾಗಾಗಿ ಈ ಕಥೆಯ ಲೆಕ್ಕಾಚಾರದ ಮೇಲೆ ವಾಸುದೇವ ಕೃಷ್ಣನು ಅರ್ಜುನನ ಸೊಸೆಯಾಗುತ್ತಾನೆ. ಇದು ಸಂಗ್ರಹ ಮಾಹಿತಿಯ ಕತೆಯ ಅನುಸಾರವಾಗಿದ್ದು, ಯಾರ ಭಾವನೆಗಳಿಗೂ ಧಕ್ಕೆ ಮಾಡುವ ಉದ್ದೇಶ ನಮ್ಮದಲ್ಲ..