ಮೆಜೆಸ್ಟಿಕ್ ನಿಂದ ಮಂಗಳೂರಿಗೆ ಪ್ರಯಾಣಿಸಿದ ಬಸ್ಸಿನಲ್ಲಿ ವ್ಯಕ್ತಿಯೊಬ್ಬರಿಗೆ ಕೊರೋನಾ ಸೋಂಕು.?ಪ್ರಯಾಣಿಸಿದವರು ಈ ಕೂಡಲೇ ತಪಾಸಣೆ ಮಾಡಿಸಿಕೊಳ್ಳಿ..

News
Advertisements

ಕೋರೋಣ ಸೋಂಕು ಇಡೀ ಜಗತ್ತಿನಾದ್ಯಂತ ರುದ್ರ ನರ್ತನ ಮಾಡುತ್ತಿದೆ. ವಿಶ್ವಕ್ಕೆ ದೊಡ್ಡಣ್ಣ ಎಂದೆನೆಸಿಕೊಂಡಿರುವ ಅಮೇರಿಕಾ ದೇಶವೇ ಈ ಕೋರೋಣ ಹೆಮ್ಮಾರಿಗೆ ಗಡ ಗಡ ನಡುಗುತ್ತಿದೆ. ಇನ್ನು ನಮ್ಮ ಭಾರತ ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ನಮ್ಮ ರಾಜ್ಯಾದಲ್ಲೂ ಕೂಡ .

Advertisements

ಹೌದು, ಈಗ ಬೆಂಗಳೂರಿನಿಂದ ಶಾಕಿಂಗ್ ಸುದ್ದಿಯೆಂದು ಹೊರಬಿದ್ದಿದೆ. ಇದೇ ಮಾರ್ಚ್ ೨೧ರಂದು ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ (KSRTC) ಬಸ್ಸಿನಲ್ಲಿ ಮಂಗಳೂರಿಗೆ ಪ್ರಯಾಣಿಸಿದ ಪ್ರಯಾಣಿಕರೊಬ್ಬರಿಗೆ ಕೊರೋನಾ ಪಾಸಿಟಿವ್ ಸೋಂಕು ತಗಲಿರುವುದು ಕನ್ಫರ್ಮ್ ಆಗಿದೆ.

ಇನ್ನು ಇದರ ಬಗ್ಗೆ ಸ್ವತಃ KSRTC ಸಂಸ್ಥೆಯವರೇ ಟ್ವೀಟ್ ಮಾಡಿದ್ದು, ಮಾರ್ಚ್ 21ರಂದು ಕೆಂಪೇಗೌಡ ಬಸ್ ನಿಲ್ದಾಣದಿಂದ KA19 F3329 ನಂಬರ್ ನ ಬಸ್ ನಲ್ಲಿ ಸಂಜೆ 4.30 ಕ್ಕೆ ಮಂಗಳೂರಿಗೆ ಹೊರಟಿದ್ದು, ಈ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಕೊರೋನಾ ಸೋಂಕು ಇರುವುದು ಧೃಡಪಟ್ಟಿದೆ. ಹಾಗಾಗಿ ಅಂದು ಆ ಬಸ್ಸಿನಲ್ಲಿ ಪ್ರಯಾಣ ಮಡಿದ ಎಲ್ಲಾ ಪ್ರಯಾಣಿಕರು ಸಮೀಪದ ಸರ್ಕಾರೀ ಜಿಲ್ಲಾ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಪ್ರಯಾಣಿಕರಲ್ಲಿ ಮನವಿ ಮಾಡಿಕೊಂಡಿದೆ.

ಇನ್ನು ಉತ್ತರ ಕನ್ನಡ ಜಿಲ್ಲೆಯವರಾದ ಸೋಂಕಿತ ವ್ಯಕ್ತಿ ೬೫ವರ್ಷದವರಾಗಿದ್ದು, ದುಬೈನಿಂದ ಮಾರ್ಚ್ ೧೭ರಂದು ಮುಂಬೈಗೆ ಬಂದಿದ್ದು, ಅಲ್ಲಿಂದ ಭಟ್ಕಳಕ್ಕೆ ಮಾರ್ಚ್ ೧೮ರಂದು ಮಂಗಳೂರು ಎಕ್ಸ್ ಪ್ರೆಸ್ ರೈಲಿನ S3 ಕೋಚ್ ಲೋಯರ್ ಬರ್ತ್ ನಲ್ಲಿ ಪ್ರಯಾಣ ಮಾಡಿದ್ದಾರೆ. ಇನ್ನು ಅದೇ ಬೋಗಿಯಲ್ಲಿ ಪ್ರಯಾಣ ಮಾಡಿದ್ದ ಬೇರೆ ಪ್ರಯಾಣಿಕರಿಗೂ ಹತ್ತಿರದ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ಮನವಿ ಮಾಡಿಕೊಂಡಿದ್ದು, 104, 080-4684600, 080 66692000 ಈ ಟೋಲ್ ಫ್ರೀ ದೂರವಾಣಿ ಸಂಖ್ಯೆಗಳಿಗೆ ಈ ಕೂಡಲೇ ಕರೆ ಮಾಡಬೇಕೆಂದು ಸರ್ಕಾರ ಕೇಳಿಕೊಂಡಿದೆ.

ಇನ್ನು ಮೊದಲೇ ಸರ್ಕಾರ ವಿದೇಶದಿಂದ ಬರುವವರ ಬಗ್ಗೆ ಗಮನ ಹರಿಸಿದ್ದರೆ ಈ ಪೇಚಾಟಕ್ಕೆ ಸಿಲುಕುವ ಸಾಧ್ಯತೆ ಇರುತ್ತಿರಲಿಲ್ಲ. ಈಗ ಆ ವ್ಯಕ್ತಿ ಎಲ್ಲೆಲ್ಲಿ ಪ್ರಯಾಣ ಮಾಡಿದ್ದಾನೋ, ಅದೆಷ್ಟು ಜನರಿಗೆ ಕೊರೋನಾ ಸೋಂಕು ಹರಡಿದೆಯೋ..ಇನ್ನು ಅವರೆನ್ನೆಲ್ಲಾ ಪತ್ತೆ ಹಚ್ಚಿ ಅವರ ಟ್ರಾವೆಲ್ ಹಿಸ್ಟರಿಯನ್ನ ಹುಡುಕುವುದರ ಒಳಗೆ ಮತ್ತಷ್ಟು ಜನರಿಗೆ ಈ ಮಹಾಮಾರಿ ಹರಡುತ್ತದೆಯೋ ಗೊತ್ತಿಲ್ಲ. ಇನ್ನು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..ಸಾಧ್ಯವಾದಷ್ಟು ನಿಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ ಶೇರ್ ಮಾಡಿ..ಯಾರಿಗೆ ಗೊತ್ತು, ಆ ಬಸ್ಸಿನಲ್ಲಿ ಯಾರೆಲ್ಲಾ ಪ್ರಯಾಣ ಮಾಡಿದ್ದಾರೋ ಏನೋ..