ಕುರಿ ಪ್ರತಾಪ್ ಇನ್ನಿಲ್ಲ ಅನ್ನೋ ಸುದ್ದಿ ವೈರಲ್ ! ಅಸಲಿಗೆ ನಡೆದಿದ್ದೇನು ಗೊತ್ತಾ ?

Cinema
Advertisements

ಸ್ನೇಹಿತರೇ, ಕೊ’ರೋನಾದ ಎರಡನೇ ಅಲೆಯಿಂದಾಗಿ ಜನರ ಜೀವನವೇ ದಿಕ್ಕೆಟ್ಟು ಹೋಗಿದೆ. ಎಲ್ಲಿ ನೋಡಿದ್ರೂ, ಯಾವ ಸುದ್ದಿ ನೋಡಿದ್ರೂ ಕೇವಲ ಸಾ’ವಿನದ್ದೇ ಸುದ್ದಿ. ಸಾಮಾನ್ಯ ಜನರು ಸೇರಿದಂತೆ ಸಿನಿಮಾ ಸೆಲೆಬ್ರೆಟಿಗಳು ಕೂಡ ಈ ಮಹಾಮಾ’ರಿ ಸೋಂಕಿಗೆ ಬ’ಲಿಯಾಗುತ್ತಿದ್ದಾರೆ. ಇದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಸುಳ್ಳು ಸುದ್ದಿಗಳು ಬೇರೆ. ಇಂತಹ ಸಂಕಷ್ಟದ ಸಮಯದಲ್ಲಿ ಬರುತ್ತಿರೋ ಕೆಲವೊಂದು ಸುದ್ದಿಗಳನ್ನ ನಂಬೋದು, ಬಿಡೋದಾ ಅನ್ನೋ ಅನುಮಾನ ಬೇರೆ. ಈಗ ಇದೆ ರೀತಿ ನೆನೆಯಷ್ಟೇ ಸೋಷಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿದ್ದ ಸುದ್ದಿಯೊಂದು ಶಾಕ್ ಆಗುವಂತೆ ಮಾಡಿತ್ತು..

[widget id=”custom_html-4″]

Advertisements

ಹೌದು, ಮಜಾ ಟಾಕೀಸ್ ಮೂಲಕ ಫೇಮಸ್ ಆಗಿ ಕುರಿ ಎಂದೇ ಖ್ಯಾತರಾಗಿರುವ ಕುರಿ ಪ್ರತಾಪ್, ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಗೂ ಹೋಗಿ ಬಂದವರು. ಇನ್ನು ಈಗಂತೂ ಕನ್ನಡ ಚಿತ್ರರಂಗದಲ್ಲಿ ಕಾಮಿಡಿ ನಟನಾಗಿ ತುಂಬಾ ಬ್ಯುಸಿಯಾಗಿರುವ ನಟ ಬೇರೆ. ಇನ್ನು ಕುರಿ ಪ್ರತಾಪ್ ಬಗ್ಗೆ ಕುರಿತಂತಯೇ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ವೈರಲ್ ಆಗಿದ್ದು, ಕುರಿ ಪ್ರತಾಪ್ ಇನ್ನಿಲ್ಲ ಎಂಬ ಸುದ್ದಿ ಬರುತ್ತಿದ್ದು, ಅದನ್ನ ನೋಡಿದ ಅನೇಕರು ಪ್ರತಾಪ್ ಗೆ ಕಾಲ್ ಮಾಡಿ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರೋ ಸುದ್ದಿಯ ಬಗ್ಗೆ ವಿಚಾರಿಸಿದ್ದಾರೆ. ಇನ್ನು ಇದರ ಬಗ್ಗೆ ಸ್ವತಃ ಕುರಿ ಪ್ರತಾಪ್ ಅವರೇ ಮಾತನಾಡಿ ಸ್ಪಷ್ಟನೆ ಕೊಟ್ಟಿದ್ದರೂ, ಫೋನ್ ಕಾಲ್ ಗಳು ಬರುತ್ತಲೇ ಇತ್ತು. ಇನ್ನು ಕೆಲವರು ಸಾರ್ ನೀವು ಲೈವ್ ಗೆ ಬಂದು ಮಾತನಾಡಿಬಿಡಿ ಎಂದು ಸಲಹೆ ಕೊಟ್ಟಿದ್ದರು.

[widget id=”custom_html-4″]

ನೂರಾರು ಫೋನ್ ಕಾಲ್ ಕೊಟ್ಟು ಸುಸ್ತಾಗಿದ್ದ ಕುರಿ ಪ್ರತಾಪ್ ಅವರು ಕೊನೆಗೆ ಲೈವ್ ಬಂದು, ಎಲ್ಲರಿಗೂ ನಿಮ್ಮ ಕುರಿ ಪ್ರತಾಪ್ ನಿಂದ ನಮಸ್ಕಾರ..ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಯಾರೋ ಏನೇನೋ ಸುದ್ದಿ ಹಾಕಿದ್ದಾರೆ. ನನಗೂ ಫೋನ್ ಕಾಲ್ ಗಳಿಗೆ ಸ್ಪಷ್ಟನೆ ಕೊಟ್ಟು ಸುಸ್ತಾಗಿಬಿಟ್ಟಿದೆ. ಅದಕ್ಕಾಗಿಯೇ ವೀಡಿಯೋ ಮೂಲಕ ಲೈವ್ ಬಂದಿದ್ದೇನೆ. ನೋಡಿ ನಾನೀಗ ನಿಮ್ಮ ಎದುರೇ ಮಾತನಾಡುತ್ತಿದ್ದೇನೆ. ನಾನು ಮನೆಯಲ್ಲೇ ಇದ್ದೇನೆ..ನನ್ನ ಆರೋಗ್ಯ ಕೂಡ ಚೆನ್ನಾಗಿದೆ. ನಾನು ಚೆನ್ನಾಗಿಯೇ ಇದ್ದೇನೆ.ಯಾರೋ ಗೊತ್ತಿಲ್ಲ ನನ್ನ ಬಗ್ಗೆ ಸುಳ್ಳು ಸುದ್ದಿಯನ್ನ ಹಾಕಿದ್ದಾರೆ. ಪಾಪ ಏನೋ ಹಾಕಿಬಿಟ್ಟಿದ್ದಾರೆ. ಸುಮ್ಮ ಸುಮ್ಮನೆ, ಆರೋಗ್ಯವಾಗಿ ಮನೆಯಲಿರೋರಿಗೂ ಸುಳ್ಳು ಸುದ್ದಿಗಳನ್ನ ಹಬ್ಬಿಸುಬಿಡುತ್ತಾರೆ. ಇನ್ನು ನೀವು ಮನೆಯಲ್ಲೇ ಇರೀ..ಅನಾವಶ್ಯಕವಾಗಿ ಹೊರಗಡೆ ಹೋಗಬೇಡಿ..ಎಂದು ಮೈಸೂರಿನ ತಮ್ಮ ಮನೆಯಿಂದಲೇ ಮಾತನಾಡಿದ್ದಾರೆ ಕುರಿ ಪ್ರತಾಪ್..