ಶಾ’ಕಿಂಗ್ ವಿಚಾರವನ್ನ ತಿಳಿಸಿದ ನಟ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಮಿಲನಾ ! ಏನಾಗಿದೆ ಗೊತ್ತಾ ?

Cinema
Advertisements

ನಮಸ್ತೇ ಸ್ನೇಹಿತರೇ, ಸ್ಯಾಂಡಲ್ವುಡ್ ನ ಬ್ಲಾಕ್ ಬಸ್ಟರ್ ಚಿತ್ರ ಲವ್ ಮಾಕ್ಟೈಲ್ ಚಿತ್ರದ ಮೂಲಕ ಫೇಮಸ್ ಆದ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನಾ ಕಳೆದ ಎರಡು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಬಳಿಕ ಹನಿಮೂನ್ ಮುಗಿಸಿ ಬಂದಿರುವ ಸ್ಯಾಂಡಲ್ವುಡ್ ನ ಈ ತಾರಾ ಜೋಡಿ ಶಾ’ಕಿಂಗ್ ವಿಚಾರವನ್ನ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸ್ವತಃ ನಟ ಡಾರ್ಲಿಂಗ್ ಕೃಷ್ಣ ಅವರೇ ಶಾಕಿಂಗ್ ವಿಚಾರದ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

[widget id=”custom_html-4″]

Advertisements

ಶಾ’ಕಿಂಗ್ ವಿಚಾರ ಏನಪ್ಪಾ ಅಂದ್ರೆ, ನಟ ಕೃಷ್ಣ ಮತ್ತು ಮಿಲನಾ ನಾಗರಾಜ್ ಇಬ್ಬರೂ ಕೊ’ರೋನಾ ಸೋಂಕಿಗೆ ಒಳಗಾಗಿರುವುದರ ಬಗ್ಗೆ ವಿಚಾರ ತಿಳಿಸಿದ್ದಾರೆ. ಮಿಲನಾ ನಾಗರಾಜ್ ಮತ್ತು ನನ್ನ ಕೊರೋನಾ ಪರೀಕ್ಷೆಯ ರಿಪೋರ್ಟ್ ಬಂದಿದ್ದು ನಮ್ಮಿಬ್ಬರಿಗೂ ಕೊರೋನಾ ಸೋಂಕು ಇರುವುದು ಧೃಡಪಟ್ಟಿದೆ. ನಮ್ಮ ಇಬ್ಬರೊಂದಿಗೆ ಯಾರೆಲ್ಲಾ ಸಂಪರ್ಕ ದಲಿದ್ದಿರೋ ಅವರೆಲ್ಲಾ ದಯವಿಟ್ಟು ಕೊ’ರೋನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ವತಃ ನಟ ಡಾರ್ಲಿಂಗ್ ಕೃಷ್ಣ ಅವರು ಮನವಿಮಾಡಿಕೊಂಡಿದ್ದಾರೆ.

[widget id=”custom_html-4″]

ಇನ್ನು ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಕೃಷ್ಣ ಮಿಲನಾ ಜೋಡಿ ಹನಿಮೂನ್ ಟ್ರಿಪ್ ಮುಗುಸಿಕೊಂಡ ಬಂದ ಬಳಿಕ ಲವ್ ಮಾಕ್ಟೈಲ್ ಭಾಗ ಎರಡರ ಚಿತ್ರೀಕರಣದಲ್ಲಿ ನಟ ಡಾರ್ಲಿಂಗ್ ಕೃಷ್ಣ ಬ್ಯುಸಿಯಾಗಿದ್ದರು. ಆದರೆ ಈಗ ಕೊರೋನಾ ಸೋಂಕಿನ ಎರಡನೇ ಅಲೆ ಈಗಾಗಲೇ ಎಲ್ಲಾ ಕಡೆ ವೇಗವಾಗಿ ಹರಡುತ್ತಿದ್ದು ಬಾಲಿವುಡ್ ಸೇರಿದಂತೆ ಸಿನಿಮಾ ರಂಗದ ಅನೇಕ ನಟ ನಟಿಯರು ಈಗ ಕೊರೋನಾ ಸೋಂ’ಕಿಗೆ ಒಳಗಾಗುತ್ತಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೇರಿದಂತೆ ಕೆಲ ನಟರು ಕೊ’ರೋನಾದಿಂದ ಗುಣಮುಕ್ತರಾಗಿ ಮನೆಗೆ ಹಿಂದಿರುಗಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಕೃಷ್ಣ ಮಿಲನಾ ಜೋಡಿ ಆದಷ್ಟು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಸ್ನೇಹಿತರು ಹಾಗೂ ಕುಟುಂಬದವರು ಹಾರೈಸಿದ್ದಾರೆ.